Karnataka Lockdown Package: ಲಾಕ್​ಡೌನ್ ಪ್ಯಾಕೇಜ್ ಘೋಷಣೆ ಬಗ್ಗೆ ಸುಳಿವು ನೀಡಿದ ಕಂದಾಯ ಸಚಿವ ಆರ್.ಅಶೋಕ್

Karnataka Lockdown Relief Fund: ಇಂದು ಸಂಜೆ ವಿವಿಧ ಸಮೀತಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್​.ಅಶೋಕ್ ತಿಳಿಸಿದರು.

Karnataka Lockdown Package: ಲಾಕ್​ಡೌನ್ ಪ್ಯಾಕೇಜ್ ಘೋಷಣೆ ಬಗ್ಗೆ ಸುಳಿವು ನೀಡಿದ ಕಂದಾಯ ಸಚಿವ ಆರ್.ಅಶೋಕ್
ಆರ್.ಅಶೋಕ್
Follow us
guruganesh bhat
|

Updated on:May 10, 2021 | 4:44 PM

ಬೆಂಗಳೂರು: ರೈತರು, ಬಡವರು, ಕೂಲಿ ಕಾರ್ಮಿಕರು, ಆಟೋ ಚಾಲಕರು ಸೇರಿದಂತೆ ಯಾರಿಗೆಲ್ಲಾ ಲಾಕ್​ಡೌನ್​ ಪ್ಯಾಕೇಜ್​ ಘೋಷಿಸಬಹುದು ಎಂಬುದರ ಕುರಿತು ಇಂದು ಸಂಜೆ ವಿವಿಧ ಸಮೀತಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್​.ಅಶೋಕ್ ತಿಳಿಸಿದರು.

ಅಮೆರಿಕದಿಂದ ಬಂದ 160 ಕಾನ್ಸಂಟ್ರೇಟರ್​ಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ ಕೊವಿಡ್ ಸೆಂಟರ್​ಗಳಲ್ಲಿ ಅಳವಡಿಸುತ್ತೇವೆ. ಈ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಬೇಕಾದ ಆಕ್ಸಿಜನ್ ಪೂರೈಕೆ ಮಾಡಲಾಗುತ್ತದೆ. ಇದರಿಂದ ಯಾರೂ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ಬರುವುದಿಲ್ಲ. ಜೊತೆಗೆ ಹೋಮ್​ ಐಸೋಲೇಷನ್​ ಇರುವವರಿಗೆ ಕಿಟ್​ ನೀಡಲಾಗುತ್ತದೆ. ನಾಳೆ ಆಕ್ಸಿಜನ್​ ಪೂರೈಕೆ ಮಾಡುವ ವ್ಯವಸ್ಥೆಯನ್ನು ಮಾಡುತ್ತೇವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೆಚ್ಚು ಸಾವುಗಳಾಗದಂತೆ  ನಿಗಾವಹಿಸುತ್ತೇವೆ ಎಂದು ಅವರು ದೇವನಹಳ್ಳಿಯಲ್ಲಿ ತಿಳಿಸಿದರು.

ಕೊವಿಡ್ ಸಂಕಷ್ಟದಲ್ಲಿ ಕೆಲ ಸಿಬ್ಬಂದಿ ಅನಾಗರಿಕರಂತೆ ವರ್ತಿಸುತ್ತಿರುವುದಾಗಿ ದೂರು ಕೇಳಿಬಂದಿದೆ. ಹೀಗಾಗಿ ಆ ರೀತಿ ವರ್ತಿಸುವವರನ್ನು ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ‌ ನೀಡಿದ್ದೇನೆ. ಆ ರೀತಿ ವರ್ತಿಸಿದವರಿಗೆ ಯಾವುದೇ ನೋಟಿಸ್ ಸೂಚನೆ ನೀಡದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ತೀವೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.

ಲಸಿಕೆ ಪಡೆಯಲು ವಾಹನದಲ್ಲಿ ತೆರಳಲು ಸಮಸ್ಯೆ ಆಗುತ್ತಿದೆ ಮೇ 24ರವರೆಗೆ ಜಾರಿಯಲ್ಲಿರುವ ಕರ್ನಾಟಕ ಲಾಕ್​ಡೌನ್ ಮುಗಿಯುವವರೆಗೂ 18 ವರ್ಷ ಮೇಲ್ಪಟ್ಟವರಿಗೆ ಕೊವಿಡ್ ಲಸಿಕೆ ವಿತರಣೆ ಮಾಡುವುದನ್ನು ಸ್ಥಗಿತಗೊಳಿಸಲು ಕರ್ನಾಟಕ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. 14 ದಿನ ಲಸಿಕೆ ನೀಡುವುದನ್ನು ಮುಂದೂಡುವ ಬಗ್ಗೆ ರಾಜ್ಯ ಸರ್ಕಾರ ಚರ್ಚೆ‌ ನಡೆಸಿದೆ. ಲಸಿಕೆ ಪಡೆಯಲು ವಾಹನದಲ್ಲಿ ತೆರಳಲು ಸಮಸ್ಯೆ ಆಗುತ್ತಿದೆ. ಹೀಗಾಗಿ 18 ವರ್ಷ ಮೇಲ್ಪಟ್ಟವರಿಗೆ ಮುಂದಿನ 14 ದಿನಗಳ ಕಾಲ ಮುಂದೂಡಲು ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಈಕುರಿತು ರಾಜ್ಯ ಸರ್ಕಾರ ಇಂದು ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಲಾಗಿದೆ.

ಸರ್ಕಾರಿ ಆಸ್ಪತ್ರೆ, ವೈದ್ಯ ಕಾಲೇಜುಗಳಲ್ಲಿ ಲಸಿಕೆ ವಿತರಣೆ ಇಂದಿನಿಂದ ಲಸಿಕೆ ವಿತರಣೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಟ್ವೀಟ್‌ ಮಾಡಿದ್ದರು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಲಸಿಕೆ ಲಭ್ಯವಿಲ್ಲದಿರುವ ಕಾರಣ ಲಾಕ್‌ಡೌನ್ ನೆಪ ಹೇಳಿ ಮುಂದೂಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.

ಸರ್ಕಾರ ಖರೀದಿಸುತ್ತಿರುವ 2 ಕೋಟಿ ಡೋಸ್ ಪೈಕಿ ಶನಿವಾರ ರಾತ್ರಿ 3.5 ಲಕ್ಷ ಡೋಸ್ ಲಸಿಕೆ ರಾಜ್ಯಕ್ಕೆ ತಲುಪಿದೆ. ರಾಜ್ಯಕ್ಕೆ ತಲುಪಿರುವ 3.5 ಲಕ್ಷ ಕೊವಿಶೀಲ್ಡ್‌ ಡೋಸ್​ಗಳಲ್ಲಿ 18 ವರ್ಷದವರಿಗಾಗಿ ಒಟ್ಟು 6.5 ಲಕ್ಷ ಡೋಸ್ ಪೂರೈಕೆ ಮಾಡಲಾಗಿದೆ.

ಇದನ್ನೂ ಓದಿ: ಕೊವಿಡ್ ನಿರ್ವಹಣೆ: ತಾಂತ್ರಿಕ ಸಮಸ್ಯೆಯಿಂದಾಗಿ ವಿಚಾರಣೆ ಮೇ 13ಕ್ಕೆ ಮುಂದೂಡಿದ ಸುಪ್ರೀಂಕೋರ್ಟ್

ಕೊವಿಡ್​ 19 ಚಿಕಿತ್ಸೆಗೆ ವರವಾಗಲಿದೆಯೇ ಪಶು ಔಷಧಿ ಐವೆರ್ಮೆಕ್ಟಿನ್?

(Revenue Minister R Ashoka gave hints to announce Karnataka Lockdown Relief Fund)

Published On - 4:14 pm, Mon, 10 May 21