AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷಿ ಇಲಾಖೆಗೆ ಬಾಡಿಗೆ ನೀಡಿರುವ ಕಾರಿನಲ್ಲಿ ಅಳಿಯತನಕ್ಕೆ ಹೊರಟ ನವಜೋಡಿ; ಪೊಲೀಸರಿಂದ ವಾಹನ ಸೀಜ್

ಕ್ರಿಮಿನಲ್ ಐಡಿಯಾ ಬಳಸಿ ಮಾವನ ಮನೆಯತ್ತ ಹೊರಟಿದ್ದ ನವವಿವಾಹಿತರನ್ನು ಪೊಲೀಸರು ತಡೆದಿದ್ದಾರೆ. ಮೇ 14 ರಂದು ಮದುವೆಯಾಗಿರುವ ಎರಡು ಜೋಡಿಗಳು ಮಾವನ ಮನೆಗೆ ಅಳಿಯತನಕ್ಕೆ ಹೊರಟಿದ್ದರು.

ಕೃಷಿ ಇಲಾಖೆಗೆ ಬಾಡಿಗೆ ನೀಡಿರುವ ಕಾರಿನಲ್ಲಿ ಅಳಿಯತನಕ್ಕೆ ಹೊರಟ ನವಜೋಡಿ; ಪೊಲೀಸರಿಂದ ವಾಹನ ಸೀಜ್
ಲಾಕ್​ಡೌನ್​
TV9 Web
| Edited By: |

Updated on:Aug 21, 2021 | 10:11 AM

Share

ಕೊಪ್ಪಳ: ಕೊರೊನಾ ಲಾಕ್​ಡೌನ್ ಸಂದರ್ಭ ಹೊರಗಡೆ ಸುಖಾಸುಮ್ಮನೆ ಜನರು ತಿರುಗಾಡಲು ಅನುವು ನೀಡಿಲ್ಲ. ವಿವಿಧ ಜಿಲ್ಲೆಗಳಲ್ಲಿ ಹಲವಾರು ಜನರ ವಾಹನ ಜಪ್ತಿ ಮಾಡಿದ್ದಾರೆ. ಕಾರಣವಿಲ್ಲದೆ ಹೊರಗೆ ತಿರುಗಾಟ ನಡೆಸುವವರಿಗೆ ದಂಡ ವಿಧಿಸಿದ್ದಾರೆ. ಲಾಕ್​ಡೌನ್ ಬಿಸಿ ಎಲ್ಲರಿಗೂ ತಟ್ಟಿದೆ. ಇದೀಗ ಅಂತಹುದೇ ಒಂದು ಪ್ರಕರಣ ಕೊಪ್ಪಳದಲ್ಲಿ ನಡೆದಿದೆ. ಮಾವನ ಮನೆಗೆ ಅಳಿಯತನಕ್ಕೆ ಹೋಗುವವರಿಗೂ ಲಾಕ್​ಡೌನ್ ಪರಿಣಾಮ ತಟ್ಟಿದೆ.

ಕ್ರಿಮಿನಲ್ ಐಡಿಯಾ ಬಳಸಿ ಮಾವನ ಮನೆಯತ್ತ ಹೊರಟಿದ್ದ ನವವಿವಾಹಿತರನ್ನು ಪೊಲೀಸರು ತಡೆದಿದ್ದಾರೆ. ಮೇ 14 ರಂದು ಮದುವೆಯಾಗಿರುವ ಎರಡು ಜೋಡಿಗಳು ಮಾವನ ಮನೆಗೆ ಅಳಿಯತನಕ್ಕೆ ಹೊರಟಿದ್ದರು. ಕೊಪ್ಪಳ ತಾಲೂಕಿನ ಹನಕುಂಟಿಯ ಬಸವರಾಜ ಹಾಗು ಮಾರುತಿ ವಿವಾಹವಾಗಿದ್ದು, ಮಸ್ಕಿ ತಾಲೂಕಿನ ಬಸಾಪುರದ ಮಾವನ ಮನೆಗೆ ತೆರಳುತ್ತಿದ್ದರು. ಆದರೆ ಇವರು ಮಾವನ ಮನೆಗೆ ತೆರಳಲು ಕ್ರಿಮಿನಲ್ ಉಪಾಯ ಬಳಸಿದ್ದರು.

ಕೂಡ್ಲಿಗಿ ತಾಲೂಕಿನ ಕೃಷಿ ಇಲಾಖೆಗೆ ಬಾಡಿಗೆ ನೀಡಿರುವ ಕಾರಿನಲ್ಲಿ ನವ ಜೋಡಿಗಳು ಹೊರಟಿದ್ದರು. ಸರಕಾರಿ ವಾಹನದಲ್ಲಿ ಪ್ರಯಾಣಿಸಿದರೆ ಪೊಲೀಸರಿಂದ ತಪ್ಪಿಸಿಕೊಳ್ಳಬಹುದು ಎಂಬ ಉಪಾಯ ಮಾಡಿಕೊಂಡಿದ್ದರು. ಕಾರಿನಲ್ಲಿ ನವದಂಪತಿಗಳು ಸೇರಿ ಒಟ್ಟು 7 ಜನ ಪ್ರಯಾಣ ಮಾಡುತ್ತಿದ್ದರು. ಈ ವೇಳೆ, ಗಡಿಯಾರ ಕಂಬದ ಬಳಿ ಅನುಮಾನ ಬಂದು ಪೋಲಿಸರು ವಿಚಾರಣೆ ನಡೆಸಿದ್ದಾರೆ. ನವದಂಪತಿಗಳನ್ನು ಗಡಿಯಾರ ಕಂಬದ ಬಳಿ ಇಳಿಸಿ ಕೊಪ್ಪಳ ಪೊಲೀಸರು ಕಾರ್ ಸೀಜ್ ಮಾಡಿದ್ದಾರೆ.

ಇದನ್ನೂ ಓದಿ: ಬೆಳಗ್ಗೆ 10 ಗಂಟೆ ನಂತರ ರಸ್ತೆಗಿಳಿದರೆ ವಾಹನ ಜಪ್ತಿ, ದೂರು ದಾಖಲು; ಬೆಂಗಳೂರಿನಲ್ಲಿ ಇಂದಿನಿಂದಲೇ ನಿಯಮ ಜಾರಿ

ಇನ್ಮುಂದೆ ಖಾಕಿ ಲಾಠಿ ಪ್ರಯೋಗಕ್ಕೆ ಬ್ರೇಕ್.. ಅನಗತ್ಯವಾಗಿ ಹೊರಬಂದ್ರೆ ಸೀಜ್ ಆಗ್ತಾವೆ ವಾಹನಗಳು

Published On - 4:26 pm, Wed, 19 May 21

Follow Us
TV9 Web
TV9 Web

TV9 Kannada

Read More
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!