41ರ ಪ್ರಾಯದ ಪ್ರಿಯಾಂಕಾ ಚೋಪ್ರಾ ಎಷ್ಟು ಫಿಟ್​ ಆಗಿದ್ದಾರೆ ನೋಡಿ..

ಹೆಣ್ಣು ಮಗುವಿನ ಆರೈಕೆಯಲ್ಲಿ ಬ್ಯುಸಿ ಆಗಿರುವ ಪ್ರಿಯಾಂಕಾ ಚೋಪ್ರಾ ಅವರು ಫಿಟ್ನೆಸ್​ ಬಗ್ಗೆಯೂ ಗಮನ ನೀಡಿದ್ದಾರೆ. ಈಗ ಅವರಿಗೆ 41 ವರ್ಷ ವಯಸ್ಸು. ಈ ಪ್ರಾಯದಲ್ಲಿ ಅವರು ಹದಿಹರೆಯದ ಹುಡುಗಿಯರೂ ನಾಚುವಂತೆ ಫಿಟ್ನೆಸ್​ ಕಾಪಾಡಿಕೊಂಡಿದ್ದಾರೆ. ಅವರ ಹೊಸ ಫೋಟೋ ವೈರಲ್​ ಆಗಿದೆ. ಅದನ್ನು ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

41ರ ಪ್ರಾಯದ ಪ್ರಿಯಾಂಕಾ ಚೋಪ್ರಾ ಎಷ್ಟು ಫಿಟ್​ ಆಗಿದ್ದಾರೆ ನೋಡಿ..
ಪ್ರಿಯಾಂಕಾ ಚೋಪ್ರಾ
Follow us
ಮದನ್​ ಕುಮಾರ್​
|

Updated on: Feb 29, 2024 | 1:23 PM

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಈಗ ಬಾಲಿವುಡ್​ ಸಿನಿಮಾಗಳಿಂದ ದೂರ ಉಳಿದುಕೊಂಡಿದ್ದಾರೆ. ಹಾಲಿವುಡ್​ ಪ್ರಾಜೆಕ್ಟ್​ಗಳಲ್ಲೇ ಅವರು ಬ್ಯುಸಿ ಆಗಿದ್ದಾರೆ. ಇಷ್ಟು ದಿನ ಅವರು ನಟನೆಯಿಂದ ಬ್ರೇಕ್​ ತೆಗೆದುಕೊಂಡಿದ್ದರು. ಮಗಳು ಮಾಲ್ತಿ ಮೇರಿ ಜೋಪ್ರಾ ಜೋನಸ್​ (Malti Marie Chopra Jonas) ಆರೈಕೆಯಲ್ಲಿ ಪ್ರಿಯಾಂಕಾ ಚೋಪ್ರಾ ತೊಡಗಿಕೊಂಡಿದ್ದಾರೆ. ಅದರ ನಡುವೆಯೇ ಸಿನಿಮಾದ ಕೆಲಸಗಳಿಗೆ ಅವರು ಸಮಯ ನೀಡುತ್ತಿದ್ದಾರೆ. ಈಗ ಅವರು ಫಿಟ್ನೆಸ್​ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಜಿಮ್​ನಲ್ಲಿ ತಾವು ಕ್ಲಿಕ್ಕಿಸಿಕೊಂಡ ಫೋಟೋವನ್ನು (Priyanka Chopra Photo) ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರ ಫಿಟ್ನೆಸ್​ ಕಂಡು ಅಭಿಮಾನಿಗಳು ವಾವ್​ ಎನ್ನುತ್ತಿದ್ದಾರೆ.

ಪ್ರಿಯಾಂಕಾ ಚೋಪ್ರಾ ಅವರು 2022ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ತಾಯಿ ಆದ ಬಳಿಕ ಫಿಟ್ನೆಸ್​ ಕಾಪಾಡಿಕೊಳ್ಳುವುದು ತುಸು ಕಷ್ಟದ ಕೆಲಸ. ಪ್ರಿಯಾಂಕಾ ಚೋಪ್ರಾ ಅವರು ನಟಿ ಆದ್ದರಿಂದ ಫಿಟ್ನೆಸ್​ ಕಡೆಗೆ ಗಮನ ಹರಿಸಲೇಬೇಕು. ಹಾಗಾಗಿ ಅವರು ಹಗಲಿರುಳು ಜಿಮ್​ನಲ್ಲಿ ಕಸರತ್ತು ನಡೆಸಿದ್ದಾರೆ. ಮತ್ತೆ ಕೆಲಸಕ್ಕೆ ಮರಳಲು ಸಿದ್ಧವಾಗಿರುವ ಅವರು ಜಿಮ್​ ಫೋಟೋ ಹಂಚಿಕೊಂಡು ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರಿಗೆ ಈಗ 41 ವರ್ಷ ವಯಸ್ಸು.

ಅಮೆರಿಕದ ಪಾಪ್​ ಸಿಂಗರ್​ ನಿಕ್​ ಜೋನಸ್​ ಅವರನ್ನು ಪ್ರಿಯಾಂಕಾ ಚೋಪ್ರಾ ಅವರು ಮದುವೆ ಆದ ಬಳಿಕ ಅಮೆರಿಕದಲ್ಲೇ ಸೆಟ್ಲ್​ ಆಗಿದ್ದಾರೆ. ಹಾಗಾಗಿ ಅವರು ಭಾರತಕ್ಕೆ ಬರುವುದು ಅಪರೂಪ ಆಗಿದೆ. ಯಾವುದಾದರೂ ವಿಶೇಷ ಸಂದರ್ಭ ಇದ್ದರೆ ಮಾತ್ರ ಅವರು ಸ್ವದೇಶಕ್ಕೆ ಬರುತ್ತಾರೆ. ಉಳಿದಂತೆ ಅಮೆರಿಕದಲ್ಲೇ ಅವರು ಹಾಯಾಗಿ ಇದ್ದಾರೆ. ಹಾಲಿವುಡ್​ನ ವಿವಿಧ ಸಮಾರಂಭ, ಪಾರ್ಟಿಗಳಲ್ಲಿ ಅವರು ಭಾಗಿ ಆಗುತ್ತಿದ್ದಾರೆ.

ಇದನ್ನೂ ಓದಿ: ‘ಗ್ಲೋಬಲ್ ಸ್ಟಾರ್’ ಪ್ರಿಯಾಂಕಾ ಚೋಪ್ರಾಗೆ ಟಾಂಗ್ ಕೊಟ್ಟ ದೀಪಿಕಾ ಪಡುಕೋಣೆ

ಪ್ರಿಯಾಂಕಾ ಚೋಪ್ರಾ ಅವರು ಮತ್ತೆ ಬಾಲಿವುಡ್​ನಲ್ಲಿ ಸಿನಿಮಾ ಮಾಡಲಿ ಎಂಬುದು ಅಭಿಮಾನಿಗಳ ಆಸೆ. ಆದರೆ ಅದು ಸದ್ಯಕ್ಕಂತೂ ಈಡೇರುವಂತೆ ಕಾಣುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಅವರು ಬಾಲಿವುಡ್​ನಲ್ಲಿ ಯಾವುದೇ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ. ಹಿಂದಿ ಚಿತ್ರರಂಗದಲ್ಲಿನ ವ್ಯವಸ್ಥೆ ಬಗ್ಗೆ ಅವರು ನೀಡಿದ ಕೆಲವು ಹೇಳಿಕೆಗಳು ವಿವಾದಕ್ಕೂ ಕಾರಣ ಆಗಿದ್ದುಂಟು. ಆದ್ದರಿಂದ ಮತ್ತೆ ಅವರು ಬಾಲಿವುಡ್​ನಲ್ಲಿ ಸಿನಿಮಾ ಮಾಡುವುದು ಸದ್ಯಕ್ಕಂತೂ ಅನುಮಾನ ಎನ್ನಲಾಗಿದೆ.

ಇದನ್ನೂ ಓದಿ: ಆಸ್ಕರ್​ಗೆ ನಾಮಿನೇಟ್ ಆಗಿರುವ ಭಾರತೀಯ ಡಾಕ್ಯುಮೆಂಟರಿಗೆ ಪ್ರಿಯಾಂಕಾ ಚೋಪ್ರಾ ಬೆಂಬಲ

ನಿಕ್​ ಜೋನಸ್​ ಮತ್ತು ಪ್ರಿಯಾಂಕಾ ಚೋಪ್ರಾ ಅವರ ನಡುವೆ ವಯಸ್ಸಿನ ಅಂತರ ಜಾಸ್ತಿ ಇದೆ. ಪ್ರಿಯಾಂಕಾಗಿಂತ ನಿಕ್​ ಜೋನಸ್​ ಅವರು 10 ವರ್ಷ ಚಿಕ್ಕವರು. ನಿಕ್ ಜೋಸನ್​ ಅವರಿಗೆ ಈಗಿನ್ನೂ 31ರ ಪ್ರಾಯ. ಅನೇಕ ವಿಚಾರಗಳಲ್ಲಿ ಈ ಜೋಡಿಯ ನಡುವೆ ಭಿನ್ನತೆ ಇದೆ. ಆದರೂ ಕೂಡ ಇಬ್ಬರೂ ಅನ್ಯೋನ್ಯವಾಗಿ ಸಂಸಾರ ನಡೆಸುತ್ತಿದ್ದಾರೆ. ಮಗಳಿಗಾಗಿ ಅವರು ಹೆಚ್ಚು ಸಮಯ ಮೀಸಲಿಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್