AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: 80 ವರ್ಷದ ವ್ಯಕ್ತಿಯನ್ನು ವರಿಸಿದ 65ರ ಮಹಿಳೆ

80 ವರ್ಷದ ವಿಠ್ಠಲ ಖಂಡಾರೆ ಅವರ ಪತ್ನಿ ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಸಂಗಾತಿಯ ಸಾವಿನಿಂದ ತುಂಬಾ ಒಂಟಿತನವನ್ನು ಅನುಭವಿಸಿದ್ದು, ಮರು ಮದುವೆಯಾಗುವುದಾಗಿ ಮಕ್ಕಳಿಗೆ ಮದುವೆಯಾಗುವ ಇಚ್ಛೆಯನ್ನು ತಿಳಿಸಿದ್ದಾನೆ. ತಂದೆಯ ಈ ಆಸೆಯನ್ನು ಕೇಳಿದ ಮಕ್ಕಳು ಮೊದಲ ಬಾರಿಗೆ ಆಘಾತಕ್ಕೊಳಗಾಗಿದ್ದರು.

Viral News: 80 ವರ್ಷದ ವ್ಯಕ್ತಿಯನ್ನು ವರಿಸಿದ 65ರ ಮಹಿಳೆ
ಅಕ್ಷತಾ ವರ್ಕಾಡಿ
|

Updated on: May 11, 2024 | 2:47 PM

Share

ಅಮರಾವತಿಯಲ್ಲಿ ವಿಶಿಷ್ಟ ಮದುವೆ ನಡೆದಿದೆ. 80 ವರ್ಷದ ವ್ಯಕ್ತಿ 65 ವರ್ಷದ ಮಹಿಳೆಯನ್ನು ಮದುವೆಯಾಗಿದ್ದಾರೆ. ವಿಶೇಷವೆಂದರೆ ಇವರಿಬ್ಬರ ಮದುವೆಯನ್ನು ಅದ್ಧೂರಿಯಾಗಿ ಮಾಡಿದ್ದು ಬೇರೆ ಯಾರೂ ಅಲ್ಲ, ವೃದ್ಧನ ಮಕ್ಕಳು ಮತ್ತು ಸಂಬಂಧಿಕರು. ಆ ವೃದ್ಧನ ಮಕ್ಕಳು ಮತ್ತು ಮೊಮ್ಮಕ್ಕಳು ಸೇರಿ ಅದ್ದೂರಿಯಾಗಿ ಮದುವೆ ನಡೆಸಿದ್ದಾರೆ. ಈ ವಯಸ್ಸಿನಲ್ಲಿ ಮದುವೆಯಾಗಿ ಹೊಸ ಜೀವನ ಆರಂಭಿಸಿದ ಈ ವಧು-ವರರು ಹಾಗೂ ಅವರ ವಿಶಿಷ್ಟ ವಿವಾಹ ಇದೀಗ ಎಲ್ಲೆಡೆ ವೈರಲ್​​ ಆಗಿದೆ.

ವಾಸ್ತವವಾಗಿ ಅಂಜನಗಾಂವ ಸುರ್ಜಿ ತಾಲೂಕಿನ ಚಿಂಚೋಳಿ ರಹಿಮಾಪುರದ 80 ವರ್ಷದ ವಿಠ್ಠಲ ಖಂಡಾರೆ ಅವರ ಪತ್ನಿ ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದರು. ವಿಠ್ಠಲ ಖಂಡರೆ ಅವರದ್ದು ನಾಲ್ವರು ಪುತ್ರರು, ಸೊಸೆ, ಪುತ್ರಿಯರು, ಅಳಿಯ, ಮೊಮ್ಮಕ್ಕಳು ಇರುವ ದೊಡ್ಡ ಕುಟುಂಬ. ಆದರೆ ವಿಠ್ಠಲ್ ತನ್ನ 80 ನೇ ವಯಸ್ಸಿನಲ್ಲಿ ತನ್ನ ಸಂಗಾತಿಯ ಸಾವಿನಿಂದ ತುಂಬಾ ಒಂಟಿತನವನ್ನು ಅನುಭವಿಸಿದ್ದು, ಮರು ಮದುವೆಯಾಗುವುದಾಗಿ ಮಕ್ಕಳಿಗೆ ಮದುವೆಯಾಗುವ ಇಚ್ಛೆಯನ್ನು ತಿಳಿಸಿದ್ದಾನೆ. ತಂದೆಯ ಈ ಆಸೆಯನ್ನು ಕೇಳಿದ ಮಕ್ಕಳು ಮೊದಲ ಬಾರಿಗೆ ಆಘಾತಕ್ಕೊಳಗಾಗಿದ್ದರು.

ಇದನ್ನೂ ಓದಿ: ಡೆಡ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಸರಾಗವಾಗಿ 50 ಕೆಜಿ ಎತ್ತಿದ 82ರ ಅಜ್ಜಿ

ಕೊನೆಗೆ ಮಕ್ಕಳ ಒಪ್ಪಿಗೆಯ ಮೇರೆಗೆ ಮದುವೆಗೆ ಸಿದ್ಧರಾಗಿದ್ದರೆ. ಇದಾದ ಬಳಿಕ ಮಕ್ಕಳು ತಂದೆಗಾಗಿ ವಧುವಿನ ಹುಡುಕಾಟ ಆರಂಭಿಸಿದ್ದರು. ವಧುವನ್ನು ಹುಡುಕುವುದು ಅವರಿಗೆ ಸುಲಭವಾಗಿರಲಿಲ್ಲ. ಸುದೀರ್ಘ ಹುಡುಕಾಟದ ಬಳಿಕ ಕೊನೆಗೂ ವಧು ಪತ್ತೆಯಾಗಿದ್ದಾಳೆ.

ವಿಠ್ಠಲ್ ಖಂಡಾರೆಯವರ ಪುತ್ರರು ಅಕೋಲದ ಅಕೋಟ್‌ನ 65 ವರ್ಷದ ಮಹಿಳೆಯ ವಿವಾಹದ ಮಾತುಕತೆ ನಡೆಸಿ ಕೊನೆಗೆ ಅವರ ಮದುವೆ ನಿಶ್ಚಯಿಸಿದ್ದು, ಮಾ.8ರಂದು ಚಿಂಚೋಳಿ ರಹಿಮಾಪುರ ಗ್ರಾಮದಲ್ಲಿ ವಿಠ್ಠಲ ಖಂಡಾರೆ ಅವರ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವಿಶಿಷ್ಟ ವಿವಾಹ ಸಮಾರಂಭದಲ್ಲಿ,ಚಿಂಚೋಳಿ ರಹಿಮಾಪುರ ಗ್ರಾಮಸ್ಥರೂ ಪಾಲ್ಗೊಂಡಿದ್ದರು. ಈ ವಿಶಿಷ್ಟ ಮದುವೆ ಸದ್ಯ ಎಲ್ಲೆಡೆ ಚರ್ಚೆಯಾಗುತ್ತಿದೆ.

ಮತ್ತಷ್ಟು  ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ