AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಿಯಾಂಕಾ ಚೋಪ್ರಾ ಧರಿಸಿರುವ ಕೈಗಡಿಯಾರದ ಬೆಲೆ ಎಷ್ಟು ಗೊತ್ತೆ?

Priyanka Chopra: ಮುಂಬೈನಲ್ಲಿ ನಡೆದ ಮಾಮಿ ಸಿನಿಮಾ ಉತ್ಸವದ ಉದ್ಘಾಟನೆಗೆ ಆಗಮಿಸಿದ್ದ ಪ್ರಿಯಾಂಕಾ ಚೋಪ್ರಾ ಧರಿಸಿದ್ದ ಕೈಗಡಿಯಾರ ಬಹಳ ಗಮನ ಸೆಳೆಯುತ್ತಿದೆ. ಆ ವಾಚಿನ ಬೆಲೆ ಎಷ್ಟು ಗೊತ್ತೆ?

ಪ್ರಿಯಾಂಕಾ ಚೋಪ್ರಾ ಧರಿಸಿರುವ ಕೈಗಡಿಯಾರದ ಬೆಲೆ ಎಷ್ಟು ಗೊತ್ತೆ?
ಮಂಜುನಾಥ ಸಿ.
|

Updated on: Oct 29, 2023 | 3:58 PM

Share

ನಟಿ ಪ್ರಿಯಾಂಕಾ ಚೋಪ್ರಾ ತಮಿಳು ಸಿನಿಮಾದಿಂದ ನಟನೆ ಆರಂಭಿಸಿ, ಬಾಲಿವುಡ್​ನ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡವರು. ಆ ಬಳಿಕ ಬಾಲಿವುಡ್​ನಿಂದ ಹಾಲಿವುಡ್ ಕಡೆಗೆ ಹಾರಿ ಅಲ್ಲಿಯೂ ಯಶಸ್ಸು ಕಾಣುತ್ತಿದ್ದಾರೆ. ಭಾರತದ ಅತ್ಯಂತ ಶ್ರೀಮಂತ ನಟಿಯರಲ್ಲಿ ಪ್ರಿಯಾಂಕಾ ಚೋಪ್ರಾ ಟಾಪ್ ಐದರಲ್ಲಿ ಬರುತ್ತಾರೆ. ನಿಕ್ ಜೋನಸ್ ಅನ್ನು ಮದುವೆಯಾದ ಬಳಿಕ ವಿದೇಶದಲ್ಲೇ ನೆಲೆಸಿರುವ ನಟಿ ಪ್ರಿಯಾಂಕಾ, ಇತ್ತೀಚೆಗಷ್ಟೆ ಭಾರತಕ್ಕೆ ಬಂದಿದ್ದಾರೆ.

ಜಿಯೋ ಮಾಮಿ ಸಿನಿಮಾ ಉತ್ಸವಕ್ಕೆ ಆಗಮಿಸಿದ್ದ ನಟಿ ಪ್ರಿಯಾಂಕಾ ಚೋಪ್ರಾ ಭಿನ್ನವಾದ ಡ್ರಸ್​ ಧರಿಸಿ ರೆಡ್ ಕಾರ್ಪೆಟ್ ಮೇಲೆ ನಡೆದು ಗಮನ ಸೆಳೆದರು. ಈ ವೇಳೆ ಪ್ರಿಯಾಂಕಾ ಧರಿಸಿದ್ದ ಡಿಸೈನರ್ ಬಟ್ಟೆಯ ಜೊತೆಗೆ ಪ್ರಿಯಾಂಕಾ ಧರಿಸಿದ್ದ ಕೈಗಡಿಯಾರ ಸಹ ಸಖತ್ ಗಮನ ಸೆಳೆದಿದೆ. ಅಂದಹಾಗೆ ಪ್ರಿಯಾಂಕಾ ಧರಿಸಿದ್ದ ಕೈಗಡಿಯಾರದ ಬೆಲೆ ಸಾವಿರ ಅಥವಾ ಲಕ್ಷಗಳಲ್ಲ ಬದಲಿಗೆ ಕೋಟಿಗಳಲ್ಲಿದೆ ಅದರ ಬೆಲೆ.

ಮಾಮಿ ಸಿನಿಮಾ ಉತ್ಸವಕ್ಕೆ ಬಂದಿದ್ದ ನಟಿ ಪ್ರಿಯಾಂಕಾ ಚೋಪ್ರಾ ಸಂಪೂರ್ಣ ಕೈಗಡಿಯಾರವೂ ಅಲ್ಲದ, ಸುಂದರವಾದ ಆಭರಣದಂತೆ ಕಾಣುತ್ತಿದ್ದ ಭಿನ್ನವಾದ ಕೈಗಡಿಯಾದ ಧರಿಸಿದ್ದರು. ಪ್ರಿಯಾಂಕಾ ಚೋಪ್ರಾ ಧರಿಸಿದ್ದು ಬಲ್ಗಾರಿ ಬ್ರ್ಯಾಂಡ್​ನ ವಾಚ್. ಆ ಕೈಗಡಿಯಾರವನ್ನು ಚಿನ್ನ ಮತ್ತು ವಜ್ರ ಬಳಸಿ ಮಾಡಲಾಗಿದೆ. ಈ ಕೈಗಡಿಯಾದ ಬೆಲೆ ಬರೋಬ್ಬರಿ 1.50 ಕೋಟಿ ರೂಪಾಯಿಗಳು.

ಪ್ರಿಯಾಂಕಾ ಧರಿಸಿದ್ದ ಬಟ್ಟೆಯೂ ಸಹ ಸಾಮಾನ್ಯದ್ದಾಗಿರಲಿಲ್ಲ. ಟೋನಿ ವಾರ್ಡ್ ಡಿಸೈನ್ ಮಾಡಿದ ಗೌನ್ ಮಾದರಿಯ ಉಡುಗೆಯನ್ನು ಪ್ರಿಯಾಂಕಾ ಧರಿಸಿದ್ದರು. ಅವರ ಬಟ್ಟೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಮೆಚ್ಚುಗೆ ಸಹ ವ್ಯಕ್ತವಾಗಿದೆ.

ಇದನ್ನೂ ಓದಿ:ಭಾರತಕ್ಕೆ ಬಂದಿದ್ದಾರೆ ಪ್ರಿಯಾಂಕಾ ಚೋಪ್ರಾ: ಕಾರಣವೇನು?

ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ಬಾಲಿವುಡ್​ನ ಹಲವು ನಟಿಯರಿಗೆ ಹೋಲಿಸಿದರೆ ದೊಡ್ಡ ಸಂಭಾವನೆಯನ್ನೇ ಪಡೆಯುತ್ತಾರೆ. ಹಾಗಾಗಿ ಅವರ ಜೀವನ ಶೈಲಿಯೂ ಸಹ ಐಶಾರಾಮಿಯಾಗಿಯೇ ಇದೆ. ನಟನೆಯ ಮೂಲಕ ಮಾತ್ರವೇ ಅಲ್ಲದೆ ಸ್ವತಃ ಉದ್ಯಮಿಯಾಗಿರುವ ಪ್ರಿಯಾಂಕಾ ಚೋಪ್ರಾ, ಹಲವು ಉದ್ಯಮಗಳಲ್ಲಿ ಹಣ ತೊಡಗಿಸಿದ್ದಾರೆ. ಹೋಟೆಲ್, ಆನ್​ಲೈನ್ ಶಾಪಿಂಗ್ ಸೈಟ್, ಫ್ಯಾಷನ್ ಬ್ರ್ಯಾಂಡ್, ಮುಂಬೈನಲ್ಲಿ ರಿಯಲ್ ಎಸ್ಟೇಟ್, ಸಿನಿಮಾ ನಿರ್ಮಾಣ ಸಂಸ್ಥೆಯ ಮೇಲೂ ಸಹ ಪ್ರಿಯಾಂಕಾ ಬಂಡವಾಳ ತೊಡಗಿಸಿದ್ದಾರೆ. ಹಾಗಾಗಿ ಐಶಾರಾಮಿ ವಸ್ತುಗಳ ಖರೀದಿ ಮತ್ತು ಬಳಕೆ ಪ್ರಿಯಾಂಕಾ ಚೋಪ್ರಾಗೆ ಬಹಳ ಸಾಮಾನ್ಯ.

ಪ್ರಿಯಾಂಕಾ ಚೋಪ್ರಾ ನಟಿಸಿರುವ ಆಕ್ಷನ್ ವೆಬ್ ಸರಣಿ ‘ಸಿಟಾಡೆಲ್’ ಇತ್ತೀಚೆಗಷ್ಟೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿ ಹಿಟ್ ಆಯ್ತು. ಇದೀಗ ‘ಹೆಡ್ಸ್ ಆಫ್ ಸ್ಟೇಟ್’ ಸಿನಿಮಾದಲ್ಲಿ ನಟಿಸುತ್ತಿದ್ದು ಕೆಲವೇ ತಿಂಗಳಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ