ಗೆಳೆಯ ತರುಣ್ ಮದುವೆಯಲ್ಲಿ ಸಖತ್ ಆಗಿ ಮಿಂಚಿದ ಚರಣ್-ಪ್ರೇಮ್
Tharun-Sonal marriage: ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಅವರುಗಳು ಮತ್ತೊಮ್ಮೆ ಕ್ರಿಶ್ಚಿಯನ್ ಸಂಪ್ರದಾಯದಂತೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಗೆಳೆಯನ ಮದುವೆಯಲ್ಲಿ ನಟರಾದ ಪ್ರೇಮ್ ಮತ್ತು ಚರಣ್ ಸಂಭ್ರಮಿಸಿದ್ದು ಹೀಗೆ...
ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಆಗಸ್ಟ್ 11 ರಂದು ಬೆಂಗಳೂರಿನಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಇದೀಗ ಮತ್ತೊಮ್ಮೆ ಕ್ರಿಶ್ಚಿಯನ್ ಸಂಪ್ರದಾಯದಂತೆ ಮಂಗಳೂರಿನ ಚರ್ಚ್ ಒಂದರಲ್ಲಿ ವಿವಾಹವಾಗಿದ್ದಾರೆ. ಮದುವೆ ಸಮಾರಂಭದಲ್ಲಿ ಇಬ್ಬರ ಕುಟುಂಬದವರು ಮತ್ತು ಆತ್ಮೀಯ ಗೆಳೆಯರು ಅವರ ಕುಟುಂಬದವರು ಪಾಲ್ಗೊಂಡಿದ್ದರು. ತರುಣ್ ಸುಧೀರ್, ನಟ ಪ್ರೇಮ್ ಹಾಗೂ ಚರಣ್ ಅವರುಗಳು ಆತ್ಮೀಯ ಗೆಳೆಯರಾಗಿದ್ದು, ಅವರೂ ಸಹ ಸೂಟು-ಬೂಟು ಧರಿಸಿ ಮದುವೆಯಲ್ಲಿ ಪಾಲ್ಗೊಂಡಿದ್ದರು. ಇಲ್ಲಿದೆ ವಿಡಿಯೋ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos