‘ನನಗೆ ಒಬ್ಬರ ಮೇಲೆ ಸಖತ್ ಲವ್ ಆಗಿದೆ’; ವೇದಿಕೆ ಮೇಲೆ ಮನಬಿಚ್ಚಿ ಮಾತನಾಡಿದ ರಮೋಲಾ
‘ಕನ್ನಡತಿ’ ಧಾರಾವಾಹಿಯಲ್ಲಿ ವಿಲನ್ ಪಾತ್ರ ಮಾಡಿ ಫೇಮಸ್ ಆದವರು ರಮೋಲಾ. ಅವರು ಸಿನಿಮಾ ಒಪ್ಪಿಕೊಂಡ ಬಳಿಕ ಧಾರಾವಾಹಿಯಿಂದ ಹೊರ ಬಂದರು. ಅವರು ‘ರಿಚ್ಚಿ’ ಸಿನಿಮಾ ಮಾಡಿದ್ದಾರೆ. ಈಗ ಅವರು ಮತ್ತೆ ಕಿರುತೆರೆಯಲ್ಲಿ ತೊಡಗಿಕೊಂಡಿದ್ದಾರೆ. ಅವರು ವೇದಿಕೆ ಮೇಲೆ ಹೇಳಿದ ಮಾತು ಗಮನ ಸೆಳೆದಿದೆ.

ನಟಿ ರಮೋಲಾ (Ramola) ಅವರು ಈ ಮೊದಲು ‘ಕನ್ನಡತಿ’ ಧಾರಾವಾಹಿಯಲ್ಲಿ ಸಾನಿಯಾ ಹೆಸರಿನ ಪಾತ್ರ ಮಾಡಿದ್ದರು. ಆ ಬಳಿಕ ಅವರು ಧಾರಾವಾಹಿಯಿಂದ ಹೊರ ಬಂದರು. ಈಗ ಅವರು ಸಿನಿಮಾ ಮಾಡಿದರು. ಈಗ ಅವರು ‘ಭರ್ಜರಿ ಬ್ಯಾಚುಲರ್ಸ್ 2’ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಅವರು ಡ್ಯಾನ್ಸ್ ಮೂಲಕ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಿರುವಾಗಲೇ ರಮೋಲಾ ತಮ್ಮ ಮನದಾಳದ ಮಾತನ್ನು ಹೇಳಿಕೊಂಡಿದ್ದಾರೆ. ಒಬ್ಬರ ಮೇಲೆ ತುಂಬಾನೇ ಲವ್ ಆಗಿದೆ ಎಂದು ಹೇಳಿಕೊಂಡಿದ್ದಾರೆ.
ಈ ಬಾರಿ ಜೀ ಕನ್ನಡದಲ್ಲಿ ಮಹಾ ಸಂಗಮ ಆಗಿದೆ. ‘ಭರ್ಜರಿ ಬ್ಯಾಚುಲರ್ಸ್ 2’ ಹಾಗೂ ‘ಸರಿಗಮಪ’ ಶೋಗಳ ಸಂಗಮ ಆಗಿದೆ. ಈ ವಾರಾಂತ್ಯದಲ್ಲಿ ಇದು ಪ್ರಸಾರ ಕಾಣಲಿದೆ. ಈ ವೇದಿಕೆ ಮೇಲೆ ಸರಿಗಮಪ ಸ್ಪರ್ಧಿಗಳು ಹಾಡನ್ನು ಹೇಳಿದರೆ, ‘ಭರ್ಜರಿ ಬ್ಯಾಚುಲರ್ಸ್ 2’ ಸ್ಪರ್ಧಿಗಳು ಡ್ಯಾನ್ಸ್ ಮಾಡಲಿದ್ದಾರೆ. ಶನಿವಾರ ಹಾಗೂ ಭಾನುವಾರ ಸಂಜೆ 7.30ಕ್ಕೆ ಎಪಿಸೋಡ್ ಪ್ರಸಾರ ಕಾಣಲಿದೆ. ಇದರ ಪ್ರೋಮೋನ ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ.
‘ಭರ್ಜರಿ ಬ್ಯಾಚುಲರ್ಸ್ 2’ನಲ್ಲಿ ರಮೋಲಾ ಅವರು ಬುಲೆಟ್ ಪ್ರಕಾಶ್ ಮಗ ರಕ್ಷಕ್ ಬುಲೆಟ್ಗೆ ಜೊತೆಯಾಗಿದ್ದಾರೆ. ಇಬ್ಬರೂ ಒಟ್ಟಾಗಿ ಡ್ಯಾನ್ಸ್ ಮಾಡಿದ್ದಾರೆ. ಡ್ಯಾನ್ಸ್ ಮುಗಿದ ಬಳಿಕ ರಮೋಲಾ ತಮ್ಮ ಮನದಾಳದ ಮಾತನ್ನು ಹೇಳಿಕೊಂಡರು.
View this post on Instagram
‘ಒಬ್ಬರ ಮೇಲೆ ನನಗೆ ಸಖತ್ ಲವ್ ಆಗಿದೆ. ಅದೇ ರಾಜೇಶ್ ಕೃಷ್ಣನ್. ಒಂದು ಡ್ಯಾನ್ಸ್ ಮಾಡಿ’ ಎಂದು ರಮೋಲಾ ಬೇಡಿಕೆ ಇಟ್ಟರು. ಇದನ್ನು ರಾಜೇಶ್ ಕೃಷ್ಣನ್ ಅವರು ಅಲ್ಲಗಳೆಯಲೇ ಇಲ್ಲ. ಅವರು ಒಪ್ಪಿ ಡ್ಯಾನ್ಸ್ ಮಾಡಿದರು. ಇದನ್ನು ಫ್ಯಾನ್ಸ್ ಇಷ್ಟಪಟ್ಟಿದ್ದಾರೆ.
ಇದನ್ನೂ ಓದಿ: ‘ಒಪ್ಪಂದ ಮುಗಿದು ವರ್ಷವಾಗಿದೆ’; ಕಾಲ್ಶೀಟ್ ಕಿರಿಕ್ ಬಗ್ಗೆ ರಮೋಲಾ ಪ್ರತಿಕ್ರಿಯೆ
‘ಸರಿಗಮಪ’ ವೇದಿಕೆ ಮೇಲೆ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಹಾಗೂ ಅರ್ಜುನ್ ಜನ್ಯ ಅವರು ಜಡ್ಜ್ ಸ್ಥಾನದಲ್ಲಿ ಇದ್ದಾರೆ. ಇನ್ನು, ‘ಭರ್ಜರಿ ಬ್ಯಾಚುಲರ್ಸ್ 2’ ವೇದಿಕೆ ಮೇಲೆ ರವಿಚಂದ್ರನ್ ಹಾಗೂ ರಚಿತಾ ರಾಮ್ ಅವರು ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:00 pm, Thu, 3 April 25








