‘ಮಾಡಿದ ತಪ್ಪಿಗೆ ಸ್ತ್ರೀಲೋಲ ಎಂಬ ಹಣಪಟ್ಟಿಯೊಂದಿಗೆ ಬದುಕುತ್ತಿದ್ದೇನೆ’; ರಣಬೀರ್ ಕಪೂರ್ ಬೇಸರ

ರಣಬೀರ್ ಕಪೂರ್ ಅವರು ಕತ್ರಿನಾ ಕೈಫ್ ಹಾಗೂ ದೀಪಿಕಾ ಜೊತೆ ಡೇಟಿಂಗ್ ಮಾಡಿದ್ದಾರೆ. ಇದರಿಂದ ಅವರು ಈಗಲೂ ತೊಂದರೆ ಅನುಭವಿಸುತ್ತಿದ್ದಾರೆ. ಈ ವಿಚಾರ ಇಟ್ಟುಕೊಂಡು ರಣಬೀರ್ ಅವರನ್ನು ಈಗಲೂ ಟೀಕೆ ಮಾಡಲಾಗುತ್ತಿದೆಯಂತೆ. ಈ ಬಗ್ಗೆ ಅವರು ಬೇಸರ ಹೊರ ಹಾಕಿದ್ದಾರೆ.

‘ಮಾಡಿದ ತಪ್ಪಿಗೆ ಸ್ತ್ರೀಲೋಲ ಎಂಬ ಹಣಪಟ್ಟಿಯೊಂದಿಗೆ ಬದುಕುತ್ತಿದ್ದೇನೆ’; ರಣಬೀರ್ ಕಪೂರ್ ಬೇಸರ
‘ಮಾಡಿದ ತಪ್ಪಿಗೆ ಸ್ತ್ರೀಲೋಲ ಎಂಬ ಹಣಪಟ್ಟಿಯೊಂದಿಗೆ ಬದುಕುತ್ತಿದ್ದೇನೆ’; ರಣಬೀರ್ ಕಪೂರ್ ಬೇಸರ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jul 26, 2024 | 9:04 AM

ಬಾಲಿವುಡ್ ನಟ ರಣಬೀರ್ ಕಪೂರ್ ಅವರು ಹಲವು ಹೀರೋಯಿನ್​ಗಳ ಜೊತೆ ಸುತ್ತಾಡಿದ್ದಾರೆ. ಆದರೆ, ಕೊನೆಯಲ್ಲಿ ಅವರು ಮದುವೆ ಆಗಿದ್ದು ಆಲಿಯಾ ಭಟ್ ಅವರನ್ನು. ದೀಪಿಕಾ ಪಡುಕೋಣೆಗೆ ರಣಬೀರ್ ಅವರು ಕೈಕೊಟ್ಟಾಗ ಅನೇಕರು ರಣಬೀರ್ ಅವರನ್ನು ಮೋಸಗಾರ ಎಂದರು. ಕತ್ರಿನಾ ಜೊತೆ ಸುತ್ತಾಡಿ ಬ್ರೇಕಪ್ ಆದಾಗಲೂ ಇದೇ ಮಾತು ಕೇಳಿ ಬಂತು. ಇದೇ ಇಮೇಜ್​ನ ಅವರು ಜೀವನದ ಉದ್ದಕ್ಕೂ ತೆಗೆದುಕೊಂಡು ಹೋಗುತ್ತಿದ್ದಾರೆ. ರಣಬೀರ್ ಕಪೂರ್ ಅವರು ಇತ್ತೀಚೆಗೆ ಈ ಬಗ್ಗೆ ಮಾತನಾಡಿದ್ದಾರೆ.

ರಣಬೀರ್ ಕಪೂರ್ ಅವರು ಖ್ಯಾತ ನಟ. ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ. ಹುಡುಗಿಯ ವಿಚಾರದಲ್ಲಿ ಅವರ ಬಗ್ಗೆ ಅನೇಕರಿಗ ಒಳ್ಳೆಯ ಅಭಿಪ್ರಾಯ ಇಲ್ಲ. ಅವರನ್ನು ಅನೇಕರು ಸ್ತ್ರೀಲೋಲ ಎಂದು ಕರೆದಿದ್ದಾರೆ. ಈಗಲೂ ಕೆಲವರು ರಣಬೀರ್ ಅವರನ್ನು ಮೋಸಗಾರ ಎನ್ನುತ್ತಾರೆ. ಇದೆಲ್ಲವನ್ನೂ ಮರೆತು ರಣಬೀರ್ ಅವರು ಆಲಿಯಾ ಭಟ್​ನ ವಿವಾಹ ಆಗಿದ್ದಾರೆ. ಈ ದಂಪತಿಗೆ ರಹಾ ಹೆಸರಿನ ಮಗಳು ಇದ್ದಾಳೆ. ಚೀಟರ್ ಎಂದು ಜನರು ಕರೆಯುವ ಬಗ್ಗೆ ರಣಬೀರ್ ಮಾತನಾಡಿದ್ದಾರೆ.

‘ನಾನು ಎರಡು ಯಶಸ್ವಿ ನಾಯಕಿಯರ (ಕತ್ರಿನಾ ಹಾಗೂ ದೀಪಿಕಾ) ಜೊತೆ ಡೇಟ್ ಮಾಡಿದೆ. ಅದು ನನ್ನ ಐಡೆಂಟಿಟಿ ಆಗಿ ಹೋಯಿತು. ನನಗೆ ಚೀಟರ್, ಸ್ತ್ರೀಲೋಲ ಎನ್ನುವ ಟ್ಯಾಗ್ ಸಿಕ್ಕಿತು. ನಾನು ಇದೇ ಲೇಬಲ್ ಒಂದಿಗೆ ನನ್ನ ಜೀವನದ ಸಾಕಷ್ಟು ಸಮಯವನ್ನು ಕಳೆದಿದ್ದೇನೆ. ಈಗಲೂ ಹಾಗೆಯೇ ಬದುಕುತ್ತಿದ್ದೇನೆ’ ಎಂದಿದ್ದಾರೆ ಅವರು.

ರಹಾ ಮೇಲೆ ರಣಬೀರ್ ಕಪೂರ್ ಅವರಿಗೆ ಅಪಾರ ಪ್ರೀತಿ ಇದೆ. ಈ ಬಗ್ಗೆಯೂ ಅವರು ಮಾತನಾಡಿದ್ದಾರೆ. ‘ರಹಾ ಮೇಲೆ ನನಗೆ ಸಾಕಷ್ಟು ಪ್ರೀತಿ. ಯಾರೋ ನನ್ನ ಹೃದಯವನ್ನು ತೆಗೆದು ಕೈಮೇಲೆ ಇಟ್ಟಂತೆ ಭಾಸವಾಗುತ್ತದೆ’ ಎಂದು ಹೇಳಿದ್ದಾರೆ. ಈ ಮೂಲಕ ಮಗಳ ಮೇಲಿನ ಪ್ರೀತಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರಣಬೀರ್ ಕಪೂರ್-ಆಲಿಯಾ ಭಟ್​ ಮನೆಗೆ ಬಂತು ಲಕ್ಷುರಿ ಲೆಕ್ಸಸ್ ಕಾರು

ರಣಬೀರ್ ಕಪೂರ್ ಅವರು ಹೆಚ್ಚಿನ ವಿಚಾರಗಳ ಬಗ್ಗೆ ಓಪನ್ ಆಗಿ ಮಾತನಾಡುವುದಿಲ್ಲ. ಓಪನ್ ಆಗಿ ಮಾತನಾಡುವ ಬಗ್ಗೆ ಅವರಿಗೆ ಭಯ ಇದೆಯಂತೆ. ಈ ಕಾರಣದಿಂದಲೇ ರಣಬೀರ್ ಅವರು ಯಾವುದೇ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿಲ್ಲ. ಅವರು ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಖಾತೆ ಹೊಂದಿಲ್ಲ. ರಣಬೋರ್ ಕಪೂರ್ ಅವರು ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾದಲ್ಲಿ ರಾಮನ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿ. ಇದರ ಜೊತೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್ ಆ್ಯಂಡ್ ವಾರ್’ ಸಿನಿಮಾದಲ್ಲಿಯೂ ರಣಬೀರ್ ಕಪೂರ್ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.