ನಡು ರಸ್ತೆಯಲ್ಲಿ ಗನ್​​ ಹಿಡಿದು ರೀಲ್ಸ್​​​ ಮಾಡಿದ ಯುವತಿ, ಪೊಲೀಸರ ಅತಿಥಿಯಾಗುವುದು ಖಂಡಿತ

ಯುವತಿಯೊಬ್ಬಳು ನಡು ರಸ್ತೆಯಲ್ಲಿ ಗನ್​​​ ಹಿಡಿದು ರೀಲ್ಸ್​​​ ಮಾಡಿರುವ ವಿಡಿಯೋ ಎಲ್ಲ ಕಡೆ ವೈರಲ್​​ ಆಗಿದೆ. ಇದೀಗ ಈ ವಿಡಿಯೋಗೆ ಸಾರ್ವಜನಿಕ ವಲಯದಿಂದ ಭಾರೀ ಅಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸರ ತೆಗೆದುಕೊಂಡ ಕ್ರಮಗಳೇನು ಎಂದು ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೋವನ್ನು ಪೊಲೀಸರಿಗೂ ಕೂಡ ಟ್ಯಾಗ್​​ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ಕೂಡ ಪ್ರತಿಕ್ರಿಯೆ ನೀಡಿದ್ದು, ಪೊಲೀಸರು ನೀಡಿದ ಉತ್ತರ ಏನು? ಇಲ್ಲಿದೆ ಓದಿ.

ನಡು ರಸ್ತೆಯಲ್ಲಿ ಗನ್​​ ಹಿಡಿದು ರೀಲ್ಸ್​​​ ಮಾಡಿದ ಯುವತಿ, ಪೊಲೀಸರ ಅತಿಥಿಯಾಗುವುದು ಖಂಡಿತ
Follow us
ಅಕ್ಷಯ್​ ಪಲ್ಲಮಜಲು​​
|

Updated on: May 11, 2024 | 4:39 PM

ಈ ರೀಲ್ಸ್​​​ ಹುಚ್ಚು ಯಾವೆಲ್ಲ ಅನಾಹುತವನ್ನು ಉಂಟು ಮಾಡುತ್ತದೆ ಎಂದರೆ, ಅದು ಜೀವಕ್ಕೂ ಅಪಾಯ ಹಾಗೂ ಸಮಾಜಕ್ಕೂ ಅಪಾಯ. ಯುವಕ – ಯುವತಿಯರು ಮಾಡುವ ಹುಚ್ಚಾಟಕ್ಕೆ ಸಾರ್ವಜನಿಕರು ಬೆಲೆ ತೆರಬೇಕು. ಉತ್ತರಪ್ರದೇಶದ ಲಕ್ನೋದಲ್ಲಿ ಯುವತಿಯೊಬ್ಬಳು ಕೈಯಲ್ಲಿ ಗನ್ ಹಿಡಿದು ನಡುರಸ್ತೆಯಲ್ಲಿ ರೀಲ್ ಮಾಡಿದ್ದಾಳೆ, ಇದೀಗ ಈ ವಿಡಿಯೋ ಎಲ್ಲ ಕಡೆ ವೈರಲ್​​ ಆಗಿದೆ. ವಕೀಲ ಕಲ್ಯಾಣಜಿ ಚೌಧರಿ ಅವರು ಈ ವಿಡಿಯೋವನ್ನು ತಮ್ಮ ಎಕ್ಸ್​​​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈಕೆಯನ್ನು ಇನ್‌ಸ್ಟಾಗ್ರಾಮ್ ಸ್ಟಾರ್​​ ಸಿಮ್ರಾನ್ ಯಾದವ್ ಎಂದು ಗುರುತಿಸಲಾಗಿದೆ.

ಈ ವಿಡಿಯೋದಲ್ಲಿ ​​ ಸಿಮ್ರಾನ್ ಯಾದವ್ ಹೆದ್ದಾರಿಯಲ್ಲಿ ಗನ್​​​ ಹಿಡಿದುಕೊಂಡು ರೀಲ್ಸ್​​​ ಮಾಡಿದ್ದಾರೆ. ಇದೀಗ ಯುವತಿಯ ಈ ವರ್ತನೆಯೂ ಕಾನೂನು ಮತ್ತು ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಲಾಗಿದೆ. ಜತೆಗೆ ಸಾರ್ವಜನಿಕ ಪ್ರದೇಶದಲ್ಲಿ ಇಂತಹ ವಿಡಿಯೋ ಮಾಡಿರುವುದು ಸಮಾಜಘಾತಕ ವರ್ತನೆ ಎಂದು ಹೇಳಲಾಗಿದೆ. ಇನ್ನು ಈ ವಿಡಿಯೋದ ಬಗ್ಗೆ ಪೊಲೀಸರು ಕೂಡ ಮೌನ ವಹಿಸಿರುವುದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಒಂದು ವಾರಗಳ ಹಿಂದೆ ಈ ವಿಡಿಯೋಗೆ 1,300 ಕ್ಕೂ ಹೆಚ್ಚು ವೀಕ್ಷಣೆ ಹಾಗೂ ಅನೇಕ ಕಮೆಂಟ್​​​ ಕೂಡ ಬಂದಿದೆ. ಇನ್ನು ಎಕ್ಸ್​​ ಬಳಕೆದಾರರೂ ಈ ವಿಡಿಯೋಗೆ ವಿರೋಧ ವ್ಯಕ್ತಪಡಿಸಿದ್ದು, ಇದಕ್ಕೆ ಕಮೆಂಟ್​​ ಮಾಡುವಾಗ ಉತ್ತರಪ್ರದೇಶದ ಪೊಲೀಸರಿಗೂ ಟ್ಯಾಗ್​​​ ಮಾಡಿದ್ದಾರೆ. ” ಉತ್ತರಪ್ರದೇಶದ ಪೊಲೀಸರೇ ಈ ವಿಡಿಯೋವನ್ನು ಒಮ್ಮೆ ನೋಡಿ” ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಉತ್ತರಪ್ರದೇಶದ ಪೊಲೀಸರು ಕೂಡ ಪ್ರತಿಕ್ರಿಯೆ ನೀಡಿದ್ದು ಖಂಡಿತ ಇವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆಟೋಗೆ ಬಲೂನ್ ಕಟ್ಟಿ ಮಗಳ ಹುಟ್ಟುಹಬ್ಬ ಸಂಭ್ರಮಿಸಿದ ತಂದೆ

ಇನ್ನು ಈ ವಿಡಿಯೋಗೆ ಮತ್ತೊಬ್ಬ ಬಳಕೆದಾರ ಕಮೆಂಟ್​​ ಮಾಡಿದ್ದು, ಪೊಲೀಸರೇ ಈ ಯುವತಿಗೆ ಭಾರೀ ದಂಡವನ್ನು ಹಾಕಿ, ಆ ಹಣದಲ್ಲಿ ಬಡವರಿಗೆ ಅನ್ನ ನೀಡಬಹುದು ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ಈ ಖಾತೆಯನ್ನು ಬ್ಲಾಕ್​​ ಮಾಡಿ ಎಂದು ಹೇಳಿದ್ದಾರೆ. ಈ ಹಿಂದೆಯೂ ಕೂಡ ಇಂತಹ ಅನೇಕ ಘಟನೆಗಳು ಉತ್ತರಪ್ರದೇಶದಲ್ಲಿ ನಡೆದಿದೆ ಎಂದು ಅನೇಕ ಕಮೆಂಟ್​​ ಮಾಡಿದ್ದಾರೆ.

ಮತ್ತಷ್ಟು  ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ