ದ್ವಿಚಕ್ರ ವಾಹನದಲ್ಲಿ ಮೀನು ಮಾರಾಟಕ್ಕೆ ಅವಕಾಶ; ಮಹಿಳಾ ವ್ಯಾಪಾರಿಗಳಲ್ಲಿ ಹೆಚ್ಚಿದ ಆತಂಕ
ಮನೆಯಲ್ಲೇ ಕುಳಿತವರಿಗೆ ಮೀನಿದ್ದೇ ಚಿಂತೆ ಇದನ್ನು ಮನಗಂಡ ಜಿಲ್ಲಾಡಳಿತ ಮನೆ ಮನೆಗೆ ದ್ವಿಚಕ್ರವಾಹನದಲ್ಲಿ ಮೀನು ಮಾರಾಟ ಮಾಡುವುದಕ್ಕೆ ಅನುಮತಿ ನೀಡಿದೆ. ಈ ಮೂಲಕ ನಿತ್ಯ ಮೀನು ಸೇವಿಸುವ ಮಂದಿ ಸ್ವಲ್ಪ ನೆಮ್ಮದಿ ಪಡುವಂತಾಗಿದೆ
ಉಡುಪಿ: ರಾಜ್ಯಾದ್ಯಂತ ಕೊರೊನಾ ತೀವ್ರವಾಗಿ ಏರಿಕೆಯಾಗುತ್ತಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಈ ನಡುವೆ ಸಾವಿನ ಸಂಖ್ಯೆ ಕೂಡ ಏರಿಕೆಯಾಗಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಲಾಕ್ಡೌನ್ ಘೋಷಿಸಿದೆ. ಲಾಕ್ಡೌನ್ನಿಂದಾಗಿ ಅನೇಕ ವ್ಯಾಪರಿಗಳಿಗೆ ತೊಂದರೆಯಾಗಿದೆ ಅಂತೆಯೇ ಉಡುಪಿ ಜಿಲ್ಲೆಯ ಲಾಕ್ಡೌನ್ ಮೀನು ಮಾರಾಟ ಮಾಡೋ ಮಹಿಳೆಯರಿಗೆ ಆತಂಕ ತಂದಿದೆ. ಇನ್ನು ಮುಂದಿನ ಹತ್ತು ದಿನಗಳು ಜೀವನ ಮಾಡೋದು ಹೇಗೆ ಎಂದು ಚಿಂತೆ ಮಾಡುವಂತಾಗಿದೆ.
ರಾಜ್ಯಾದ್ಯಂತ ಲಾಕ್ಡೌನ್ ಮೊದಲ ದಿನ ಯಶಸ್ವಿ ಆಯ್ತು. ಒಂದಷ್ಟು ವಾಹನಗಳು ಸೀಜ್ ಆದವು. ಇನ್ನು ಕೆಲವೆಡೆ ಪೋಲೀಸರು ಹೈರಾಣಾಗಿದ್ದಾರೆ. ಊಟ ಪಾರ್ಸೆಲ್ಗೆ ಹೋಟೆಲ್ಗೆ ಹೋದ್ರೂ ಕಷ್ಟ . ಮನೆಯಲ್ಲೇ ಊಟ ಮಾಡೋಣ ಎಂದರೆ ಮೀನು ಸಿಗುವುದಿಲ್ಲ. ಮೀನಿಲ್ಲದೆ ಊಟ ಸೇರಲ್ಲ. ಮನೆಯಲ್ಲೇ ಕುಳಿತವರಿಗೆ ಮೀನಿದ್ದೇ ಚಿಂತೆ ಇದನ್ನು ಮನಗಂಡ ಜಿಲ್ಲಾಡಳಿತ ಮನೆ ಮನೆಗೆ ದ್ವಿಚಕ್ರವಾಹನದಲ್ಲಿ ಮೀನು ಮಾರಾಟ ಮಾಡುವುದಕ್ಕೆ ಅನುಮತಿ ನೀಡಿದೆ. ಈ ಮೂಲಕ ನಿತ್ಯ ಮೀನು ಸೇವಿಸುವ ಮಂದಿ ಸ್ವಲ್ಪ ನೆಮ್ಮದಿ ಪಡುವಂತಾಗಿದೆ
ಆದರೆ ಇದರಿಂದ ಮೀನು ಪ್ರಿಯರು ಖುಷಿಪಟ್ರೂ ಮೀನು ಮಾರಾಟ ಮಾಡುತ್ತಿದ್ದ ಮಹಿಳೆಯರು ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ. ಇದುವರೆಗೆ ಮಲ್ಪೆ ಬಂದರಿನಿಂದ ಹರಾಜಿನಲ್ಲಿ ಮೀನು ತಂದು ರಸ್ತೆ ಬದಿಗಳಲ್ಲಿ ಸಂಜೆವರೆಗೂ ವ್ಯಾಪಾರ ಮಾಡ್ತ ಇದ್ದ ಮಹಿಳೆಯರು, ಸದ್ಯ ಲಾಕ್ಡೌನ್ ಆಗಿರೊದ್ರಿಂದ ರಸ್ತೆ ಬದಿ ಮಾರಾಟಮಾಡುವಂತಿಲ್ಲ. ಮನೆ ಮನೆಗೆ ಹೋಗಿ ಮಾರಾಟ ಮಾಡೋಣ ಎಂದರೆ ದ್ವಿಚಕ್ರವಾಹನ ಸವಾರಿ ಗೊತ್ತಿಲ್ಲ. ದ್ವಿಚಕ್ರವಾಹನವೂ ಇಲ್ಲ. ಈ ಸಂದಿಗ್ಧ ಪರಿಸ್ಥಿತಿ ಮೀನುಗಾರ ಮಹಿಳೆಯರದ್ದು. ಇನ್ನು ಮುಂದಿನ ದಿನಗಳಲ್ಲಿ ಮೀನು ಮಾರಾಟಕ್ಕೆ ಜಿಲ್ಲಾಡಳಿತ ಸ್ಪಂದಿಸಿದಲ್ಲಿ ಒಂದಷ್ಟು ನೆಮ್ಮದಿ ದೊರೆಯ ಬಹುದು ಎಂದು ಮೀನುಗಾರ ಮಹಿಳೆ ಜಯಮ್ಮ ಹೇಳಿದ್ದಾರೆ.
ಒಟ್ಟಾರೆ ದೇಶವನ್ನೇ ಕಾಡುತ್ತಿರುವ ಕೊರೊನಾ ಕಳೆದ ಬಾರಿಗಿಂತ ಈ ಬಾರಿ ಇನ್ನಿಲ್ಲದ ಯಾತನೆ ನೀಡುತ್ತಿದೆ. ದಿನಗೂಲಿ ಮಾಡಿ ಬದುಕುವ ಜನ ಆಶಾವಾದ ಕಳೆದುಕೊಂಡಿದ್ದಾರೆ. ಕೆಲವೊಂದು ಅವಕಾಶಗಳು ಕೆಲವು ವರ್ಗಕ್ಕೆ ದೊರೆತರೆ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯ ಎನ್ನುವುದು ಸದ್ಯದ ಬೇಡಿಕೆ.
ಇದನ್ನೂ ಓದಿ:
ಗಡಿ ಮೀರಿ ಮೀನುಗಾರಿಕೆ: ತಪಾಸಣೆಗೆ ಬಂದ ಪೊಲೀಸರನ್ನೇ ಬಂಧಿಸಿ ಬಂದರಿಗೆ ಕರೆತಂದ ಮೀನುಗಾರರು, ಯಾವೂರಲ್ಲಿ?
ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ ಮೀನುಗಾರರು; ಮೀನು ವ್ಯಾಪರಕ್ಕೆ ಅವಕಾಶ ನೀಡುವಂತೆ ಒತ್ತಾಯ