AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅದು ಬಟ್ಟೆಯ ತಪ್ಪಲ್ಲ, ಕ್ಯಾಮೆರಾಮೆನ್ ತಪ್ಪು’; ಬೋಲ್ಡ್ ಫೋಟೋ ಟೀಕೆಗೆ ಅಮಲಾ ಪೌಲ್ ಉತ್ತರ

ಹೀರೋಯಿನ್​ಗಳು ಸುದ್ದಿಗೋಷ್ಠಿಗೆ ಸ್ವಲ್ಪ ಬೋಲ್ಡ್ ಆಗಿ ಬಂದರೂ ಕೆಲವರು ಅವರನ್ನು ಬೇರೆ ಬೇರೆ ರೀತಿಯ ಆ್ಯಂಗಲ್​ನಲ್ಲಿ ಸೆರೆ ಹಿಡಿಯಲು ಪ್ರಯತ್ನಿಸುತ್ತಾರೆ ಎನ್ನುವ ಆರೋಪ ಇದೆ. ಬಾಲಿವುಡ್ ಮಂದಿಯೂ ಈ ಆರೋಪ ಮಾಡುತ್ತಲೇ ಬರುತ್ತಾರೆ. ಈ ಬಗ್ಗೆ ಅಮಲಾ ಪೌಲ್​ಗೂ ತಕರಾರು ಇದೆ.

‘ಅದು ಬಟ್ಟೆಯ ತಪ್ಪಲ್ಲ, ಕ್ಯಾಮೆರಾಮೆನ್ ತಪ್ಪು’; ಬೋಲ್ಡ್ ಫೋಟೋ ಟೀಕೆಗೆ ಅಮಲಾ ಪೌಲ್ ಉತ್ತರ
ಅಮಲಾ ಪೌಲ್
ರಾಜೇಶ್ ದುಗ್ಗುಮನೆ
|

Updated on:Jul 26, 2024 | 10:57 AM

Share

ನಟಿ ಅಮಲಾ ಪೌಲ್ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರು ಹಾಕುವ ಬಟ್ಟೆಯ ಬಗ್ಗೆ ಕೆಲವರು ತಕರಾರು ತೆಗೆದಿದ್ದು ಇದೆ. ಅವರು ಬೋಲ್ಡ್ ಆದ ಬಟ್ಟೆ ಹಾಕುತ್ತಾರೆ ಎಂದು ಅನೇಕರು ಟೀಕೆ ಮಾಡಿದ್ದಾರೆ. ಈಗ ಅವರು ಈ ವಿಚಾರದಲ್ಲಿ ಮೌನ ಮುರಿದಿದ್ದಾರೆ. ಮುಂಬರುವ ‘ಲೆವೆಲ್ ಕ್ರಾಸ್’ ಚಿತ್ರದ ಪ್ರಚಾರದ ವೇಳೆ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ನನ್ನ ಡ್ರೆಸ್ಸಿಂಗ್ ಸ್ಟೈಲ್​ನ ಹೇಗೆ ತೋರಿಸುತ್ತಾರೆ ಎಂಬುದರಲ್ಲೇ ಸಮಸ್ಯೆ ಇದೆ’ ಎಂದಿದ್ದಾರೆ ಅವರು.

ಹೀರೋಯಿನ್​ಗಳು ಸುದ್ದಿಗೋಷ್ಠಿಗೆ ಸ್ವಲ್ಪ ಬೋಲ್ಡ್ ಆಗಿ ಬಂದರೂ ಕೆಲವರು ಅವರನ್ನು ಬೇರೆ ಬೇರೆ ರೀತಿಯ ಆ್ಯಂಗಲ್​ನಲ್ಲಿ ಸೆರೆ ಹಿಡಿಯಲು ಪ್ರಯತ್ನಿಸುತ್ತಾರೆ ಎನ್ನುವ ಆರೋಪ ಇದೆ. ಬಾಲಿವುಡ್ ಮಂದಿಯೂ ಈ ಆರೋಪ ಮಾಡುತ್ತಲೇ ಬರುತ್ತಾರೆ. ಈ ಬಗ್ಗೆ ಅಮಲಾ ಪೌಲ್​ಗೂ ತಕರಾರು ಇದೆ. ಈ ಬಗ್ಗೆ ಅವರು ಓಪನ್ ಆಗಿ ಮಾತನಾಡಿದ್ದಾರೆ.

‘ಸಮಸ್ಯೆ ಇರೋದು ಕ್ಯಾಮೆರಾಗಳು ಹೇಗೆ ನನ್ನ ಉಡುಗೆ ಶೈಲಿಯನ್ನು ತೋರಿಸುತ್ತಾರೆ ಎಂಬುದರಲ್ಲಿ. ನನಗೆ ಖುಷಿ ನೀಡೋದನ್ನು ನಾನು ಧರಿಸುತ್ತೇನೆ. ಫಂಕ್ಷನ್​ಗಳಿಗೆ ನಾನು ಧರಿಸೋ ಡ್ರೆಸ್ ಅಸಹಜವಾಗಿ ಇರುವುದಿಲ್ಲ. ಅವರು ನನ್ನನ್ನು ಹೇಗೆ ಬಿಂಬಿಸುತ್ತಾರೆ ಎಂಬುದರಲ್ಲಿ ಸಮಸ್ಯೆ ಇದೆ. ಅದನ್ನು ನಿಯಂತ್ರಿಸೋದು ನನ್ನ ಕೈಯಲ್ಲಿ ಇಲ್ಲ’ ಎಂದಿದ್ದಾರೆ ಅವರು.

‘ನಾನು ಎಲ್ಲ ರೀತಿಯ ಡ್ರೆಸ್​ನ ಹಾಕುತ್ತೇನೆ. ಪಾಶ್ಚಾತ್ಯ ಹಾಗೂ ಸಾಂಪ್ರದಾಯಿಕ ಉಡುಗೆಯನ್ನೂ ಧರಿಸುತ್ತೇನೆ’ ಎಂದು ಅವರು ಹೇಳಿಕೊಂಡಿದ್ದಾರೆ. ಈ ಮೂಲಕ ಟ್ರೋಲ್​ಗಳ ಬಾಯಿಯನ್ನು ಅವರು ಮುಚ್ಚಿಸಿದ್ದಾರೆ.

ಇದನ್ನೂ ಓದಿ: ಡಿಫರೆಂಟ್​ ಆಗಿದೆ ಅಮಲಾ ಪೌಲ್​ ಪ್ರೆಗ್ನೆನ್ಸಿ ಫೋಟೋಶೂಟ್​

ಅಮಲಾ ಪೌಲ್ ಅವರು ಪೃಥ್ವಿರಾಜ್ ಸುಕುಮಾರನ್ ನಟನೆಯ ‘ಆಡುಜೀವಿತಂ’ ಸಿನಿಮಾದಲ್ಲಿ ನಟಿಸಿದ್ದಾರೆ. ಇದರಲ್ಲಿ ಅವರ ಪಾತ್ರ ಹೀಗೆ ಬಂದು ಹಾಗೆ ಹೋಗುತ್ತದೆ. ಅವರು ಕಥಾ ನಾಯಕನ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಇತ್ತೀಚೆಗೆ ನೆಟ್​ಫ್ಲಿಕ್ಸ್ ಒಟಿಟಿ ಮೂಲಕ ಪ್ರಸಾರ ಕಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:48 am, Fri, 26 July 24