AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜನೀಕಾಂತ್ ಹೊಸ ಸಿನಿಮಾದಲ್ಲಿ ಸ್ಟಾರ್ ನಟ ವಿಲನ್? ಅಭಿಮಾನಿಗಳ ಬೇಸರ

ಸೈಫ್ ಅಲಿ ಖಾನ್, ಸಂಜಯ್ ದತ್, ಜಗಪತಿ ಬಾಬು, ಬಾಬಿ ಡಿಯೋಲ್ ಇನ್ನಿತರರು ನಾಯಕರಾಗಿದ್ದವು ಈಗ ವಿಲನ್​ಗಳಾಗಿ ಮಿಂಚುತ್ತಿದ್ದಾರೆ. ಇದೀಗ ದಕ್ಷಿಣದ ಸೂಪರ್ ಸ್ಟಾರ್ ಒಬ್ಬರು ಮತ್ತೊಬ್ಬ ಸೂಪರ್ ಸ್ಟಾರ್ ಸಿನಿಮಾನಲ್ಲಿ ವಿಲನ್ ಆಗಲು ರೆಡಿಯಾಗಿದ್ದಾರೆ. ಆದರೆ ಅಭಿಮಾನಿಗಳಿಗೆ ಇದು ಇಷ್ಟವಿಲ್ಲ.

ರಜನೀಕಾಂತ್ ಹೊಸ ಸಿನಿಮಾದಲ್ಲಿ ಸ್ಟಾರ್ ನಟ ವಿಲನ್? ಅಭಿಮಾನಿಗಳ ಬೇಸರ
ಮಂಜುನಾಥ ಸಿ.
|

Updated on: Jul 26, 2024 | 12:10 PM

Share

ಒಂದು ಕಾಲದಲ್ಲಿ ನಾಯಕ ನಟರಾಗಿ ಮಿಂಚಿದ ಕೆಲವರು ಈಗ ವಿಲನ್​ಗಳಾಗಿ ಮಿಂಚುತ್ತಿದ್ದಾರೆ. ಜಗಪತಿಬಾಬು ಅದಕ್ಕೆ ಒಳ್ಳೆಯ ಉದಾಹರಣೆ. ಹಿಂದಿಯಲ್ಲಿ ಬಾಬಿ ಡಿಯೋಲ್, ಸೈಫ್ ಅಲಿ ಖಾನ್, ಸಂಜಯ್ ದತ್ ಇವರೆಲ್ಲ ನಾಯಕ ನಟರಾಗಿ ದೊಡ್ಡ ಹೆಸರು ಮಾಡಿದ್ದವರು ಈಗ ವಿಲನ್​ ಆಗಿಯೂ ಮಿಂಚುತ್ತಿದ್ದಾರೆ. ಅಂತೆಯೇ ದಕ್ಷಿಣ ಭಾರತದಲ್ಲಿ ಕೆಲವು ನಾಯಕ ನಟರು ವಿಲನ್​ಗಳಾಗಿದ್ದಾರೆ. ಆದರೆ ಈಗ ಸೂಪರ್ ಸ್ಟಾರ್​ ಒಬ್ಬರು ವಿಲನ್ ಆಗಿ ನಟಿಸಲು ಮುಂದಾಗಿದ್ದಾರೆ. ಆದರೆ ಅವರ ಅಭಿಮಾನಿಗಳಿಗೆ ಇದು ಇಷ್ಟವಾಗುತ್ತಿಲ್ಲ.

ವೃತ್ತಿ ಬದುಕಿನ ಉದ್ದಕ್ಕೂ ರೊಮ್ಯಾಂಟಿಕ್ ಹೀರೋ, ಆಂಗ್ರಿ ಯಂಗ್ ಮ್ಯಾನ್, ಮಧ್ಯಮ ವರ್ಗದ ಡಾರ್ಲಿಂಗ್ ಆಗಿಯೇ ಕಾಣಿಸಿಕೊಂಡಿರುವ ನಟ ನಾಗಾರ್ಜುನ ಈಗ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ತಮ್ಮ ಅಂದದಿಂದ ‘ಮನ್ಮಥ’ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ನಾಗಾರ್ಜುನ ಅವರನ್ನು ವಿಲನ್ ಆಗಿ ನೋಡಲು ಜನ ಸಿದ್ಧರಾಗಿಲ್ಲ ಎನಿಸುತ್ತಿದೆ. ಹಾಗಾಗಿ ನಾಗಾರ್ಜುನ ವಿಲನ್ ಆಗಿ ನಟಿಸಲು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ಎತ್ತಿದ್ದಾರೆ.

ಸೂಪರ್ ಸ್ಟಾರ್ ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾದಲ್ಲಿ ನಟ ನಾಗಾರ್ಜುನ ವಿಲನ್ ಆಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾವನ್ನು ತಮಿಳಿನ ಯಶಸ್ವಿ ನಿರ್ದೇಶಕ ಲೋಕೇಶ್ ಕನಗರಾಜ್ ನಿರ್ದೇಶನ ಮಾಡುತ್ತಿದ್ದು, ಸಿನಿಮಾದಲ್ಲಿ ನಾಗಾರ್ಜುನ ಅವರನ್ನು ವಿಲನ್ ಆಗಿ ತೋರಿಸಲು ಇಷ್ಟಪಡುತ್ತಿದ್ದಾರೆ. ನಾಗಾರ್ಜುನ ಸಹ ಕತೆ ಕೇಳಿದ್ದಾರೆ ಎನ್ನಲಾಗುತ್ತಿದೆ. ಆದರೆ ಈಗ ಅಭಿಮಾನಿಗಳ ಆಕ್ಷೇಪ ಇರುವ ಕಾರಣ ಯಾವ ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಮೋದಿ ಪ್ರಮಾಣವಚನದಲ್ಲಿ ಭಾಗಿಯಾಗಲಿದ್ದಾರೆ ರಜನೀಕಾಂತ್, ಅನಿಲ್ ಕಪೂರ್

ಲೋಕೇಶ್ ಕನಗರಾಜ್ ಸಿನಿಮಾಗಳಲ್ಲಿ ವಿಲನ್​ ಪಾತ್ರಗಳು ಸಖತ್ ಪವರ್​ಫುಲ್ ಆಗಿರುತ್ತವೆ. ಮತ್ತು ದೊಡ್ಡ ನಟರನ್ನೇ ವಿಲನ್ ಪಾತ್ರಕ್ಕೆ ಲೋಕೇಶ್ ಆಯ್ಕೆ ಮಾಡುತ್ತಾರೆ. ವಿಜಯ್ ಸೇತುಪತಿ, ಸ್ಟಾರ್ ನಟ ಸೂರ್ಯ, ಸಂಜಯ್ ದತ್ ಹೀಗೆ ದೊಡ್ಡ ನಟರುಗಳನ್ನು ವಿಲನ್ ಪಾತ್ರಗಳಲ್ಲಿ ಲೋಕೇಶ್ ತೋರಿಸಿದ್ದಾರೆ. ಇದೀಗ ನಾಗಾರ್ಜುನ ಅವರನ್ನು ವಿಲನ್ ಆಗಿ ತೋರಿಸುವ ಉಮೇದಿನಲ್ಲಿದ್ದಾರೆ.

ನಾಗಾರ್ಜುನ ಪ್ರಸ್ತುತ ಧನುಶ್ ನಟನೆಯ ‘ಕುಬೇರ’ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಶೇಖರ್ ಕಮ್ಮುಲ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ. ಅದರ ಹೊರತಾಗಿ ವಿಜಯ್ ಬಿನ್ನಿ ನಿರ್ದೇಶನದ ಹೊಸ ಸಿನಿಮಾದಲ್ಲಿಯೂ ನಾಗಾರ್ಜುನ ನಟಿಸುತ್ತಿದ್ದಾರೆ. ಇದರ ಜೊತೆಗೆ ತೆಲುಗಿನ ಬಿಗ್​ಬಾಸ್​ನ ಹೊಸ ಸೀಸನ್​ ನಿರೂಪಣೆಯನ್ನೂ ಸಹ ನಾಗಾರ್ಜುನ ಮಾಡಬೇಕಿದೆ.

ಸಿನಿಮಾ ಸುದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ