Hair Care: ನಟಿ ಸಾಯಿ ಪಲ್ಲವಿಯ ಉದ್ದ ಕೂದಲಿನ ರಹಸ್ಯವೇನು?

2015ರಲ್ಲಿ ತೆರೆಕಂಡ ಪ್ರೇಮಂ ಸಿನಿಮಾ ಮೂಲಕ ಮನೆಮಾತಾದ ನಟಿ ಸಾಯಿಪಲ್ಲವಿ ತಮ್ಮ ನೈಜ ಸೌಂದರ್ಯ ಮತ್ತು ಸರಳ ಜೀವನಶೈಲಿಯಿಂದ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಸಾಯಿಪಲ್ಲವಿಯ ಮೇಕಪ್​ರಹಿತ ಮುಖ, ಉದ್ದವಾದ ಗುಂಗುರು ಕೂದಲಿಗೆ ಅವರ ಅಭಿಮಾನಿಗಳು ಮನಸೋತಿದ್ದಾರೆ. ಅವರ ದಟ್ಟವಾದ ಕೂದಲ ರಹಸ್ಯ ಇಲ್ಲಿದೆ.

Hair Care: ನಟಿ ಸಾಯಿ ಪಲ್ಲವಿಯ ಉದ್ದ ಕೂದಲಿನ ರಹಸ್ಯವೇನು?
ಸಾಯಿ ಪಲ್ಲವಿ Image Credit source: facebook
Follow us
|

Updated on:Jan 30, 2024 | 5:21 PM

ಸಾಯಿ ಪಲ್ಲವಿ ಮಲಯಾಳಂ, ತೆಲುಗು ಚಿತ್ರರಂಗದ ಜನಪ್ರಿಯ ನಟಿ. ಪ್ರೇಮಂ ಸಿನಿಮಾದಲ್ಲಿ ಸಾಯಿ ಪಲ್ಲವಿಯನ್ನು ನೋಡಿದವರು ಆಕೆಯ ಗುಂಗಿನಿಂದ ಹೊರಗೆ ಬರಲು ಸಾಧ್ಯವೇ ಇಲ್ಲ. ತಮ್ಮ ನೈಜ ನಟನೆ, ಮುದ್ದಾದ ನಗುವಿನಿಂದ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿರುವ ಸಾಯಿಪಲ್ಲವಿ ನ್ಯಾಚುರಲ್ ಸ್ಟಾರ್ ಎಂದು ಹೆಸರು ಪಡೆದವರು. ತೀರಾ ಮೇಕಪ್, ಸ್ಟಾರ್ ಎಂಬ ಅಹಂ, ಅತಿಯಾದ ಸ್ಟೈಲ್ ಯಾವುದೂ ಇಲ್ಲದೆ ಪಕ್ಕದ್ಮನೆ ಹುಡುಗಿಯಂತೆ ಕಾಣುವುದರಿಂದ ಸಾಯಿ ಪಲ್ಲವಿ (Sai Pallavi) ಸಾಕಷ್ಟು ಯುವಕರ ಮನಸು ಗೆದ್ದಿದ್ದಾರೆ. ನ್ಯಾಚುರಲ್ ಲುಕ್​ನಿಂದಲೇ ಫೇಮಸ್ ಆಗಿರುವ ಸಾಯಿ ಪಲ್ಲವಿಯ ಕೂದಲು ನೋಡಿದ ಯುವತಿಯರು ತಮಗೂ ಈ ರೀತಿಯ ಉದ್ದವಾದ, ಸೊಂಪಾದ ಕೂದಲು ಇರಬಾರದಿತ್ತಾ ಎಂದುಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಸಾಯಿಪಲ್ಲವಿಯ ಕೂದಲಿನ ಆರೋಗ್ಯದ ರಹಸ್ಯವೇನು ಗೊತ್ತಾ?

ಸಾಯಿ ಪಲ್ಲವಿ ತನ್ನ ಉದ್ದವಾದ, ಗುಂಗುರು ಕೂದಲಿಂದ ಮನ ಸೆಳೆಯುತ್ತಾರೆ. ಹೆಚ್ಚು ರಾಸಾಯನಿಕ ಉತ್ಪನ್ನಗಳನ್ನು ಬಳಸದೆ, ಕೂದಲಿನ ಮೇಲೆ ಹೆಚ್ಚು ಪ್ರಯೋಗಗಳನ್ನು ಮಾಡದೆ ನ್ಯಾಚುರಲ್ ಆಗಿ ಕೂದಲಿನ ಆರೈಕೆ ಮಾಡುವುದನ್ನೇ ಇಷ್ಟಪಡುವ ಸಾಯಿಪಲ್ಲವಿ ತಮ್ಮ ಕೂದಲಿನ ಆರೋಗ್ಯದ ಬಗ್ಗೆ ಹೆಚ್ಚಿ ಗಮನ ನೀಡುತ್ತಾರೆ. ನ್ಯಾಚುರಲ್ ಲುಕ್​ನಿಂದ ಜನಪ್ರಿಯತೆ ಪಡೆದಿರುವ ಸಾಯಿಪಲ್ಲವಿ ಇಂದಿನ ಸಾಕಷ್ಟು ನಟಿಯರಿಗೆ ಹಾಗೂ ಯುವತಿಯರಿಗೆ ಮಾದರಿಯಾಗಿದ್ದಾರೆ.

ಇದನ್ನೂ ಓದಿ: Hair Care: ಕೂದಲು ದಟ್ಟವಾಗಿ ಬೆಳೆಯಬೇಕಾ?; ಶುಂಠಿ ರಸವನ್ನು ಈ ರೀತಿ ಬಳಸಿ

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸಾಯಿಪಲ್ಲವಿ ತಮ್ಮ ಕೂದಲಿನ ಆರೈಕೆಯ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಅವರು ಆರೋಗ್ಯಕರ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ. ಯಾವುದೇ ಜಂಕ್ ಫುಡ್ ಅಥವಾ ಕರಿದ ಆಹಾರವನ್ನು ಸೇವಿಸುವುದನ್ನು ಅವಾಯ್ಡ್ ಮಾಡುತ್ತಾರೆ. ಕೂದಲಿನ ಆರೋಗ್ಯ ಮತ್ತು ನೈಸರ್ಗಿಕ ಹೊಳಪನ್ನು ಕಾಪಾಡಿಕೊಳ್ಳಲು ವಾರಕ್ಕೆ 3 ಬಾರಿ ಕೂದಲನ್ನು ತೊಳೆಯುತ್ತಾರೆ.

ಸಾಯಿ ಪಲ್ಲವಿ ಬಳಸುವ ಶಾಂಪೂ, ಕಂಡಿಷನರ್ ಅಥವಾ ಸೋಪ್‌ನಂತಹ ಎಲ್ಲ ಉತ್ಪನ್ನಗಳೂ ರಾಸಾಯನಿಕಮುಕ್ತವಾಗಿರುತ್ತವೆ. ಆದಷ್ಟೂ ನೈಸರ್ಗಿಕ ವಸ್ತುಗಳನ್ನೇ ಬಳಸಲು ಅವರು ಇಷ್ಟಪಡುತ್ತಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಅಲೋವೆರಾ ಜೆಲ್ ಬಳಸುವ ಸಾಯಿಪಲ್ಲವಿ ಅದೇ ತಮ್ಮ ದಟ್ಟವಾದ ಕೂದಲನ್ನು ಆರೋಗ್ಯಕರವಾಗಿಟ್ಟಿದೆ ಎನ್ನುತ್ತಾರೆ.

ಇದನ್ನೂ ಓದಿ: ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವ 8 ದೇಸಿ ಗಿಡಮೂಲಿಕೆಗಳಿವು

ಹಾಗಂತ ಸಾಯಿ ಪಲ್ಲವಿ ಅಂಗಡಿಗಳಲ್ಲಿ ಸಿಗುವ ಅಲೋವೆರಾ ಜೆಲ್ ಬಳಸುವುದಿಲ್ಲ. ಅದರ ಬದಲಾಗಿ ತಮ್ಮ ಮನೆಯಲ್ಲೇ ಇರುವ ಅಲೋವೆರಾ ಗಿಡದಿಂದ ಜೆಲ್ ತೆಗೆದು ಅದನ್ನು ಕೂದಲಿಗೆ ಹಚ್ಚುತ್ತಾರೆ. ನಿಮವೂ ದಟ್ಟವಾದ, ಸೊಂಪಾದ ಕೂದಲು ಬೇಕೆಂದರೆ, ಅಲೋವೆರಾ ಜೆಲ್ ಅನ್ನು ನಿಮ್ಮ ಕೂದಲ ಆರೈಕೆಗೆ ಬಳಸಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:21 pm, Tue, 30 January 24

ಈದ್ ಮಿಲಾದ್ ಮೆರವಣಿಗೆಯಲ್ಲಿ ಎದುರಾದ ಕೂಡಲಸಂಗಮ ಸ್ವಾಮೀಜಿ; ಪರಸ್ಪರ ಘೋಷಣೆ
ಈದ್ ಮಿಲಾದ್ ಮೆರವಣಿಗೆಯಲ್ಲಿ ಎದುರಾದ ಕೂಡಲಸಂಗಮ ಸ್ವಾಮೀಜಿ; ಪರಸ್ಪರ ಘೋಷಣೆ
ನಾವು ಇಲ್ಲದಿದ್ರೆ ಬೆಂಗಳೂರು ಖಾಲಿ ಎಂದ ಮಹಿಳೆಗೆ ಕರವೇ ನಾರಾಯಣಗೌಡ ಎಚ್ಚರಿಕೆ
ನಾವು ಇಲ್ಲದಿದ್ರೆ ಬೆಂಗಳೂರು ಖಾಲಿ ಎಂದ ಮಹಿಳೆಗೆ ಕರವೇ ನಾರಾಯಣಗೌಡ ಎಚ್ಚರಿಕೆ
ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ