ಗಡಿ ಮೀರಿ ಮೀನುಗಾರಿಕೆ: ತಪಾಸಣೆಗೆ ಬಂದ ಪೊಲೀಸರನ್ನೇ ಬಂಧಿಸಿ ಬಂದರಿಗೆ ಕರೆತಂದ ಮೀನುಗಾರರು, ಯಾವೂರಲ್ಲಿ?
ತಮ್ಮ ಬೋಟನ್ನು ಪೊಲೀಸರು ವಶಕ್ಕೆ ಪಡೆಯುತ್ತಾರೆಂಬ ಭೀತಿಗೆ ಒಳಗಾದ ಮೀನುಗಾರರು ಪೊಲೀಸರನ್ನು ಬೋಟ್‌ನಲ್ಲೇ ಲಾಕ್ ಮಾಡಿ, ತಮ್ಮ ಜೊತೆಗೆ ನೇರವಾಗಿ ಮಂಗಳೂರು ಬಂದರಿಗೆ ಕರೆತಂದಿದ್ದಾರೆ. ತದನಂತರ ಮಂಗಳೂರು ಬಂದರಿನಲ್ಲಿ ಪೊಲೀಸರನ್ನು ರಿಲೀಸ್ ಮಾಡಿ ಕಳುಹಿಸಿದ್ದಾರೆ.
ಮಂಗಳೂರು: ಗಡಿ ಮೀರಿ ಮೀನುಗಾರಿಕೆ ನಡೆಸುತ್ತಿದ್ದ ಮಂಗಳೂರಿನ ಬೋಟನ್ನು ತಪಾಸಣೆ ಮಾಡಲು ಕೇರಳದ ಪೊಲೀಸರು ಬಂದಿದ್ದಾರೆ. ಈ ವೇಳೆ ಕೇರಳದ ಪೊಲೀಸರನ್ನು ಲಾಕ್ ಮಾಡಿದ ಮಂಗಳೂರು ಮೂಲದ ಮೀನುಗಾರರು, ಪೊಲೀಸರನ್ನು ಬೋಟ್‌ನಲ್ಲಿ ಮಂಗಳೂರು ಬಂದರಿಗೆ ಕರೆತಂದಿರುವ ಘಟನೆ ನಡೆದಿದೆ.
ರಘು, ಸುಧೀಶ್ ಕಿಡ್ನ್ಯಾಪ್ ಆಗಿ ರಿಲೀಸ್ ಆದ ಕೇರಳದ ಪೊಲೀಸರು. ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕುಂಬಳೆ ಬಳಿ ಶಿರಿಯಾ ಪ್ರದೇಶದಲ್ಲಿ ಗಡಿ ಮೀರಿ 19 ಮೀನುಗಾರರಿದ್ದ ಮಂಗಳೂರಿನ ಬೋಟ್ ಮೀನುಗಾರಿಕೆ ನಡೆಸುತ್ತಿತ್ತು. ಈ ವೇಳೆ ಕೇರಳ ಪೊಲೀಸರು ಸಾಗರದಲ್ಲೇ ಬೋಟ್ ತಪಾಸಣೆ ಮಾಡಿದ್ದಾರೆ.
ತಮ್ಮ ಬೋಟನ್ನು ಪೊಲೀಸರು ವಶಕ್ಕೆ ಪಡೆಯುತ್ತಾರೆಂಬ ಭೀತಿಗೆ ಒಳಗಾದ ಮೀನುಗಾರರು ಪೊಲೀಸರನ್ನು ಬೋಟ್‌ನಲ್ಲೇ ಲಾಕ್ ಮಾಡಿದ್ದಾರೆ. ಬಳಿಕ ಮೀನುಗಾರರು ಪೊಲೀಸರನ್ನು ತಮ್ಮ ಜೊತೆಗೆ ನೇರವಾಗಿ ಮಂಗಳೂರು ಬಂದರಿಗೆ ಕರೆತಂದಿದ್ದಾರೆ. ತದನಂತರ ಮಂಗಳೂರು ಬಂದರಿನಲ್ಲಿ ಪೊಲೀಸರನ್ನು ರಿಲೀಸ್ ಮಾಡಿ ಕಳುಹಿಸಿದ್ದಾರೆ.
ಬೋಟ್ ಲೈಸೆನ್ಸ್ ಇಲ್ಲದಿರೋದ್ರಿಂದ ಬೋಟ್ ಸೀಝ್ ಆಗುವ ಭಯದಲ್ಲಿ ಕಿಡ್ನಾಪ್ ಮಾಡಿರುವುದಾಗಿ ಮೀನುಗಾರರು ತಮ್ಮ ಅಳಲನ್ನು ತೋಡಿಕೊಂಡಿದ್ದು, ಮೀನುಗಾರರ ವಿರುದ್ಧ ಕಾಸರಗೋಡು ಜಿಲ್ಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವೈರಲ್ ವಿಡಿಯೊ | ಬಲೆಗೆ ಬಿದ್ದ ಶಾರ್ಕ್ ಮೀನನ್ನು ಮತ್ತೆ ಸಮುದ್ರಕ್ಕೆ ಸೇರಿಸಿದ ಮೀನುಗಾರರು
Published On - 5:46 pm, Mon, 21 December 20