ಶಿವಣ್ಣನ ಬಳಿಕ ರಜನೀಕಾಂತ್ ಜೊತೆ ನಟಿಸಲಿದ್ದಾರೆ ಕನ್ನಡದ ಮತ್ತೊಬ್ಬ ಸ್ಟಾರ್ ನಟ

Rajinikanth: ಭಾರತದ ದೊಡ್ಡ ಸೂಪರ್ ಸ್ಟಾರ್ ರಜನೀಕಾಂತ್ ಈ ಇಳಿವಯಸ್ಸಿನಲ್ಲಿಯೂ ಬ್ಲಾಕ್ ಬಸ್ಟರ್ ಸಿನಿಮಾಗಳ ನೀಡುತ್ತಿದ್ದಾರೆ. ಅವರೊಟ್ಟಿಗೆ ನಟಿಸಲು ದೊಡ್ಡ ಸ್ಟಾರ್ ನಟರು ಕಾತರರಾಗಿ ಕಾಯುತ್ತಿದ್ದಾರೆ. ಇದೀಗ ರಜನೀಕಾಂತ್ ಜೊತೆಗೆ ಕನ್ನಡದ ಸೂಪರ್ ಸ್ಟಾರ್ ಒಬ್ಬರು ನಟಿಸುತ್ತಿದ್ದಾರೆ. ಯಾರದು?

ಶಿವಣ್ಣನ ಬಳಿಕ ರಜನೀಕಾಂತ್ ಜೊತೆ ನಟಿಸಲಿದ್ದಾರೆ ಕನ್ನಡದ ಮತ್ತೊಬ್ಬ ಸ್ಟಾರ್ ನಟ
Follow us
ಮಂಜುನಾಥ ಸಿ.
|

Updated on: Aug 24, 2024 | 5:31 PM

ಭಾರತದ ಸೂಪರ್ ಸ್ಟಾರ್ ರಜನೀಕಾಂತ್. ಈ ಇಳಿವಯಸ್ಸಿನಲ್ಲಿಯೂ ಬ್ಲಾಕ್ ಬಸ್ಟರ್​ಗಳ ಮೇಲೆ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ರಜನಿಕಾಂತ್ ನೀಡುತ್ತಿದ್ದಾರೆ. ರಜನೀಕಾಂತ್ ಜೊತೆಗೆ ನಟಿಸಲು ದೊಡ್ಡ ದೊಡ್ಡ ಸ್ಟಾರ್ ನಟರುಗಳೇ ತಯಾರಾಗಿ ನಿಂತಿದ್ದಾರೆ. ಈಗಾಗಲೇ ಅಮಿತಾಬ್ ಬಚ್ಚನ್, ಮಲಯಾಳಂನ ಫಹಾದ್ ಫಾಸಿಲ್ ಇನ್ನೂ ಕೆಲವರು ರಜನೀಕಾಂತ್ ಜೊತೆಗೆ ಹೊಸ ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ರಜನೀಕಾಂತ್ ನಟನೆಯ ಹೊಸ ಸಿನಿಮಾದಲ್ಲಿ ಕನ್ನಡದ ಸ್ಟಾರ್ ನಟ ನಟಿಸಲಿದ್ದಾರೆ. ವರ್ಷದ ಹಿಂದೆ ಬಿಡುಗಡೆ ಆಗಿದ್ದ ‘ಜೈಲರ್’ ಸಿನಿಮಾನಲ್ಲಿ ರಜನೀಕಾಂತ್ ಜೊತೆಗೆ ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ‘ಜೈಲರ್’ ಸಿನಿಮಾದಲ್ಲಿನ ಶಿವಣ್ಣನ ಪಾತ್ರ ಭಾರಿ ಹಿಟ್ ಆಗಿತ್ತು. ಇದೀಗ ರಜನೀಕಾಂತ್ ಜೊತೆಗೆ ಕನ್ನಡದ ಮತ್ತೊಬ್ಬ ಸೂಪರ್ ಸ್ಟಾರ್ ನಟಿಸಲಿದ್ದಾರೆ. ಅವರೇ ನಟ ಉಪೇಂದ್ರ.

ರಜನೀಕಾಂತ್​ ನಟಿಸಲಿರುವ ಹೊಸ ಸಿನಿಮಾದಲ್ಲಿ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸುವುದು ಖಾತ್ರಿಯಾಗಿದೆ. ಇದು ಅತಿಥಿ ಪಾತ್ರವಲ್ಲ ಬದಲಿಗೆ ಪೂರ್ಣ ಪ್ರಮಾಣದ ಪಾತ್ರ. ಅಸಲಿಗೆ ಕೆಲವು ಸುದ್ದಿಗಳ ಪ್ರಕಾರ, ರಜನೀಕಾಂತ್ ಎದುರು ವಿಲನ್ ಪಾತ್ರದಲ್ಲಿ ಉಪೇಂದ್ರ ಅಬ್ಬರಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಆದರೆ ಪಾತ್ರ ಯಾವುದೆಂಬುದು ಇನ್ನೂ ಖಾತ್ರಿಯಾಗಿಲ್ಲ. ಆದರೆ ಉಪೇಂದ್ರ, ರಜನೀಕಾಂತ್ ಸಿನಿಮಾದಲ್ಲಿ ನಟಿಸುವುದು ಖಾತ್ರಿಯಾಗಿದೆ.

ಇದನ್ನೂ ಓದಿ:ರಜನೀಕಾಂತ್ ಹೊಸ ಸಿನಿಮಾದಲ್ಲಿ ಸ್ಟಾರ್ ನಟ ವಿಲನ್? ಅಭಿಮಾನಿಗಳ ಬೇಸರ

ಲೋಕೇಶ್ ಕನಗರಾಜ್ ನಿರ್ದೇಶನ ಮಾಡುತ್ತಿರುವ ‘ಕೂಲಿ’ ಸಿನಿಮಾನಲ್ಲಿ ರಜನೀಕಾಂತ್ ನಟಿಸುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಉಪೇಂದ್ರ, ರಜನೀಕಾಂತ್ ಜೊತೆಗೆ ಸಿನಿಮಾದಲ್ಲಿ ನಟಿಸುತ್ತಿರುವ ವಿಷಯವನ್ನು ಸ್ವತಃ ಅವರೇ ಮಾಧ್ಯಮಗಳ ಬಳಿ ಖಾತ್ರಿಪಡಿಸಿದ್ದಾರೆ. ಅಲ್ಲದೆ, ‘ರಜನೀಕಾಂತ್ ಅಂಥಹಾ ಸೂಪರ್ ಸ್ಟಾರ್ ಹಾಗೂ ಲೋಕೇಶ್ ಕನಗರಾಜ್ ಅಂಥಹಾ ಪ್ರತಿಭಾವಂತರ ಜೊತೆಗೆ ನಟಿಸುತ್ತಿರುವುದು ನನ್ನ ಅದೃಷ್ಟ’ ಎಂದು ಉಪೇಂದ್ರ ಹೇಳಿಕೊಂಡಿದ್ದಾರೆ. ಅಕ್ಟೋಬರ್ ತಿಂಗಳಿನಿಂದ ರಜನೀಕಾಂತ್ ಜೊತೆಗೆ ಚಿತ್ರೀಕರಣ ಆರಂಭಿಸಲಿದ್ದಾರೆ ಉಪ್ಪಿ.

ದುನಿಯಾ ವಿಜಯ್, ಲೋಕೇಶ್ ಕನಗರಾಜ್ ಅವರ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಮಾತು ಈ ಹಿಂದೆ ಕೇಳಿ ಬಂದಿತ್ತು. ಆದರೆ ಇದೀಗ ಉಪೇಂದ್ರ ಆ ಪಾತ್ರಕ್ಕೆ ಆಯ್ಕೆ ಆದಂತಿದೆ. ಅಂದಹಾಗೆ ಉಪೇಂದ್ರಗೆ ಇದು ಎರಡನೇ ತಮಿಳು ಸಿನಿಮಾ. ಈ ಮೊದಲು ‘ಸತ್ಯಂ’ ಹೆಸರಿನ ತಮಿಳು ಸಿನಿಮಾದಲ್ಲಿ ಉಪೇಂದ್ರ ನಟಿಸಿದ್ದರು. ಆ ಸಿನಿಮಾದಲ್ಲಿ ವಿಶಾಲ್ ನಾಯಕ. ಉಪೇಂದ್ರ ಈ ಹಿಂದೆ ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ರಾ’, ‘ಕನ್ಯಾದಾನಂ’, ‘ಒಕೆ ಮಾಟ’, ‘ನೀತೋನೆ ಉಂಟಾನು’, ‘ಟಾಸ್’, ‘ಸೆಲ್ಯೂಟ್’, ಅಲ್ಲು ಅರ್ಜುನ್ ನಟನೆಯ ‘ಸನ್ ಆಫ್ ಸತ್ಯಮೂರ್ತಿ’, ‘ಗನಿ’ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಇನ್ನು ಕನ್ನಡದಲ್ಲಿ ಪ್ರಸ್ತುತ ‘ಕಬ್ಜ 2’, ‘45’ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ