AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಮುಂದೆ ಖಾಕಿ ಲಾಠಿ ಪ್ರಯೋಗಕ್ಕೆ ಬ್ರೇಕ್.. ಅನಗತ್ಯವಾಗಿ ಹೊರಬಂದ್ರೆ ಸೀಜ್ ಆಗ್ತಾವೆ ವಾಹನಗಳು

ಏನೇ ನೆಪ ಹೇಳಿದ್ರೂ ಕೇಳಲಿಲ್ಲ.. ಯಾವುದೇ ಕಾರಣ ಹೇಳಿದ್ರೂ ಒಪ್ಪಲಿಲ್ಲ.. ಲಾಕ್ಡೌನ್ ರೂಲ್ಸ್ ಬ್ರೇಕ್ ಮಾಡಿ ಹೊರಬಂದೋರು, ಬೇಕಾಬಿಟ್ಟಿಯಾಗಿ ತಿರುಗಾಡೋಕೆ ಬಂದವರನ್ನ ಪೊಲೀಸ್ರು ಪಂಕ್ಚರ್ ಮಾಡಿದ್ರು. ಎರಾಽಬಿರಿಽ ಲಾಠಿ ಬೀಸಿ ಜನರಿಗೆ ಬಿಸಿ ಮುಟ್ಟಿಸಿದ್ರು. ಇದ್ರ ಪರಿಣಾಮವೇ ಮೊದಲ ದಿನದ ಲಾಕ್ಡೌನ್ ಯಶಸ್ವಿಯಾಗಿದ್ದು, ಎರಡನೇ ದಿನಕ್ಕೆ ಕಾಲಿಟ್ಟಿದೆ.

ಇನ್ಮುಂದೆ ಖಾಕಿ ಲಾಠಿ ಪ್ರಯೋಗಕ್ಕೆ ಬ್ರೇಕ್.. ಅನಗತ್ಯವಾಗಿ ಹೊರಬಂದ್ರೆ ಸೀಜ್ ಆಗ್ತಾವೆ ವಾಹನಗಳು
ಅನಗತ್ಯವಾಗಿ ಹೊರಬಂದ್ರೆ ಸೀಜ್ ಆಗ್ತಾವೆ ವಾಹನಗಳು
ಆಯೇಷಾ ಬಾನು
|

Updated on: May 11, 2021 | 8:43 AM

Share

ಬೆಂಗಳೂರು: ಲಾಕ್ಡೌನ್ನ ಮೊದಲ ದಿನ ಪೊಲೀಸ್ರು, ತಾರಾಮಾರಾ ಲಾಠಿ ಬೀಸಿ ಜನರನ್ನು ಹೆದರಿಸಿದ್ರು. ಮನೆಬಿಟ್ಟು ಹೊರಬರಬೇಡಿ ಮನೆಯಲ್ಲೇ ಇರಿ ಅಂತಾ ಎರಾಽಬಿರಿಽ ಲಾಠಿ ಏಟು ಕೊಟ್ಟಿದ್ರು. ಆದ್ರೆ, ಪೊಲೀಸರ ಌಕ್ಷನ್ಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿತ್ತು. ಇದ್ರಿಂದಾಗಿ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್, ಲಾಠಿ ಬೀಸದಂತೆ ಆದೇಶ ನೀಡಿದ್ದಾರೆ. ಹೀಗಾಗಿ, ಪೊಲೀಸರು ಕೂಡ ಇಂದಿನಿಂದ ಲಾಠಿ ಪ್ರಯೋಗಕ್ಕೆ ಬ್ರೇಕ್ ಹಾಕಲಿದ್ದಾರೆ. ಆದ್ರೆ, ಲಾಕ್ಡೌನ್ನ ಎರಡನೇ ದಿನವಾದ ಇಂದು ಕೂಡ ಅನಗತ್ಯವಾಗಿ ಹೊರಬಂದ್ರೆ ವಾಹನಗಳನ್ನೇ ಸೀಜ್ ಮಾಡ್ತಾರೆ. ಜತೆಗೆ ಕೇಸ್ ಹಾಕಿ ಮಾರಿಹಬ್ಬ ಮಾಡೋಕೂ ಸಜ್ಜಾಗಿದ್ದಾರೆ.

‘ವಾಹನ ಬಳಸಿ, ಆದ್ರೆ ಅನಗತ್ಯ ಸಂಚಾರ ನಿರ್ಬಂಧ’ ಹತ್ತಿರದಲ್ಲಿ ತರಕಾರಿ, ಹೋಟೆಲ್ನಲ್ಲಿ ಪಾರ್ಸೆಲ್ ತರೋಕೆ ವಾಹನದಲ್ಲಿ ಹೋಗುವಂತಿಲ್ಲ. ಕಾಲ್ನಡಿಗೆಯಲ್ಲೇ ಹೋಗ್ಬೇಕು ಅಂತಾ ಖಡಕ್ ರೂಲ್ ಜಾರಿ ಮಾಡ್ಲಾಗಿತ್ತು. ಆದ್ರೀಗ ಆ ನಿಮಯದಲ್ಲೂ ಸ್ವಲ್ಪ ಬದಲಾವಣೆ ಆಗಿದ್ದು, ಖುದ್ದು ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ನಿಮ್ಮ ಹತ್ತಿರದ ಸ್ಥಳಗಳಲ್ಲಿ ಅಗತ್ಯ ವಸ್ತುಗಳನ್ನ ಖರೀದಿಸಲು ವಾಹನ ಬಳಕೆಗೆ ನಿರ್ಬಂಧವಿಲ್ಲ. ಅಗತ್ಯ ವಸ್ತುಗಳ ಖರೀದಿಗೆ ವಾಹನಗಳನ್ನ ಬಳಸಿಕೊಳ್ಳಬಹುದು. ಆದ್ರೆ, ಅದನ್ನ ದುರುಪಯೋಗಪಡಿಸಿಕೊಳ್ಳದಂತೆ ಮನವಿ ಮಾಡಿದ್ರು.

ಎಲ್ಲಾ ಉಪ ನೋಂದಣಿ ಕಚೇರಿಗಳು ಬಂದ್ ಕೊರೊನಾ ಆರ್ಭಟ ಹೆಚ್ಚಾಗ್ತಿರೋದ್ರಿಂದ ಉಪನೋಂದಣಿ ಕಚೇರಿಗಳಿಗೆ ಬೀಗ ಜಡಿಯಲಾಗಿದೆ. ರಾಜ್ಯದ ಎಲ್ಲಾ ಉಪ ನೋಂದಣಾಧಿಕಾರಿ ಕಚೇರಿಗಳಿಗೆ ಬೀಗ ಜಡಿಯಲಾಗಿದ್ದು, ಮೇ 23ರವರೆಗೆ ಬಂದ್ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇದ್ರ ಮಧ್ಯೆ ಕೇಂದ್ರ ಸ್ಥಾನಗಳು ಓಪನ್ ಇರಲಿದ್ದು, ಅಧಿಕಾರಿಗಳು, ಸಿಬ್ಬಂದಿ ಕೇಂದ್ರ ಸ್ಥಾನದಲ್ಲೇ ಇರಬೇಕು ಅಂತಾ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಆದೇಶಿಸಿದೆ.

‘ಗಣಿ’ ಜಿಲ್ಲೆಗಳಲ್ಲಿ ಇಂದಿನಿಂದ ಕಠಿಣ ಲಾಕ್‌ಡೌನ್‌ ಮತ್ತೊಂದೆಡೆ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಕೊರೊನಾ ಆರ್ಭಟ ಹೆಚ್ಚಾಗ್ತಿದ್ದು, ಇಂದಿನಿಂದ ಕಠಿಣ ಲಾಕ್‌ಡೌನ್ ಜಾರಿಯಾಗಲಿದೆ. ಬೆಳಗ್ಗೆ 6ರಿಂದ 10ಗಂಟೆವರೆಗೆ ಮಾತ್ರ ಅಗತ್ಯವಸ್ತು ಖರೀದಿಗೆ ಸಮಯ ಇರುತ್ತೆ. ಬೆಳಗ್ಗೆ 10 ಗಂಟೆ ಬಳಿಕ ಜನರ ಸಂಚಾರ ಸಂಪೂರ್ಣ ಬಂದ್ ಆಗಲಿದೆ. ಮೆಡಿಕಲ್ ಎಮರ್ಜೆನ್ಸಿ ಹೊರತುಪಡಿಸಿ ಎಲ್ಲವೂ ಬಂದ್ ಆಗಲಿದ್ದು, ಅಂತಾರಾಜ್ಯ ಗೂಡ್ಸ್‌ ವಾಹನಗಳಿಗೆ ಅನುಮತಿ ನೀಡಲಾಗಿದೆ. ಜಿಲ್ಲೆಯಲ್ಲಿ ಮದುವೆ ಕಾರ್ಯಕ್ರಮಕ್ಕೆ ಸಂಪೂರ್ಣ ನಿಷೇಧಿಸಲಾಗಿದೆ. ಇದನ್ನು ಕುರಿತು ಸ್ವತಃ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ವಾರದಲ್ಲಿ ನಾಲ್ಕು ದಿನ ಚಾಮರಾಜನಗರ ಬಂದ್ ಚಾಮರಾಜನಗರ ಜಿಲ್ಲೆಯಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಬಂದ್ ಮಾಡಲು ನಿರ್ಧರಿಸಲಾಗಿದೆ. ಗುರುವಾರ, ಶುಕ್ರವಾರ, ಶನಿವಾರ, ಭಾನುವಾರ ಬಂದ್ ಆಗಿರಲಿದ್ದು, ಸೋಮವಾರ, ಮಂಗಳವಾರ, ಬುಧವಾರ ಖರೀದಿಗೆ ಅವಕಾಶ ಇರಲಿದೆ.

ಇನ್ನೊಂದು ಗಮನಾರ್ಹ ಸಂಗತಿ ಅಂದ್ರೆ, ಲಾಕ್ಡೌನ್ನ ಮೊದಲ ದಿನ ಸೋಂಕಿನ ಸುನಾಮಿ ಕೊಂಚ ಕಡಿಮೆ ಆಗಿದೆ. ನಿತ್ಯ ಹತ್ ಹತ್ರ 50 ಸಾವಿರ ಬರ್ತಿದ್ದ ಕೇಸ್ಗಳು ನಿನ್ನೆ 39ಸಾವಿರ ಪಾಸಿಟಿವ್ ಕೇಸ್ಗಳು ಬಂದಿವೆ. ಆದ್ರೆ, ಸಾವಿನ ಸಂಖ್ಯೆ ಹೆಚ್ಚಾಗಿದ್ದು, ನಿನ್ನೆ ಒಂದೇ ದಿನ ಕೊರೊನಾ 596ಜನರ ಜೀವ ಹಿಂಡಿದೆ. ಹೀಗಾಗಿ, ಜನರು ಲಾಠಿಗೆ ಹೆದರದಿದ್ದರೂ ಕೊರೊನಾಗಾದ್ರೂ ಹೆದರಲೇಬೇಕಾಗಿದೆ.

ಇದನ್ನೂ ಓದಿ: ರೆಮ್​ಡಿಸಿವಿರ್​ ದಂಧೆಗೆ ಆರೋಗ್ಯ ಇಲಾಖೆ ಇಂಜೆಕ್ಷನ್; ಚುಚ್ಚುಮದ್ದು ಬಿಡುಗಡೆಯಾದ ಕೂಡಲೇ ಸೋಂಕಿತರ ಮೊಬೈಲ್​ಗೆ ಸಂದೇಶ

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ