AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗ್ಲೋಬಲ್ ಸ್ಟಾರ್’ ಪ್ರಿಯಾಂಕಾ ಚೋಪ್ರಾಗೆ ಟಾಂಗ್ ಕೊಟ್ಟ ದೀಪಿಕಾ ಪಡುಕೋಣೆ

Deepika Padukone: ಹಾಲಿವುಡ್​ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಭಾರತವನ್ನು ಬಿಟ್ಟು ಹೋದ ಪ್ರಿಯಾಂಕಾ ಚೋಪ್ರಾಗೆ ಪರೋಕ್ಷವಾಗಿ ದೀಪಿಕಾ ಪಡುಕೋಣೆ ಟಾಂಗ್ ನೀಡಿದ್ದಾರೆ.

‘ಗ್ಲೋಬಲ್ ಸ್ಟಾರ್’ ಪ್ರಿಯಾಂಕಾ ಚೋಪ್ರಾಗೆ ಟಾಂಗ್ ಕೊಟ್ಟ ದೀಪಿಕಾ ಪಡುಕೋಣೆ
ಮಂಜುನಾಥ ಸಿ.
|

Updated on: Nov 15, 2023 | 4:49 PM

Share

ಸ್ಟಾರ್ ನಟರ ಸ್ಟಾರ್ ವಾರ್​ಗಿಂತಲೂ ನಟಿಯರ ನಡೆಯುವ ‘ಜಲಸಿ ವಾರ್’ ಹೆಚ್ಚು ಕುತೂಹಲಕರಿಯಾಗಿರುತ್ತದೆ. ಎಲ್ಲ ಚಿತ್ರರಂಗಗಳಲ್ಲಿಯೂ ನಾಯಕಿಯರ ನಡುವೆ ಈ ‘ಜಲಸಿ ವಾರ್’ ಸಾಮಾನ್ಯ. ಇತ್ತೀಚೆಗೆ ಅವೆಲ್ಲ ತುಸು ಕಡಿಮೆಯಾಗಿದೆಯಾದರೂ ಆಗಾಗ ಅಲ್ಲಲ್ಲಿ ಪರೋಕ್ಷವಾಗಿ ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುತ್ತಲೇ ಇರುತ್ತಾರೆ. ಇದೀಗ ನಟಿ ದೀಪಿಕಾ ಪಡುಕೋಣೆ, ನಟಿ ಪ್ರಿಯಾಂಕಾ ಚೋಪ್ರಾಗೆ (Priyanka Chopra) ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಪ್ರಿಯಾಂಕಾ ಚೋಪ್ರಾ, ಬಾಲಿವುಡ್​ ಅನ್ನು ತ್ಯಜಿಸಿ ಇದೀಗ ಹಾಲಿವುಡ್​ನಲ್ಲಿ ಮಿಂಚುತ್ತಿದ್ದಾರೆ. ಇಂಗ್ಲೀಷ್ ಸಿನಿಮಾಗಳಲ್ಲಿ ಒಂದರ ಹಿಂದೊಂದು ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಹಾಲಿವುಡ್​ನಲ್ಲಿ ವೃತ್ತಿ ಕಟ್ಟಿಕೊಳ್ಳಲೆಂದು 2016 ರ ಸಮಯದಲ್ಲಿಯೇ ಭಾರತವನ್ನು ಬಿಟ್ಟು ತೆರಳಿದ್ದರು. ಈಗ ಅವರು ಲಾಸ್ ಏಂಜಲ್ಸ್​ನಲ್ಲಿಯೇ ನೆಲೆಸಿದ್ದಾರೆ. ಭಾರತಕ್ಕೆ ಬರುವುದು ಅಪರೂಪಕ್ಕೊಮ್ಮೆ.

ಇತ್ತೀಚೆಗೆ ಜನಪ್ರಿಯ ವೋಗ್ ಮ್ಯಾಗಜೈನ್​ಗೆ ಸಂದರ್ಶನ ನೀಡಿರುವ ನಟಿ ದೀಪಿಕಾ ಪಡುಕೋಣೆ, ವೃತ್ತಿಯಲ್ಲಿ ಇನ್ನೂ ಹೆಚ್ಚಿನದ್ದನ್ನು ಸಾಧಿಸಲು ಹಾಲಿವುಡ್ ಸೇರಿದಂತೆ ಬೇರೆ-ಬೇರೆ ಸಿನಿಮಾ ರಂಗಗಳಿಗೆ ಹೋಗುವ ಪ್ರಯತ್ನ ಮಾಡುತ್ತೀರ? ಎಂಬ ಪ್ರಶ್ನೆಗೆ ಉತ್ತರಿಸಿರುವ ದೀಪಿಕಾ ಪಡುಕೋಣೆ, ‘ಗ್ಲೋಬಲ್ ಸ್ಟಾರ್ ಆಗಲು ಭಾರತವನ್ನು ಬಿಟ್ಟು ಹೋಗಬೇಕು ಎಂದೇನೂ ಇಲ್ಲ” ಎಂದಿದ್ದಾರೆ. ಆ ಮೂಲಕ ಗ್ಲೋಬಲ್ ಸ್ಟಾರ್ ಎನಿಸಿಕೊಳ್ಳಲು ಭಾರತ ಬಿಟ್ಟು ಹೋದ ಪ್ರಿಯಾಂಕಾ ಚೋಪ್ರಾಗೆ ಟಾಂಗ್ ನೀಡಿದ್ದಾರೆ.

”ವಿಶ್ವಮಟ್ಟದಲ್ಲಿ ಗುರುತು ಮೂಡಿಸಲು ನಾನೇಕೆ ನನ್ನ ಲಗೇಜು ಎತ್ತಿಕೊಂಡು ದೇಶ ಬಿಟ್ಟು ಹೊರಡಬೇಕು. ನನ್ನ ಮಾಡೆಲಿಂಗ್ ದಿನಗಳಲ್ಲಿಯೇ ನನಗೆ ವಿದೇಶಗಳಿಂದ ಅವಕಾಶಗಳು ಬಂದಿತ್ತು. ಆದರೆ ನಾನು ಹೋಗಲಿಲ್ಲ. ಆಗಲೇ ಹಲವರು ನೀನು ಪ್ಯಾರಿಸ್​ನಲ್ಲಿರಬೇಕಿತ್ತು, ಮಿಲಾನ್​ಗೆ ಹೋಗಬೇಕು, ಲಂಡನ್​ಗೆ ಹೋದರೆ ಒಳ್ಳೆಯ ಭವಿಷ್ಯವಿದೆ ಎಂದೆಲ್ಲ ಹೇಳಿದ್ದರು. ಆದರೆ ಅದ್ಯಾವುದು ನನ್ನ ಮನೆ ಆಗಿರಲಿಲ್ಲ. ನನ್ನ ಮನೆ ಭಾರತ” ಎಂದು ದಿಟ್ಟವಾಗಿ ಹೇಳಿದ್ದಾರೆ ದೀಪಿಕಾ ಪಡುಕೋಣೆ.

ಪ್ರಿಯಾಂಕಾ ಚೋಪ್ರಾ, ಬಾಲಿವುಡ್​ನಲ್ಲಿನ ರಾಜಕೀಯಗಳಿಂದ ಬೇಸತ್ತು ಹಾಲಿವುಡ್​ನಲ್ಲಿ ಅವಕಾಶ ಅರಸಿ ಭಾರತವನ್ನು ಬಿಟ್ಟಿದ್ದಾಗಿ ಹಿಂದೊಮ್ಮೆ ಹೇಳಿಕೊಂಡಿದ್ದರು. ದೀಪಿಕಾ ಪಡುಕೋಣೆ ಭಾರತದಲ್ಲಿಯೇ ಇದ್ದು ‘ತ್ರಿಬಲ್ ಎಕ್ಸ್’ ಅಂಥಹಾ ಹಾಲಿವುಡ್ ಸಿನಿಮಾ ಅವಕಾಶವನ್ನು ಬಾಚಿಕೊಂಡರು. ಈಗಂತೂ ಹಲವು ಭಾರತದ ನಟ-ನಟಿಯರು ಹಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಾ ಬರುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ