48ನೇ ವಯಸ್ಸಿಗೆ ತಂದೆಯಾದ ಖ್ಯಾತ ಹಾಸ್ಯ ನಟ; ‘ಜೈಲರ್’ ಕಲಾವಿದನ ಬಾಳಲ್ಲಿ ಖುಷಿಯೋ ಖುಷಿ
ತಮಿಳು ಚಲನಚಿತ್ರರಂಗದ ಖ್ಯಾತ ಹಾಸ್ಯ ನಟ ರೆಡಿನ್ ಕಿಂಗ್ಸ್ಲಿ ಅವರು 48ನೇ ವಯಸ್ಸಿನಲ್ಲಿ ತಂದೆಯಾಗಿದ್ದಾರೆ. ಅವರು ಮತ್ತು ಅವರ ಪತ್ನಿ ಸಂಗೀತಾ ಅವರಿಗೆ ಹೆಣ್ಣು ಮಗು ಜನಿಸಿದೆ. 'ಜೈಲರ್' ಸೇರಿದಂತೆ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿರುವ ರೆಡಿನ್ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.

ತಮಿಳಿನ ಖ್ಯಾತ ಹಾಸ್ಯ ನಟ ರೆಡಿನ್ ಕಿಂಗ್ಸ್ಲಿ (Redin Kingsley) 45ನೇ ವಯಸ್ಸಿಗೆ ವಿವಾಹ ಆದರು. ಈಗ 48ನೇ ವಯಸ್ಸಿಗೆ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ಫೋಟೋವನ್ನು ಕಿಂಗ್ಸ್ಲಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಅವರು ಮಗುವಿನ ಮುಖವನ್ನು ರಿವೀಲ್ ಮಾಡಿಲ್ಲ. ‘ಜೈಲರ್’ ಮೊದಲಾದ ಸಿನಿಮಾಗಳಲ್ಲಿ ನಟಿಸಿ ರೆಡಿನ್ ಅವರು ಖ್ಯಾತಿ ಪಡೆದಿದ್ದಾರೆ. ಈಗ ಜನಪ್ರಿಯತೆ ಜೊತೆಗೆ ಅವರು ತಂದೆ ಆಗಿರುವ ಖುಷಿಯೂ ಸೇರಿಕೊಂಡಿದೆ.
2023ರಲ್ಲಿ ರೆಡಿನ್ ಅವರು ಕಿರುತೆರೆ ನಟಿ ಸಂಗೀತಾ ಅವರನ್ನು ವಿವಾಹ ಆದರು. ಸಂಗೀತಾ ಅವರಿಗೆ ಈಗ 46 ವರ್ಷ. ಇಬ್ಬರೂ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಸಂಗೀತಾ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಮಗುವಿನ ಮುಖಕ್ಕೆ ಎಮೋಜಿ ಹಾಕಿ, ‘ನಿಮ್ಮೆಲ್ಲರ ಶುಭಾಶಯಗಳು ಮತ್ತು ಆಶೀರ್ವಾದಗಳಿಗೆ ಧನ್ಯವಾದಗಳು. ರಾಜಕುಮಾರಿ’ ಎಂದು ಬರೆದಿದ್ದಾರೆ.
ರೆಡಿನ್ ಮಗುವನ್ನು ತನ್ನ ತೋಳುಗಳಲ್ಲಿ ಹಿಡಿದುಕೊಂಡು ನಗುತ್ತಾ ನಿಂತಿದ್ದಾರೆ. ಅವರ ಮುಖದಲ್ಲಿ ಸಂತೋಷ ಎದ್ದು ಕಾಣುತ್ತಿದೆ. ಅವರು ಶೀಘ್ರವೇ ಮಗುವಿನ ಮುಖ ರಿವೀಲ್ ಮಾಡಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಈ ಮೊದಲು ರೆಡಿನ್ ಅವರು ಸಂಗೀತಾ ಅವರ ಸೀಮಂತ ಕಾರ್ಯಕ್ರಮದ ಫೋಟೋಗಳನ್ನು ಹಂಚಿಕೊಂಡಿದ್ದರು.
1977ರ ಏಪ್ರಿಲ್ 16ರಂದು ರೆಡಿನ್ ರೆಡಿನ್ ಜನಿಸಿದರು. ಅಂದರೆ ಮುಂದಿನ ತಿಂಗಳು ಅವರಿಗೆ 48 ವರ್ಷ ತುಂಬಲಿದೆ. ಅವರು ತಮಿಳಿನ ಪ್ರಸಿದ್ಧ ಹಾಸ್ಯನಟ. 2018ರಲ್ಲಿ ಇವರು ಚಿತ್ರರಂಗಕ್ಕೆ ಕಾಲಿಟ್ಟರು. ಅದಕ್ಕೂ ಮೊದಲು ಈವೆಂಟ್ಗಳನ್ನು ಆಯೋಜನೆ ಮಾಡುತ್ತಿದ್ದರು. 2023ರ ಡಿಸೆಂಬರ್ 10ರಂದು ಅವರು ಕಿರುತೆರೆ ನಟಿ ಸಂಗೀತಾ ಅವರನ್ನು ವಿವಾಹವಾದರು.
ಇದನ್ನೂ ಓದಿ: ರಜನಿಕಾಂತ್ ನಟನೆಯ ‘ಜೈಲರ್ 2’ ಟೀಸರ್ ನೋಡಿದ್ರಾ? ಮತ್ತೆ ಆ್ಯಕ್ಷನ್ ಅವತಾರ
2021ರಲ್ಲಿ ರಿಲೀಸ್ ಆದ ಶಿವಕಾರ್ತಿಕೇಯನ್ ಅಭಿನಯದ ‘ಡಾಕ್ಟರ್’ ಚಿತ್ರದೊಂದಿಗೆ ರೆಡಿನ್ ಖ್ಯಾತಿ ಹೆಚ್ಚಾಯಿತು. ರಜನಿಕಾಂತ್ ಅವರೊಂದಿಗೆ ‘ಜೈಲರ್’, ದಳಪತಿ ವಿಜಯ್ ಅವರೊಂದಿಗೆ ‘ಬೀಸ್ಟ್’ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು. ಈಗ ಅವರು ಬೇಡಿಕೆಯ ಹಾಸ್ಯ ನಟ ಎನಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.