AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಒಪ್ಪಂದ ಮುಗಿದು ವರ್ಷವಾಗಿದೆ’; ಕಾಲ್​ಶೀಟ್ ಕಿರಿಕ್ ಬಗ್ಗೆ ರಮೋಲಾ ಪ್ರತಿಕ್ರಿಯೆ

ಈ ಪ್ರಕರಣಕ್ಕೆ ಸಂಬಂಧಿಸಿ ನಟಿ ರಮೋಲಾ‌ ಟಿವಿ9 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಈ ಬಗ್ಗೆ ಯಾವುದೇ ರಿಯಾಕ್ಷನ್ ನೀಡುವುದಿಲ್ಲ. ಅಗ್ರಿಮೆಂಟ್ ಮುಗಿದು ಒಂದು ವರ್ಷವಾಗಿದೆ. ಕಳೆದ ಮೂರು ವರ್ಷದಿಂದ ಸಿನಿಮಾ ಚಿತ್ರೀಕರಣ ಮಾಡುತ್ತಲೇ ಇದ್ದಾರೆ’ ಎಂದಿದ್ದಾರೆ ಅವರು.

‘ಒಪ್ಪಂದ ಮುಗಿದು ವರ್ಷವಾಗಿದೆ’; ಕಾಲ್​ಶೀಟ್ ಕಿರಿಕ್ ಬಗ್ಗೆ ರಮೋಲಾ ಪ್ರತಿಕ್ರಿಯೆ
ಮಾಲತೇಶ ಜಗ್ಗೀನ್
| Edited By: |

Updated on: Oct 18, 2023 | 10:49 AM

Share

‘ಕನ್ನಡತಿ’ ಧಾರಾವಾಹಿಯಲ್ಲಿ ವಿಲನ್ ಪಾತ್ರ ಮಾಡಿ ಫೇಮಸ್ ಆದವರು ರಮೋಲಾ (Ramola) . ಅವರು ಸಿನಿಮಾ ಒಪ್ಪಿಕೊಂಡ ಬಳಿಕ ಧಾರಾವಾಹಿಯಿಂದ ಹೊರ ಬಂದರು. ಅವರು ‘ರಿಚ್ಚಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಕಾಲ್​ಶೀಟ್ ವಿಚಾರಕ್ಕೆ ಕಿತ್ತಾಟ ಆಗಿದೆ. ಅವರು ಕಾಲ್​ಶೀಟ್ ಕೊಡದೇ ಆಟ ಆಡಿಸುತ್ತಿದ್ದಾರೆ ಎಂದು ‘ರಿಚ್ಚಿ’ ಸಿನಿಮಾದ ನಟ, ನಿರ್ದೇಶಕ, ನಿರ್ಮಾಪಕ ರಿಚ್ಚಿ ಆರೋಪಿಸಿದ್ದಾರೆ. ಇದಕ್ಕೆ ನಟಿಯ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ.

ರಿಚ್ಚಿ ಹೇಳೋದು ಏನು?

ಹಲ್ಲೆ ಮಾಡೋ ಹಂತಕ್ಕೆ ರಿಚ್ಚಿ ಹಾಗೂ ರಮೋಲಾ ಕಿತ್ತಾಟ ನಡೆದಿದೆ ಎನ್ನಲಾಗಿದೆ.  ‘2022ರಲ್ಲಿ ಒಪ್ಪಂದ ಆಗಿತ್ತು. ಪಿಜಿ ಬಿಸ್ನೆಸ್​​ಗೆ ಪಾರ್ಟ್ನರ್ ಆಗಿಲ್ಲ ಎಂದು ಅವರು ಕಾಲ್​ಶೀಟ್ ಕೊಡುತ್ತಿಲ್ಲ. 10 ರಿಂದ 12 ದಿನ ಶೂಟಿಂಗ್ ಕೂಡ ಮಾಡಲಾಗಿದೆ. ಇ‌ನ್ನೂ ಎರಡು ದಿನ ಕಾಲ್ ಶೀಟ್ ಬೇಕಿದೆ. ಸಂಭಾವನೆ ಕ್ಲಿಯರ್ ಮಾಡಿದರೂ ಅವರು ಶೂಟಿಂಗ್​ಗೆ ಬರುತ್ತಿಲ್ಲ’ ಎಂಬುದು ರಿಚ್ಚಿ ಮಾತು. ಗಾಂಧೀನಗರದ ಕಾನಿಷ್ಕ ಹೋಟೇಲ್ ಬಳಿ ಇರೋ ವಕೀಲರ ಕಚೇರಿಯಲ್ಲಿ ಇತ್ತೀಚೆಗೆ ಇಬ್ಬರ ಮಧ್ಯೆ ಮಾತುಕತೆ ನಡೆದಿತ್ತು ಎನ್ನಲಾಗಿದೆ. ಆಗ ರಿಚ್ಚಿ ಹಾಗೂ ರಮೋಲಾ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಇದನ್ನೂ ಓದಿ: ಬೋಲ್ಡ್ ಫೋಟೋ ಮೂಲಕ ಗಮನ ಸೆಳೆದ ನಟಿ ರಮೋಲಾ

ರಮೋಲಾ ಪ್ರತಿಕ್ರಿಯೆ

ಈ ಪ್ರಕರಣಕ್ಕೆ ಸಂಬಂಧಿಸಿ ನಟಿ ರಮೋಲಾ‌ ಟಿವಿ9 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಈ ಬಗ್ಗೆ ಯಾವುದೇ ರಿಯಾಕ್ಷನ್ ನೀಡುವುದಿಲ್ಲ. ಅಗ್ರಿಮೆಂಟ್ ಮುಗಿದು ಒಂದು ವರ್ಷವಾಗಿದೆ. ಕಳೆದ ಮೂರು ವರ್ಷದಿಂದ ಸಿನಿಮಾ ಚಿತ್ರೀಕರಣ ಮಾಡುತ್ತಲೇ ಇದ್ದಾರೆ. 6 ತಿಂಗಳಿಗೆ ಒಂದು ದಿನ ಶೂಟ್ ಮಾಡುತ್ತಾರೆ. ಕನ್ನಡದ ಆರ್ಟಿಸ್ಟ್​​ಗಳಿಗೆ ಟಾಂಗ್ ಕೊಡುವಂತಹ ಡೈಲಾಗ್​​ಗಳನ್ನು ಇಟ್ಟಿದ್ದಾರೆ. ಅದು ನನಗೂ ನೆಗೆಟಿವ್ ಆಗುತ್ತದೆ. ಪಬ್ಲಿಸಿಟಿಗಾಗಿ ಇದೆಲ್ಲ ಮಾಡ್ತಿದ್ದಾರೆ’ ಎಂದು ರಮೋಲಾ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಮಾಲತೇಶ ಜಗ್ಗೀನ್
ಮಾಲತೇಶ ಜಗ್ಗೀನ್

ಮಾಲತೇಶ ಜಗ್ಗೀನ್. Tv9 ಕನ್ನಡ ವಾಹಿನಿ ಫಿಲಂ ಬ್ಯೂರೋ ಮುಖ್ಯಸ್ಥನಾಗಿ ಕೆಲಸ ಮಾಡ್ತಿದ್ದಾರೆ. ಮಾಲತೇಶ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹೊಳಲು ಗ್ರಾಮದವರು. ಕಳೆದ 15 ವರ್ಷಗಳಲ್ಲಿ ಮಾಧ್ಯಮ ಲೋಕದ ವಿವಿಧ ವಿಭಾಗಗಳಲ್ಲಿ ವರದಿಗಾರಿಕೆ ಮಾಡಿದ ಅನುಭವ ಇದೆ. ಸಿನಿಮಾ ವಿಭಾಗದ ಜೊತೆ ರಾಜಕೀಯ, ಮೆಟ್ರೋ, ಕ್ರೈಂ ವಿಭಾಗದಲ್ಲೂ ಕೆಲವು ಸನ್ನಿವೇಶಗಳಲ್ಲಿ ವರದಿಗಾರಿಕೆ ಮಾಡಿದ್ದಾರೆ. ಹಾವೇರಿಯ ಕೆಎಫ್ ಚಾನಲ್ , ನಂತರ ಬೆಂಗಳೂರಿನ ಸಮಯ ನ್ಯೂಸ್, ಜನಶ್ರಿ ನ್ಯೂಸ್, ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. Tv9kannada ನ್ಯೂಸ್ ಚಾನಲ್ ನಲ್ಲಿ ಕಳೆದ 10 ವರ್ಷಗಳಿಂದ ಇದ್ದಾರೆ. ಕಲೆ, ಸಾಹಿತ್ಯ, ಸಿನಿಮಾ, ಕ್ರಿಡೆ ಆಸಕ್ತಿ ವಿಷಯಗಳು.

Read More
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ
ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಚಿತ್ರರಂಗದಲ್ಲಿ ಮೂರು ದಶಕ: ಕಿಚ್ಚನಿಗೆ ರಿಷಬ್ ಶುಭಾಶಯ
ಚಿತ್ರರಂಗದಲ್ಲಿ ಮೂರು ದಶಕ: ಕಿಚ್ಚನಿಗೆ ರಿಷಬ್ ಶುಭಾಶಯ
ಏತ ನೀರಾವರಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಸಾವಿರಾರು ಮರಗಳಿಗೆ ಅಪಾಯ
ಏತ ನೀರಾವರಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಸಾವಿರಾರು ಮರಗಳಿಗೆ ಅಪಾಯ
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್