ಬ್ರೂನೆಯಲ್ಲಿ ಮೊಳಗಿದ ಮೋದಿ, ಮೋದಿ ಘೋಷಣೆ; ಭಾರತೀಯ ವಲಸಿಗರನ್ನು ಭೇಟಿಯಾದ ಪ್ರಧಾನಿ

PM Modi Brunei Visit: ಪ್ರಧಾನಿ ಮೋದಿ ಬ್ರೂನೆಗೆ ಭೇಟಿ ನೀಡಿದ್ದು, ಅಲ್ಲಿ ನೆಲೆಸಿರುವ ಭಾರತೀಯ ವಲಸಿಗರು ನರೇಂದ್ರ ಮೋದಿಯವರಿಗೆ ಅದ್ದೂರಿ ಸ್ವಾಗತ ನೀಡಿದ್ದಾರೆ. ಬ್ರೂನೆಯ ವಿವಿಧ ಪ್ರದೇಶಗಳಲ್ಲಿ ನೆಲೆಸಿರುವ ಭಾರತೀಯ ವಲಸಿಗರು ತಮ್ಮ ನಾಯಕನನ್ನು ಸ್ವಾಗತಿಸಲು ಒಗ್ಗಟ್ಟಾಗಿ ಸೇರಿದ್ದರು.

ಬ್ರೂನೆಯಲ್ಲಿ ಮೊಳಗಿದ ಮೋದಿ, ಮೋದಿ ಘೋಷಣೆ; ಭಾರತೀಯ ವಲಸಿಗರನ್ನು ಭೇಟಿಯಾದ ಪ್ರಧಾನಿ
|

Updated on:Sep 03, 2024 | 5:32 PM

ಎರಡು ದಿನಗಳ ಬ್ರೂನೆ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂದು ಅಲ್ಲಿ ಭಾರತೀಯ ವಲಸಿಗರು ಅದ್ದೂರಿಯಾಗಿ ಸ್ವಾಗತಿಸಿದರು. ಪ್ರಧಾನಿ ಮೋದಿ ಅವರು ಬ್ರೂನೆ ರಾಜಧಾನಿ ಬಂದರ್ ಸೆರಿ ಬೆಗವಾನ್‌ನಲ್ಲಿರುವ ಭವ್ಯ ಹೋಟೆಲ್‌ಗೆ ಆಗಮಿಸಿದರು. ಅಲ್ಲಿ ವಿವಿಧ ಪ್ರದೇಶಗಳ ಭಾರತೀಯ ವಲಸಿಗರು ತಮ್ಮ ನಾಯಕನನ್ನು ಸ್ವಾಗತಿಸಲು ಸೇರಿದ್ದರಿಂದ ಆ ಹೋಟೆಲ್‌ನಲ್ಲಿ ನಡೆದ ಸಭೆಯು ಸಾಂಸ್ಕೃತಿಕ ಹೆಮ್ಮೆ ಮತ್ತು ರಾಷ್ಟ್ರೀಯ ಮನೋಭಾವದ ರೋಮಾಂಚಕ ಪ್ರದರ್ಶನವನ್ನು ಕಂಡಿತು. ಅಲ್ಲಿ ಸೇರಿದ್ದ ಭಾರತೀಯರಿಗೆ ಹಸ್ತಲಾಘವ ಮಾಡಿ ಭಾರತೀಯ ವಲಸಿಗರೊಂದಿಗೆ ಮೋದಿ ಮಾತನಾಡಿದರು. ಪ್ರಧಾನಿ ಮೋದಿಯನ್ನು ನೋಡಿ ಸಂತಸಗೊಂಡ ಮಕ್ಕಳು ಸೆಲ್ಫೀ ಕ್ಲಿಕ್ಕಿಸಿಕೊಂಡು, ಆಟೋಗ್ರಾಫ್ ಪಡೆದು ಖುಷಿ ಪಟ್ಟರು.

 

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:31 pm, Tue, 3 September 24

Follow us