ಶೂಟಿಂಗ್​ನಲ್ಲಿ ಗಾಯಗೊಂಡ ಪ್ರಿಯಾಂಕಾ ಚೋಪ್ರಾ; ವಿದೇಶದಲ್ಲಿ ಭಾರತದ ಮನೆಮದ್ದು

ಪ್ರಿಯಾಂಕಾ ಚೋಪ್ರಾ ಅವರು ವಿದೇಶದಲ್ಲಿ ನೆಲೆಸಿದ್ದರೂ ಕೂಡ ಭಾರತದ ಸಂಪ್ರದಾಯ ಮರೆತಿಲ್ಲ. ಚಿತ್ರೀಕರಣದ ವೇಳೆ ಗಾಯಗೊಂಡಿರುವ ಅವರು ಭಾರತೀಯ ಶೈಲಿಯ ಮನೆಮದ್ದು ಪ್ರಯೋಗಿಸಿದ್ದಾರೆ. ಆ ಬಗ್ಗೆ ತಮ್ಮ ಅಭಿಮಾನಿಗಳಿಗೂ ಅವರು ಮಾಹಿತಿ ನೀಡಿದ್ದಾರೆ. ‘ದ ಬ್ಲಫ್​’, ‘ಹೆಡ್ಸ್​ ಆಫ್​ ಸ್ಟೇಟ್​’ ಮುಂತಾದ ಸಿನಿಮಾಗಳಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದಾರೆ.

ಶೂಟಿಂಗ್​ನಲ್ಲಿ ಗಾಯಗೊಂಡ ಪ್ರಿಯಾಂಕಾ ಚೋಪ್ರಾ; ವಿದೇಶದಲ್ಲಿ ಭಾರತದ ಮನೆಮದ್ದು
ಪ್ರಿಯಾಂಕಾ ಚೋಪ್ರಾ
Follow us
|

Updated on: Jun 27, 2024 | 7:00 PM

ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಅವರು ಈಗ ಹಾಲಿವುಡ್​​ನಲ್ಲಿ ಹೆಚ್ಚು ಬ್ಯುಸಿ ಆಗಿದ್ದಾರೆ. ವಿವಿಧ ದೇಶಗಳಿಗೆ ತೆರಳಿ ಶೂಟಿಂಗ್​ ಮಾಡುತ್ತಿದ್ದಾರೆ. ಅಲ್ಲದೇ, ಕುಟುಂಬದವರ ಜೊತೆಗೂ ಅವರು ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಬೇಸರದ ವಿಚಾರ ಏನೆಂದರೆ, ಶೂಟಿಂಗ್​ ಸಂದರ್ಭದಲ್ಲಿ ಪ್ರಿಯಾಂಕಾ ಚೋಪ್ರಾ ಅವರ ಕಾಲಿಗೆ ಗಾಯ ಆಗಿದೆ. ಅದರ ಫೋಟೋವನ್ನೂ ಅವರು ಅಪ್​ಲೋಡ್​ ಮಾಡಿದ್ದಾರೆ. ಈ ಗಾಯಕ್ಕೆ ಅವರು ಮನೆಮದ್ದು ಮಾಡಿದ್ದಾರೆ.

‘ದ ಬ್ಲಫ್​’ ಸಿನಿಮಾದ ಶೂಟಿಂಗ್​ನಲ್ಲಿ ಪ್ರಿಯಾಂಕಾ ಚೋಪ್ರಾ ಅವರು ನಟಿಸುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ಶೂಟಿಂಗ್​ ನಡೆಯುತ್ತಿದೆ. ಈ ಸಿನಿಮಾದಲ್ಲಿ ಸಖತ್​ ಆ್ಯಕ್ಷನ್​ ಸನ್ನಿವೇಶಗಳು ಇರಲಿವೆ. ಚಿತ್ರೀಕರಣದ ವೇಳೆ ಪ್ರಿಯಾಂಕಾ ಅವರ ಕಾಲಿಗೆ ಬಲವಾದ ಪೆಟ್ಟು ಬಿದ್ದಿದೆ. ಜ್ವರ ಮತ್ತು ಉರಿಯೂತ ಬರಬಾರದು ಎಂಬ ಉದ್ದೇಶದಿಂದ ಅವರು ಭಾರತದ ಮನೆಮದ್ದು ಪ್ರಯೋಗಿಸಿದ್ದಾರೆ.

ಪ್ರಿಯಾಂಕಾ ಚೋಪ್ರಾ ಅವರ ಪಾದಗಳಿಗೆ ಬೆಳ್ಳುಳ್ಳಿಯಿಂದ ಮಸಾಜ್​ ಮಾಡಲಾಗಿದೆ. ಇದರ ಪ್ರಯೋಜನ ಏನು ಎಂಬುದನ್ನು ಅವರು ಕಮೆಂಟ್​ ಬಾಕ್ಸ್​ನಲ್ಲಿ ತಿಳಿಸಿದ್ದಾರೆ. ನಟಿ ಆದಷ್ಟು ಬೇಗ ಗಾಯಗಳಿಂದ ಗುಣಮುಖರಾಗಲಿ ಎಂದು ಅವರ ಫ್ಯಾನ್ಸ್​ ಹಾರೈಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರ ಫ್ಯಾಮಿಲಿ ಫೋಟೋಗಳು ವೈರಲ್​ ಆಗಿವೆ. ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಸ್​, ಪತಿ ನಿಕ್​ ಜೋನಸ್​ ಜೊತೆ ಪ್ರಿಯಾಂಕಾ ಅವರು ಕಾಲ ಕಳೆಯುತ್ತಿದ್ದಾರೆ.

View this post on Instagram

A post shared by Priyanka (@priyankachopra)

ವಿಶ್ವಾದ್ಯಂತ ಪ್ರಿಯಾಂಕಾ ಚೋಪ್ರಾ ಅವರು ಪ್ರಸಿದ್ಧಿ ಪಡೆದಿದ್ದಾರೆ. ಮೊದಲು ಬಾಲಿವುಡ್​ನಲ್ಲಿ ಫೇಮಸ್​ ಆಗಿದ್ದ ಅವರು ನಂತರ ಹಾಲಿವುಡ್​ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಇಂಗ್ಲಿಷ್​ ವೆಬ್​ ಸರಣಿಗಳಲ್ಲೂ ಅವರು ಅಭಿನಯಿಸಿದ್ದಾರೆ. ಮತ್ತೆ ಅವರು ಬಾಲಿವುಡ್​ ಸಿನಿಮಾ ಮಾಡಲಿ ಎಂಬುದು ಅವರ ಅಭಿಮಾನಿಗಳ ಬಯಕೆ. ಆ ಬಗ್ಗೆ ಇನ್ನಷ್ಟೇ ಅಪ್​ಡೇಟ್​ ಸಿಗಬೇಕಿದೆ.

ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ ಮೈದುನನಿಗೆ ಕ್ಯಾನ್ಸರ್​: ಚರ್ಮದ ಕ್ಯಾನ್ಸರ್ ಬಗ್ಗೆ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ ಕೆವಿನ್​

‘ದ ಬ್ಲಫ್​’ ಮಾತ್ರವಲ್ಲದೇ ಹಾಲಿವುಡ್​ನ ‘ಹೆಡ್ಸ್​ ಆಫ್​ ಸ್ಟೇಟ್’ ಸಿನಿಮಾದಲ್ಲೂ ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದಾರೆ. ಅದರ ಜೊತೆಗೆ ‘ಸಿಟಾಡೆಲ್​’ ಎರಡನೇ ಸೀಸನ್​ ಕೂಡ ಅವರ ಕೈಯಲ್ಲಿದೆ. ಹೊಸ ಹೊಸ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ