Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜನಿಕಾಂತ್ ನಟನೆಯ ‘ಜೈಲರ್ 2’ ಟೀಸರ್ ನೋಡಿದ್ರಾ? ಮತ್ತೆ ಆ್ಯಕ್ಷನ್ ಅವತಾರ

ರಜನಿಕಾಂತ್ ನಟನೆಯ ಜೈಲರ್ ಸಿನಿಮಾದ ಯಶಸ್ಸಿನ ನಂತರ, ಅದರ ಸೀಕ್ವೆಲ್ ಅಧಿಕೃತವಾಗಿ ಘೋಷಣೆಯಾಗಿದೆ. ಪೊಂಗಲ್ ಪ್ರಯುಕ್ತ ಟೀಸರ್ ಬಿಡುಗಡೆಯಾಗಿದೆ. ನೆಲ್ಸನ್ ನಿರ್ದೇಶನ ಮತ್ತು ಅನಿರುದ್ಧ ಸಂಗೀತದೊಂದಿಗೆ, ರಜನಿಕಾಂತ್ ಮತ್ತೆ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಶೂಟಿಂಗ್ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಚಿತ್ರದ ಮೊದಲ ಭಾಗದ ಯಶಸ್ಸಿನಿಂದಾಗಿ, ಎರಡನೇ ಭಾಗವೂ ದೊಡ್ಡ ಯಶಸ್ಸನ್ನು ಕಾಣಲಿದೆ ಎಂದು ನಿರೀಕ್ಷಿಸಲಾಗಿದೆ.

ರಜನಿಕಾಂತ್ ನಟನೆಯ ‘ಜೈಲರ್ 2’ ಟೀಸರ್ ನೋಡಿದ್ರಾ? ಮತ್ತೆ ಆ್ಯಕ್ಷನ್ ಅವತಾರ
ಜೈಲರ್ 2
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jan 15, 2025 | 7:50 AM

ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ 2023ರಲ್ಲಿ ರಿಲೀಸ್ ಆಗಿ ಯಶಸ್ಸು ಕಂಡಿತ್ತು. ಈಗ ಸಿನಿಮಾ ರಿಲೀಸ್ ಆಗಿ ಎರಡು ವರ್ಷಗಳ ಬಳಿಕ ಈ ಚಿತ್ರಕ್ಕೆ ಸೀಕ್ವೆಲ್ ಬರುತ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗಿದೆ. ಪೊಂಗಲ್ ಪ್ರಯುಕ್ತ ಸಿನಿಮಾದ ಟೀಸರ್​ನ ತಂಡದವರು ರಿಲೀಸ್ ಮಾಡಿದ್ದಾರೆ. ರಜನಿಕಾಂತ್ ಅವರನ್ನು ಮತ್ತೆ ಆ್ಯಕ್ಷನ್ ಅವತಾರದಲ್ಲಿ ನೀವು ಇಲ್ಲಿ ಕಾಣಬಹುದಾಗಿದೆ. ಸನ್ ಪಿಕ್ಚರ್ಸ್​ ಸಂಸ್ಥೆಯು ಈ ಚಿತ್ರವನ್ನು  ನಿರ್ಮಾಣ ಮಾಡುತ್ತಿದೆ.

‘ಜೈಲರ್’ ಚಿತ್ರದಲ್ಲಿ ಕೆಲವು ವಿಚಾರಗಳು ಪ್ರಮುಖವಾಗಿ ಕೆಲಸ ಮಾಡಿದ್ದವು ಎನ್ನಬಹುದು. ಒಂದು ರಜನಿಕಾಂತ್ ಅವರ ಮಾಸ್ ಅವತಾರ. ನೆಲ್ಸನ್ ಅವರ ನಿರ್ದೇಶನ. ಅನಿರುದ್ಧ್ ಅವರ ಸಂಗೀತ ಮತ್ತು ಶಿವರಾಜ್​ಕುಮಾರ್, ಮೋಹನ್​ಲಾಲ್ ಅವರ ಅತಿಥಿ ಪಾತ್ರ ಗಮನ ಸೆಳೆದಿತ್ತು. ಈಗ ಹೊಸ ಟೀಸರ್​ನಲ್ಲಿ ನೆಲ್ಸನ್ ಅವರು ಚಿತ್ರವನ್ನು ನಿರ್ದೇಶನ ಮಾಡುವುದಾಗಿ ತೋರಿಸಿದ್ದು, ಅನಿರುದ್ಧ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ರಜನಿಕಾಂತ್ ಅವರು ಮಾಸ್ ಅವತಾರ ತಾಳಲಿದ್ದಾರೆ.

ಶಿವರಾಜ್​ಕುಮಾರ್ ಹಾಗೂ ಮೋಹನ್​​ಲಾಲ್​ ಅವರನ್ನು ತೋರಿಸಿಲ್ಲ. ಮೊದಲ ಭಾಗದಲ್ಲಿ ಇವರ ಪಾತ್ರ ಗಮನ ಸೆಳೆದಿರುವುದರಿಂದ ಎರಡನೇ ಭಾಗದಲ್ಲಿ ಇವರು ಇರೋದು ಖಚಿತ ಎಂದು ಹೇಳಲಾಗುತ್ತಿದೆ. ಆ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ತಿಳಿದು ಬರಬೇಕಿದೆ.

ಸದ್ಯ ರಿಲೀಸ್ ಆಗಿರುವ ಟೀಸರ್ ಮಜವಾಗಿದೆ. ನೆಲ್ಸನ್ ಹಾಗೂ ಅನಿರುದ್ಧ ಅವರು ಗೋವಾದಲ್ಲಿ ಕಥೆ ಚರ್ಚೆ ಮಾಡುತ್ತಾರೆ. ಸ್ಟೋರಿ ಲೈನ್​ಗಾಗಿ ಇಬ್ಬರೂ ಹುಡುಕುತ್ತಾ ಇರುತ್ತಾರೆ. ಆ್ಯಕ್ಷನ್ ಚಿತ್ರ ಮಾಡಬೇಕು ಎಂಬ ಚರ್ಚೆ ನಡೆಯುತ್ತಾ ಇರುತ್ತದೆ. ಆಗ ಒಬ್ಬರಾದ ಮೇಲೆ ಒಬ್ಬರಂತೆ ಬಂದು ಸಾಯುತ್ತಾರೆ. ಕೆಲವರಿಗೆ ಚುಚ್ಚಿದರೆ, ಇನ್ನೂ ಕೆಲವರಿಗೆ ಗುಂಡು ಬೀಳುತ್ತದೆ. ನೋಡಿದರೆ ರಜನಿಕಾಂತ್. ಅವರು ಮಾಸ್ ಅವತಾರದಲ್ಲಿ ಬಂದು ಎಲ್ಲರನ್ನೂ ಸಾಯಿಸುತ್ತಾರೆ.  ಇದನ್ನೇ ಸ್ಟೋರಿ ಲೈನ್ ಮಾಡುವ ನಿರ್ಧಾರಕ್ಕೆ ಇವರು ಬರುತ್ತಾರೆ.

ಇದನ್ನೂ ಓದಿ: ‘ಜೈಲರ್ 2’ ಚಿತ್ರದ ಬಗ್ಗೆ ಸಿಕ್ತು ದೊಡ್ಡ ಅಪ್ಡೇಟ್: ಹೀರೋ ಯಾರು?

‘ಜೈಲರ್’ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಯಶಸ್ಸು ಕಂಡಿತ್ತು. ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಚಿತ್ರ 650 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಸನ್ ಪಿಕ್ಚರ್ಸ್ ಎರಡನೇ ಭಾಗವನ್ನು ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲಿದೆ. ಈ ಚಿತ್ರದ ಶೂಟಿಂಗ್ ಯಾವಾಗ ಆರಂಭ ಆಗುತ್ತದೆ ಎಂಬುದು ಸದ್ಯಕ್ಕೆ ತಿಳಿದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.