ಲಾಕ್‌ಡೌನ್ ಹಿನ್ನೆಲೆ ನಕಲಿ ಐಡಿ ಕಾರ್ಡ್ ಮಾಡುತ್ತಿದ್ದ ಇಬ್ಬರ ಬಂಧನ; ಪೊಲೀಸ್ ಕಾರ್ಯಾಚರಣೆ ವೇಳೆ ರಹಸ್ಯ ಬಯಲು
ಖಚಿತ ಮಾಹಿತಿ ಮೇರೆಗೆ ಕಂಡೋಲ್ಕರ್ ಗಲ್ಲಿಯ ಮುಚ್ಚಂಡಿ ಪ್ರಿಂಟರ್ಸ್ ಮೇಲೆ ಬೆಳಗಾವಿಯ ಡಿಸಿಪಿ ವಿಕ್ರಂ ಆಮ್ಟೆ ನೇತೃತ್ವದ ತಂಡ ದಾಳಿ ಮಾಡಿದ್ದು, ಈ ವೇಳೆ ಮುಚ್ಚಂಡಿ ಪ್ರಿಂಟರ್ಸ್ ಮಾಲೀಕ ವಿಶ್ವನಾಥ್ ಮುಚ್ಚಂಡಿ ಹಾಗೂ ಗ್ರಾಫಿಕ್ ಡಿಸೈನರ್ ರೋಹಿತ್ ಕುಟ್ರೆ ನಕಲಿ ಐಡಿ ಕಾರ್ಡ್ ಮಾಡಿ ಜನರಿಗೆ ನೀಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಬೆಳಗಾವಿ: ಕೊರೊನಾ ಎರಡನೇ ಅಲೆಯ ಹೆಚ್ಚಳದಿಂದಾಗಿ ದೇಶದೆಲ್ಲೇಡೆ ಸಾವು-ನೋವು ಸಂಭವಿಸಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರುವ ಸಲುವಾಗಿ ರಾಜ್ಯ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದೆ. ಹೀಗಿರುವಾಗಲೇ ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ನಕಲಿ ಐಡಿ ಕಾರ್ಡ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ಇಂತಹದ್ದೇ ಪ್ರಕರಣವೊಂದನ್ನು ಬೆಳಗಾವಿ ಪೊಲೀಸರು ಬೆಳಕಿಗೆ ತಂದಿದ್ದು, ಈ ಕೃತ್ಯದಲ್ಲಿ ತೊಡಗಿರುವವರನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕಂಡೋಲ್ಕರ್ ಗಲ್ಲಿಯ ಮುಚ್ಚಂಡಿ ಪ್ರಿಂಟರ್ಸ್ ಮೇಲೆ ಬೆಳಗಾವಿಯ ಡಿಸಿಪಿ ವಿಕ್ರಂ ಆಮ್ಟೆ ನೇತೃತ್ವದ ತಂಡ ದಾಳಿ ಮಾಡಿದ್ದು, ಈ ವೇಳೆ ಮುಚ್ಚಂಡಿ ಪ್ರಿಂಟರ್ಸ್ ಮಾಲೀಕ ವಿಶ್ವನಾಥ್ ಮುಚ್ಚಂಡಿ ಹಾಗೂ ಗ್ರಾಫಿಕ್ ಡಿಸೈನರ್ ರೋಹಿತ್ ಕುಟ್ರೆ ನಕಲಿ ಐಡಿ ಕಾರ್ಡ್ ಮಾಡಿ ಜನರಿಗೆ ನೀಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಕೊವಿಡ್ ತಡೆಗೆ ಲಾಕ್‌ಡೌನ್ ಜಾರಿಯನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳಿಬ್ಬರು ಕಾರ್ಖಾನೆಗಳು, ಹಣಕಾಸು ಸಂಸ್ಥೆಗಳು, ಕೋ-ಆಪರೇಟಿವ್ ಸೊಸೈಟಿ, ಕ್ಯಾಟರಿಂಗ್ ಹೆಸರಲ್ಲಿ ನಕಲಿ ಐಡಿ ಕಾರ್ಡ್ ಕ್ರಿಯೇಟ್ ಮಾಡಿ ಜನರಿಗೆ ಮಾರಾಟ ಮಾಡುತ್ತಿದ್ದರು. ಈ ನಕಲಿ ಐಡಿ ಕಾರ್ಡ್ ಬಳಸಿ ಜನರು ರಸ್ತೆಯಲ್ಲಿ ಆರಾಮವಾಗಿ ಓಡಾಡಬಹುದು ಎಂದು ಸಾರ್ವಜನಿಕರನ್ನು ನಂಬಿಸಲಾಗಿತ್ತು. ಸದ್ಯ ಈ ಇಬ್ಬರು ಆರೋಪಿಗಳ ವಿರುದ್ಧ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿನ್ನೆ ನಕಲಿ ಪಾಸ್ ಮಾಡುತ್ತಿದ್ದ ಜಾಲ ಬೇಧಿಸಿದ್ದೇವೆ. ಕ್ಯಾಟರಿಂಗ್ ಸರ್ವಿಸ್, ಮೆಡಿಕಲ್ ಸರ್ವಿಸ್, ಕೈಗಾರಿಕೆಗಳ ಹೆಸರಲ್ಲಿ ಪಾಸ್ ನೀಡುತ್ತಿದ್ದ ಜಾಲ ಇದು. ಯಾರಾದರೂ ನಕಲಿ ಐಡಿ ಕಾರ್ಡ್ ಮಾರಾಟ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಇನ್ನೂ ಮುಂದೆ ಬೈಕ್ ಸೀಜ್ ಮಾಡಿದರೆ ಕೋರ್ಟ್ಗೆ ನೀಡುತ್ತೇವೆ. ಸಾರ್ವಜನಿಕರು ಕೋರ್ಟ್ಗೆ ಹೋಗಿ ವಾಹನ ಬಿಡಿಸಿಕೊಳ್ಳಲು ಕಷ್ಟ ಆಗುತ್ತೆ. ಈ ಕಾರಣಕ್ಕೆ ಯಾರು ಮನೆಯಿಂದ ಅನಗತ್ಯವಾಗಿ ಹೊರ ಬರಬೇಡಿ. ನಿನ್ನೆ ಒಂದೇ ದಿನ ನಗರದಲ್ಲಿ 150ವಾಹನಳ ಸೀಜ್ ಮಾಡಿದ್ದೇವೆ. ಎಪ್ರೊನ್ ಹಾಕಿಕೊಂಡು ಸಾಕಷ್ಟು ಜನ ಬರ್ತಿದ್ದು, ಅವರನ್ನೂ ಕೂಡ ನಾವು ಬಿಡುತ್ತಿಲ್ಲ ಎಂದು ಬೆಳಗಾವಿಯಲ್ಲಿ ಟಿವಿ9 ಡಿಜಿಟಲ್ಗೆ ಡಿಸಿಪಿ ವಿಕ್ರಮ್ ಆಮಟೆ ತಿಳಿಸಿದ್ದಾರೆ.
ಇದನ್ನೂ ಓದಿ:
Karnataka Lockdown Package: ಲಾಕ್‌ಡೌನ್ ಪ್ಯಾಕೇಜ್ ಘೋಷಣೆ ಬಗ್ಗೆ ಸುಳಿವು ನೀಡಿದ ಕಂದಾಯ ಸಚಿವ ಆರ್.ಅಶೋಕ್
ಜನರೇ ಎಚ್ಚರ.. ನಿರ್ಲಕ್ಷ್ಯ ಬೇಡವೇ ಬೇಡ; ಮೇ ತಿಂಗಳ ಅಂತ್ಯಕ್ಕೆ 6 ಸಾವಿರ ಜನರನ್ನು ಬಲಿಪಡೆಯಲಿದೆ ಕೊರೊನಾ
Published On - 8:46 am, Tue, 11 May 21