AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳ ವಿಧಾನಸಭೆ: ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದಲ್ಲಿ ಕೆ.ಕೆ.ಶೈಲಜಾಗಿಲ್ಲ ಸಚಿವ ಸ್ಥಾನ, ಹೊಸಬರಿಗೆ ಮಣೆ

Kerala Cabinet: ಈ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೊರತು ಪಡಿಸಿ ಇನ್ನುಳಿದವರೆಲ್ಲೂ ಹೊಸಬರರಾಗಿರಬೇಕು ಎಂದು ಎಲ್​ಡಿಎಫ್ ತೀರ್ಮಾನಿಸಿದೆ.  ಸಿಪಿಎಂ ಪಕ್ಷದಿಂದ ಎಂ.ಬಿ ರಾಜೇಶ್ ಸ್ಪೀಕರ್ ಆಗಲಿದ್ದಾರೆ.

ಕೇರಳ ವಿಧಾನಸಭೆ: ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದಲ್ಲಿ ಕೆ.ಕೆ.ಶೈಲಜಾಗಿಲ್ಲ ಸಚಿವ ಸ್ಥಾನ, ಹೊಸಬರಿಗೆ ಮಣೆ
ಕೆೆ.ಕೆ.ಶೈಲಜಾ- ಪಿಣರಾಯಿ ವಿಜಯನ್
ರಶ್ಮಿ ಕಲ್ಲಕಟ್ಟ
|

Updated on:May 18, 2021 | 2:52 PM

Share

ತಿರುವನಂತಪುರಂ: ಕೇರಳವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿ ಎರಡನೇ ಬಾರಿ ಅಧಿಕಾರಕ್ಕೇರುತ್ತಿರುವ ಪಿಣರಾಯಿ ವಿಜಯನ್ ನೇತೃತ್ವದ ಸಚಿವ ಸಂಪುಟ ಮೇ 20ರಂದು ಪ್ರಮಾಣ ವಚನ ಸ್ವೀಕರಿಸಲಿದೆ. ಈ ಬಾರಿ ಸಚಿವ ಸ್ಥಾನ ನೀಡಿರುವ ನಾಯಕರ ಪಟ್ಟಿ ಬಹುತೇಕ ಸಿದ್ಧವಾಗಿದ್ದು, ಈ ಪಟ್ಟಿಯಲ್ಲಿ ಆರೋಗ್ಯ ಸಚಿವರಾಗಿದ್ದ ಕೆ.ಕೆ.ಶೈಲಜಾ ಅವರ ಹೆಸರು ಇಲ್ಲ ಎಂದು ಮೂಲಗಳು ವರದಿ ಮಾಡಿವೆ. ಈ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೊರತು ಪಡಿಸಿ ಇನ್ನುಳಿದವರೆಲ್ಲೂ ಹೊಸಬರರಾಗಿರಬೇಕು ಎಂದು ಎಲ್​ಡಿಎಫ್ ತೀರ್ಮಾನಿಸಿದೆ.  ಸಿಪಿಎಂ ಪಕ್ಷದಿಂದ ಎಂ.ಬಿ ರಾಜೇಶ್ ಸ್ಪೀಕರ್ ಆಗಲಿದ್ದಾರೆ. ವೀಣಾ ಜಾರ್ಜ್, ಆರ್. ಬಿಂದು, ಪಿ.ಎ. ಮುಹಮ್ಮದ್ ರಿಯಾಜ್, ವಿ. ಶಿವಂಕುಟ್ಟಿ, ಕೆ.ರಾಧಾಕೃಷ್ಣನ್, ಪಿ. ರಾಜೀವ್, ಕೆ.ಎನ್. ಬಾಲಗೋಪಾಲ್, ಸಾಜಿ ಚೆರಿಯನ್, ಎಂ.ವಿ. ಗೋವಿಂದನ್, ವಿ.ಎನ್. ವಾಸವನ್, ವಿ. ಅಬ್ದುಲ್ ರಹಮಾನ್ ಸಚಿವರಾಗಲಿದ್ದಾರೆ ಎಂದು ಮಲಯಾಳ ಮನೋರಮಾ ಪತ್ರಿಕೆ ವರದಿ ಮಾಡಿದೆ.

ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ವ್ಯಕ್ತಿಗಳನ್ನು ಕೈ ಬಿಟ್ಟು ಹೊಸಬರಿಗೆ ಮಣೆ ಹಾಕಿದಂತೆ ಸಚಿವರ ಆಯ್ಕೆ ವೇಳೆ ಈ ಹಿಂದೆ ಸಚಿವರಾಗಿದ್ದವರನ್ನು ಹೊರತು ಪಡಿಸಿ ಹೊಸಬರಿಗೆ ಆದ್ಯತೆ ನೀಡಲಾಗಿದೆ. ಕಳೆದ ಬಾರಿ ಮೆರ್ಸಿ ಕುಟ್ಟಿ ಅಮ್ಮ ಮತ್ತು ಶೈಲಜಾ ಟೀಚರ್ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಈ ಬಾರಿ ಮೂವರು ಮಹಿಳೆಯರಿಗೆ ಸ್ಥಾನ ನೀಡಲಾಗಿದೆ.

ಸಿಪಿಐಗೆ ನಾಲ್ಕು ಸಚಿವ ಸ್ಥಾನ ಎಲ್​ಡಿಎಫ್ ಮೈತ್ರಿಕೂಟದ ಪ್ರಧಾನ ಅಂಗವಾಗಿರುವ ಸಿಪಿಐ ಪಕ್ಷದ ನಾಲ್ವರು ನಾಯಕರಿಗೆ ಈ ಬಾರಿ ಸಚಿವ ಸ್ಥಾನ ನೀಡಲಾಗಿದೆ.

ಪಿ ಪ್ರಸಾದ್, ಕೆ ರಾಜನ್, ಜೆ. ಚಿಂಜುರಾಣಿ ಮತ್ತು ಜಿ.ಆರ್ ಅನಿಲ್ ಅವರು ಸಚಿವರಾಗಲಿದ್ದಾರೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಕಾನಂ ರಾಜೇಂದ್ರನ್ ತಿಳಿಸಿದ್ದಾರೆ. ಅಡೂರ್ ಶಾಸಕ ಚಿಟ್ಟಯಂ ಗೋಪಕುಮಾರ್ ಉಪ ಸ್ಪೀಕರ್ ಆಗಲಿದ್ದಾರೆ. ಸಿಪಿಐ ಮಹಿಳಾ ಮಂತ್ರಿಯನ್ನು ಹೊಂದಿರುವುದು ಇದೇ ಮೊದಲು.

ಒಲ್ಲೂರು ಶಾಸಕ ಮತ್ತು ಮುಖ್ಯ ವಿಪ್ ಕೆ. ರಾಜನ್, ಚೆರ್ತಲಾ ಶಾಸಕ ಪಿ ಪ್ರಸಾದ್ ಮತ್ತು ಚಡಯಮಂಗಲಂ ಶಾಸಕ ಚಿಂಜುರಾಣಿ ಸಿಪಿಐ ಕಾರ್ಯಕಾರಿ ಸದಸ್ಯರಾಗಿದ್ದಾರೆ. ನೆಡುಮಂಙಾಡ್ ಶಾಸಕ ಜಿ.ಆರ್ ಅನಿಲ್ ಪರಿಷತ್ತಿನ ಸದಸ್ಯರಾಗಿದ್ದರು.ಕಳೆದ ಬಾರಿ ಕಾಸರಗೋಡು ಜಿಲ್ಲೆಯ ಇ.ಚಂದ್ರಶೇಖರನ್  ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು.  ಆದರೆ ಈ ಬಾರಿ  ಕಾಸರಗೋಡು ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡಿಲ್.

ಶೈಲಜಾಗಿಲ್ಲ  ಸ್ಥಾನ

ಕೊವಿಡ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸಿ ಪ್ರಶಂಸೆಗೆ ಪಾತ್ರರಾಗಿದ್ದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರನ್ನು ಎಡಪಂಥೀಯ ಸರ್ಕಾರದ ಹೊಸ ಕ್ಯಾಬಿನೆಟ್‌ನಿಂದ ಹೊರಗಿಡಲಾಗಿದೆ.  64 ರ ಹರೆಯದ ಶೈಲಾಜಾ ಟೀಚರ್ ಕಣ್ಣೂರು ಜಿಲ್ಲೆಯ ಮಟ್ಟನ್ನೂರು ವಿಧಾನಸಭಾ ಕ್ಷೇತ್ರದಿಂದ  60,000 ಮತಗಳಿಂದ ಜಯಗಳಿಸಿದ್ದರು.

ಕೇರಳದಲ್ಲಿ ಕೊವಿಡ್ ಏಕಾಏಕಿ ನಿಭಾಯಿಸಿದ್ದಕ್ಕಾಗಿ ಎಂ.ಎಸ್.ಶೈಲಜಾ ಅವರು “ರಾಕ್ ಸ್ಟಾರ್” ಆರೋಗ್ಯ ಮಂತ್ರಿ ಎಂದು ಪ್ರಶಂಸಿಸಲ್ಪಟ್ಟಿದ್ದರು.ನಿಫಾ ವೈರಸ್ ಬಿಕ್ಕಟ್ಟನ್ನು ನಿರ್ವಹಿಸಿದ ರೀತಿಗೆ ಕೂಡಾ ಶೈಲಜಾ ಮೆಚ್ಚುಗೆಗೆ ಪಾತ್ರರಾಗಿದ್ದರು. ಸೆಪ್ಟೆಂಬರ್‌ನಲ್ಲಿ, ಬ್ರಿಟನ್  ಮೂಲದ ಪ್ರಾಸ್ಪೆಕ್ಟ್ ನಿಯತಕಾಲಿಕವು  “ವರ್ಷದ 2020 ರ ಉನ್ನತ ಚಿಂತಕ” ಎಂದು ಆಯ್ಕೆ ಮಾಡಿತ್ತು.

ಇದನ್ನೂ ಓದಿ:  ಫಲಿತಾಂಶ ವಿಶ್ಲೇಷಣೆ: 40 ವರ್ಷಗಳ ನಂತರ ಕೇರಳದಲ್ಲಿ ಕಮ್ಯೂನಿಸ್ಟ್ ಪಕ್ಷಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟ ಪಿಣರಾಯಿ ವಿಜಯನ್

ಎಲ್‌ಡಿಎಫ್ ನೇತೃತ್ವದ ಕೇರಳ ವಿಧಾನಸಭೆಯಲ್ಲಿ ಅಳಿಯ ಶಾಸಕ, ಮಾವ ಮುಖ್ಯಮಂತ್ರಿ

(KK Shailaja left out new Kerala Cabinet of the Pinarayi vijayan led LDF government)

Published On - 2:27 pm, Tue, 18 May 21