‘ಜೈಲರ್ 2’ ಚಿತ್ರದ ಬಗ್ಗೆ ಸಿಕ್ತು ದೊಡ್ಡ ಅಪ್ಡೇಟ್: ಹೀರೋ ಯಾರು?

Jailer 2: ‘ಜೈಲರ್’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆ. ಇದೀಗ ‘ಜೈಲರ್ 2’ ಸಿನಿಮಾ ಆರಂಭಕ್ಕೆ ನಿರ್ಮಾಪಕರಿಂದ ಹಸಿರು ನಿಶಾನೆ ದೊರೆತಿದೆ. ‘ಜೈಲರ್ 2’ ಸಿನಿಮಾದಲ್ಲಿಯೂ ರಜನೀಕಾಂತ್ ನಾಯಕರಾಗಿ ಇರಲಿದ್ದಾರೆ. ಶಿವಣ್ಣ ಇರಲಿದ್ದಾರೆಯೇ?

‘ಜೈಲರ್ 2’ ಚಿತ್ರದ ಬಗ್ಗೆ ಸಿಕ್ತು ದೊಡ್ಡ ಅಪ್ಡೇಟ್: ಹೀರೋ ಯಾರು?
ಜೈಲರ್ 2
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Sep 03, 2024 | 6:06 PM

ನಟ ರಜನಿಕಾಂತ್ ಅಭಿನಯದ ‘ಜೈಲರ್’ ಸಿನಿಮಾ 2023ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಈ ಸಿನಿಮಾ ರಜನಿ ವೃತ್ತಿ ಜೀವನದಲ್ಲಿ ಪ್ರಮುಖ ಸಿನಿಮಾ ಎನಿಸಿಕೊಂಡಿತು. ಈ ಚಿತ್ರವನ್ನು ನೆಲ್ಸನ್ ದಿಲೀಪ್ಕುಮಾರ್ ಅವರು ನಿರ್ದೇಶನ ಮಾಡಿದ್ದರು. ಈಗ ಸಿನಿಮಾಗೆ ಸೀಕ್ವೆಲ್ ಬರುವ ಸೂಚನೆಯನ್ನು ನೆಲ್ಸನ್ ಅವರು ನೀಡಿದ್ದಾರೆ. ಅಷ್ಟೇ ಅಲ್ಲ ಚಿತ್ರಕ್ಕೆ ರಜನಿಕಾಂತ್ ಅವರೇ ಹೀರೋ ಆಗಿ ಮುಂದುವರಿಯುವ ಸೂಚನೆಯನ್ನೂ ನೀಡಿದ್ದಾರೆ.

ಇತ್ತೀಚೆಗೆ ಯಾವುದೇ ಸಿನಿಮಾ ಹಿಟ್ ಆದರೂ ಅದಕ್ಕೆ ಸೀಕ್ವೆಲ್ ಮಾಡುವ ಟ್ರೆಂಡ್ ಜೋರಾಗಿದೆ. ಮೊದಲ ಕಥೆಗೆ ಎರಡನೇ ಕಥೆಗೆ ಲಿಂಕ್ ಇರುತ್ತದೆಯೋ ಇಲ್ಲವೋ ಬಿಸ್ನೆಸ್ ನಿಟ್ಟಿನಲ್ಲಿ ಇದು ಮುಖ್ಯವಾಗುತ್ತದೆ. ಈ ಕಾರಣದಿಂದಲೇ ಅನೇಕರು ಸೀಕ್ವೆಲ್ ಮಾಡಲು ಆಸಕ್ತಿ ತೋರಿಸುತ್ತಾರೆ. ‘ಜೈಲರ್’ ಸಿನಿಮಾ ನಿರ್ಮಾಣ ಮಾಡಿದ್ದ ಸನ್ ಪಿಕ್ಚರ್ಸ್ನವರು ‘ಜೈಲರ್ 2’ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದಾರಂತೆ.

ಇತ್ತೀಚೆಗೆ ನೆಲ್ಸನ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಜೈಲರ್ ಸೀಕ್ವೆಲ್ ಬಗ್ಗೆ ಈ ತಿಂಗಳಲ್ಲಿ ಅಪ್ಡೇಟ್ ನೀಡುತ್ತೇವೆ’ ಎಂದು ಅವರು ಹೇಳಿದ್ದಾರೆ. ಸನ್ ಪಿಕ್ಚರ್ಸ್ ಕಡೆಯಿಂದಲೇ ಈ ಬಗ್ಗೆ ಅಪ್ಡೇಟ್ ಸಿಗಲಿದೆ. ಕೆಲವು ವರದಿಗಳ ಪ್ರಕಾರ ಈಗಾಗಲೇ ‘ಜೈಲರ್ 2’ ಸಿನಿಮಾದ ಸ್ಕ್ರಿಪ್ಟ್ ಕೆಲಸ ಪೂರ್ಣಗೊಂಡಿದೆಯಂತೆ. ರಜನಿ ಅವರೇ ಸಿನಿಮಾನಲ್ಲಿ ನಟಿಸೋ ಸಾಧ್ಯತೆ ಇದೆ.

ಇದನ್ನೂ ಓದಿ:ಶಿವಣ್ಣನ ಬಳಿಕ ರಜನೀಕಾಂತ್ ಜೊತೆ ನಟಿಸಲಿದ್ದಾರೆ ಕನ್ನಡದ ಮತ್ತೊಬ್ಬ ಸ್ಟಾರ್ ನಟ

‘ಜೈಲರ್’ ಸಿನಿಮಾದಲ್ಲಿ ರಜನಿಕಾಂತ್, ರಮ್ಯಾ ಕೃಷ್ಣ, ವಿನಾಯಕನ್, ವಸಂತ್ ರವಿ, ಯೋಗಿ ಬಾಬು, ನಟಿಸಿದ್ದರು. ಶಿವರಾಜ್ಕುಮಾರ್ ಹಾಗೂ ಮೋಹನ್ಲಾಲ್ ಅತಿಥಿ ಪಾತ್ರದಲ್ಲಿ ಮಿಂಚಿದ್ದರು. ಇವರ ಪಾತ್ರ ಹೈಲೈಟ್ ಆಗಿರುವುದರಿಂದ ಅವರಿಗೆ ಎರಡನೇ ಭಾಗದಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ ಎನ್ನಲಾಗಿದೆ.

ರಜನಿಕಾಂತ್ ಅವರು ಸದ್ಯ ‘ವೆಟ್ಟಯ್ಯನ್’ ಹಾಗೂ ‘ಕೂಲಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ವೆಟ್ಟಯ್ಯನ್’ ಚಿತ್ರವನ್ನು ಜ್ಞಾನವೇಲ್ ನಿರ್ದೇಶನ ಮಾಡುತ್ತಿದ್ದು, ಅಕ್ಟೋಬರ್ 10ರಂದು ರಿಲೀಸ್ ಆಗಲಿದೆ. ಲೋಕೇಶ್ ಕನಗರಾಹ್ ನಟನೆಯ ‘ಕೂಲಿ’ 2025ರಲ್ಲಿ ಬಿಡುಗಡೆ ಕಾಣಲಿದೆ. ಈ ಮಧ್ಯೆ ‘ಜೈಲರ್ 2’ ಚಿತ್ರದ ಕೆಲಸದಲ್ಲೂ ಅವರು ಬ್ಯುಸಿ ಆಗಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ