ವ್ಯಾಪರಕ್ಕೆ ಅವಕಾಶ ಕೊಡದ ಹಿನ್ನೆಲೆ ಬೇಸರ; ಹೂಗಳನ್ನು ಕಸಕ್ಕೆ ಎಸೆದು ಆಕ್ರೋಶ ಹೊರಹಾಕಿದ ವ್ಯಾಪರಸ್ಥರು
ಮದುವೆ ಇಲ್ಲ, ದೇವಸ್ಥಾನ ಇಲ್ಲ, ಯಾವುದೇ ಸಮಾರಂಭ ಇಲ್ಲ. ಸತ್ತವರ ಪೂಜೆಗೆ ಮಾತ್ರ ಬೇಕಾಗುವಷ್ಟು ಹೂವನ್ನು ವ್ಯಾಪಾರಿಗಳು ತಂದಿದ್ದರು. ಹೀಗಿದ್ದರೂ ಮಾರಟಕ್ಕೆ ಕಡಿಮೆ ಅವಧಿ ನಿಗದಿ ಹಿನ್ನಲೆಯಲ್ಲಿ ಹೂವುಗಳು ಬಾಡಿ ಹೋಗಿದೆ. ಇದರಿಂದ ಬೇಸರಗೊಂಡ ಹೂವಿನ ವ್ಯಾಪಾರಿಗಳು ವ್ಯಾಪಾರಕ್ಕೆ ತಂದ ಹೂಗಳನ್ನು ಕಸಕ್ಕೆ ಎಸೆದಿದ್ದಾರೆ.
ಬೆಂಗಳೂರು: ಕೊರೊನಾ ಎರಡನೇ ಅಲೆಯಿಂದಾಗಿ ಇಡೀ ದೇಶವೇ ನಲುಗಿ ಹೋಗಿದೆ. ಸೋಂಕಿತರ ಸಂಖ್ಯೆ ಕೂಡ ಹೆಚ್ಚಾಗಿದ್ದು, ಸಾವಿನ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಡುಬಂದಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪರಿಸ್ಥಿತಿಯನ್ನು ಸುಧಾರಿಸಲು ಲಾಕ್ಡೌನ್ ಘೋಷಣೆ ಮಾಡಿದೆ. ಆದರೆ ಇದರಿಂದ ನಿತ್ಯ ದುಡಿದು ಜೀವನ ನಡೆಸುತ್ತಿದ್ದ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಅದರಲ್ಲೂ ಬೆಂಗಳೂರಿನ ಹೂವಿನ ವ್ಯಾಪಾರಿಗಳ ಸ್ಥಿತಿ ತೀರ ಹದಗೆಟ್ಟಿದ್ದು, ಟಿವಿ9 ಬಳಿ ಆಕ್ರೋಶದ ಕಣ್ಣೀರು ಹೊರ ಹಾಕಿದ್ದಾರೆ.
ದಿನದ ವ್ಯಾಪಾರ ಮಾಡಿ ಬದುಕು ಮಾಡೊಕೆ ಕಷ್ಟವಾಗುತ್ತಿದೆ. ಮಕ್ಕಳ ವಿದ್ಯಾಬ್ಯಾಸ ಹೊಯ್ತು, ಹೊದರೆ ಹೊಗಲಿ ಬಿಡಿ. ಆದರೆ ಮೂರು ಹೊತ್ತಿನ ಊಟಕ್ಕೆ ನಾವು ಏನು ಮಾಡಬೇಕು. ಕೊರೊನಾ ಸೊಂಕಿತರು ನೂರಾರು ಸಂಖ್ಯೆಯಲ್ಲಿ ಸಾಯುತ್ತಿದ್ದಾರೆ. ಮೃತರ ಪೂಜೆಗೆ ಹೂ ಅಗತ್ಯವಾಗಿದೆ. ಅದನ್ನು ಮಾರಟ ಮಾಡಲು ಹೆಚ್ಚಿನ ಸಮಯ ಕೊಡಿ. ನಾವು ಬೆಳಿಗ್ಗೆಯೇ ಹೂಗಳನ್ನು ತರುತ್ತೇವೆ. ತಂದು ಇಟ್ಟ ಕೆಲವೇ ಗಂಟೆಯಲ್ಲಿ ಮುಚ್ಚಿಸುತ್ತೀರಿ. ಹೀಗೆ ಮಾಡಿದರೆ ನಮ್ಮ ಬದುಕು ಹೇಗೆ? ಮಕ್ಕಳ ವಿದ್ಯಾಬ್ಯಾಸ, ಊಟ, ಮನೆ ಬಾಡಿಗೆ ಹೇಗೆ ನೊಡೊದು. ಸರ್ಕಾರ ಲಾಕ್ಡೌನ್ ಮಾಡಲಿ. ಆದರೆ ನಮ್ಮಂತವರ ಕಡೆ ಸ್ವಲ್ಪ ಗಮನ ಹರಿಸಲಿ ಎಂದು ಹೂವಿನ ವ್ಯಾಪಾರಿ ರಾಮು ಅಳಲು ತೋಡಿಕೊಂಡಿದ್ದಾರೆ.
ವ್ಯಾಪಾರ ಇಲ್ಲದೆ ತಂದ ಹೂಗಳನ್ನು ಕಸಕ್ಕೆ ಎಸೆದ ವ್ಯಾಪಾರಿಗಳು ಮದುವೆ ಇಲ್ಲ, ದೇವಸ್ಥಾನ ಇಲ್ಲ, ಯಾವುದೇ ಸಮಾರಂಭ ಇಲ್ಲ. ಸತ್ತವರ ಪೂಜೆಗೆ ಮಾತ್ರ ಬೇಕಾಗುವಷ್ಟು ಹೂವನ್ನು ವ್ಯಾಪಾರಿಗಳು ತಂದಿದ್ದರು. ಹೀಗಿದ್ದರೂ ಮಾರಟಕ್ಕೆ ಕಡಿಮೆ ಅವಧಿ ನಿಗದಿ ಹಿನ್ನಲೆಯಲ್ಲಿ ಹೂವುಗಳು ಬಾಡಿ ಹೋಗಿದೆ. ಇದರಿಂದ ಬೇಸರಗೊಂಡ ಹೂವಿನ ವ್ಯಾಪಾರಿಗಳು ವ್ಯಾಪಾರಕ್ಕೆ ತಂದ ಹೂಗಳನ್ನು ಕಸಕ್ಕೆ ಎಸೆದಿದ್ದಾರೆ.
ಇದನ್ನೂ ಓದಿ:
Sanitiser: ಕೊರೊನಾ ಆತಂಕ ನಿವಾರಣೆಗೂ ಮೊದಲೇ ಪಾತಾಳಕ್ಕಿಳಿದ ಸ್ಯಾನಿಟೈಸರ್ ವ್ಯಾಪಾರ, ಮಾಸ್ಕ್ ಮಾರಾಟವೂ ಕುಸಿತ
ದ್ವಿಚಕ್ರ ವಾಹನದಲ್ಲಿ ಮೀನು ಮಾರಾಟಕ್ಕೆ ಅವಕಾಶ; ಮಹಿಳಾ ವ್ಯಾಪಾರಿಗಳಲ್ಲಿ ಹೆಚ್ಚಿದ ಆತಂಕ
Published On - 10:28 am, Tue, 11 May 21