ಆಕ್ಸಿಜನ್ ಆಯ್ತು ಇದೀಗ ಜೀವ ಜಲಕ್ಕಾಗಿ ಹಾಹಾಕಾರ‌; ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಕುಡಿಯಲು ನೀರು ಸಿಗದೆ ಪರದಾಟ

ಬೆಳಗ್ಗೆ ಆರು ಗಂಟೆಯಿಂದಲೇ ರೋಗಿಗಳು ನೀರಿಗಾಗಿ ಪರಿತಪ್ಪಿಸುತ್ತಿದ್ದರೆ ಬಿಮ್ಸ್ ಆಡಳಿತ ಮಂಡಳಿ ಮಾತ್ರ ಸಾಯುವವರೂ ಸಾಯಲಿ ಬಿಡು ಎನ್ನುವ ಮನೋಭಾವನೆಯಲ್ಲಿ ವರ್ತಿಸುತ್ತಿದೆ. ಶೌಚಾಲಯದಲ್ಲಿ ನೀರಿಲ್ಲ, ಕುಡಿಯಲು ಕೂಡ ಹನಿ ನೀರಿಲ್ಲ. ಇದರಿಂದ ಪರದಾಡಿದ ರೋಗಿಗಳು ತಮ್ಮ ಕುಟುಂಬಸ್ಥರಿಂದ ನೀರು ತರಸಿಕೊಂಡಿದ್ದಾರೆ.

ಆಕ್ಸಿಜನ್ ಆಯ್ತು ಇದೀಗ ಜೀವ ಜಲಕ್ಕಾಗಿ ಹಾಹಾಕಾರ‌; ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಕುಡಿಯಲು ನೀರು ಸಿಗದೆ ಪರದಾಟ
ಬೆಳಗಾವಿ ಬಿಮ್ಸ್ ಆಸ್ಪತ್ರೆ
Follow us
preethi shettigar
|

Updated on: May 10, 2021 | 4:26 PM

ಬೆಳಗಾವಿ: ಕೊರೊನಾದ ಹೆಚ್ಚಳದಿಂದಾಗಿ ಸಾವು- ನೋವು ಸಂಭವಿಸುತ್ತಿದ್ದು, ರೋಗಿಗಳು ನರಳಾಡುವಂತಾಗಿದೆ. ಇನ್ನೊಂದು ಕಡೆ ಕೊರೊನಾ ಸೋಂಕಿತರು ಬೆಡ್ ಇಲ್ಲದೇ, ಆಕ್ಸಿಜನ್ ಕೊರತೆಯಿಂದ ಆಸ್ಪತ್ರೆ ಹೊರಗೆ ಪರದಾಟ ನಡೆಸುತ್ತಿದ್ದಾರೆ. ಹೀಗಿರುವಾಗಲೇ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿನ ಕೊವಿಡ್ ವಾರ್ಡ್​ನಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದ್ದು, ಜನರು ಮತ್ತಷ್ಟು ಆತಂಕಪಡುವಂತಾಗಿದೆ.

ಕುಂದಾನಗರಿ ಇದೀಗ ಕೊರೊನಾ ನಗರಿಯಾಗಿ ಮಾರ್ಪಡುತ್ತಿದ್ದು, ಇಲ್ಲಿನ ಎಲ್ಲಾ ಆಸ್ಪತ್ರೆಗಳು ಹೌಸ್​ಫುಲ್ ಆಗಿವೆ. ಆಕ್ಸಿಜನ್ ಬೆಡ್​ಗಳು ಸಿಗದೆ ನಿತ್ಯವೂ ಜನ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಇಲ್ಲಿ ಕುಡಿಯಲು ನೀರಿಲ್ಲ, ತೊಳೆದುಕೊಳ್ಳಲು ನೀರಿಲ್ಲ ಎನ್ನುವಂತಾಗಿದ್ದು, ರೋಗಿಗಳು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಸಾಮಾನ್ಯವಾಗಿ ರೋಗಿಗಳೊಂದಿಗೆ ಬಂದವರೇ ಕುಡಿಯಲು ನೀರಿನ ಬಾಟಲ್ ಹಿಡಿದುಕೊಂಡು ಬರುತ್ತಿದ್ದಾರೆ. ಆದ್ರೇ ಕೊವಿಡ್ ರೋಗಿಗಳಿಗೆ ಯಾರು ಅಟೆಂಡರ್ ಕೂಡ ಇರಲ್ಲ. ಹತ್ತಿರಕ್ಕೆ ಯಾರು ಬರಲ್ಲ ಈ ಸಂದರ್ಭದಲ್ಲಿ ಎಲ್ಲಾ ವ್ಯವಸ್ಥೆ ಮಾಡಬೇಕಿದ್ದ ಬಿಮ್ಸ್ ಆಸ್ಪತ್ರೆ ಮಾತ್ರ ಕೊರೊನಾ ರೋಗಿಗಳನ್ನ ಸಾವಿನ ಕೂಪಕ್ಕೆ ತಳ್ಳುತ್ತಿದೆ ಕೊರೊನಾ ಸೋಂಕಿತತು ತಿಳಿಸಿದ್ದಾರೆ.

ಇಂದು ಬೆಳಗ್ಗೆ ಆರು ಗಂಟೆಯಿಂದಲೇ ರೋಗಿಗಳು ನೀರಿಗಾಗಿ ಪರಿತಪ್ಪಿಸುತ್ತಿದ್ದರೆ ಬಿಮ್ಸ್ ಆಡಳಿತ ಮಂಡಳಿ ಮಾತ್ರ ಸಾಯುವವರೂ ಸಾಯಲಿ ಬಿಡು ಎನ್ನುವ ಮನೋಭಾವನೆಯಲ್ಲಿ ವರ್ತಿಸುತ್ತಿದೆ. ಶೌಚಾಲಯದಲ್ಲಿ ನೀರಿಲ್ಲ ಕುಡಿಯಲು ಕೂಡ ಹನಿ ನೀರಿಲ್ಲ. ಇದರಿಂದ ಪರದಾಡಿದ ರೋಗಿಗಳು ತಮ್ಮ ಕುಟುಂಬಸ್ಥರಿಂದ ನೀರು ತರಸಿಕೊಂಡು ಜೀವ ಉಳಿಸಿಕೊಂಡರೆ, ಇತ್ತ ಕೆಲ ರೋಗಿಗಳು ಬೇರೆ ಕಡೆ ತಾವೇ ಹೋಗಿ ನೀರು ತಂದು ಕುಡಿದಿದ್ದಾರೆ. ಆಕ್ಸಿಜನ್ ಸಮಸ್ಯೆ ಒಂದು ಕಡೆಯಾದರೆ ಇದೀಗ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಜೀವ ಜಲಕ್ಕಾಗಿಯೂ ಪರಿತಪ್ಪಿಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸ

ಮಧ್ಯಾಹ್ನದ ಬಳಿಕ ಟಿವಿ9 ನಲ್ಲಿ ವರದಿ ಪ್ರಸಾರ ಆಗುತ್ತಿದ್ದಂತೆ ಎಚ್ಚೇತ್ತುಕೊಂಡ ಜಿಲ್ಲಾಡಳಿತ ಕೂಡಲೇ ನೀರು ಬಿಡುವಂತೆ ಸೂಚನೆ ನೀಡಿತು‌. ಜಿಲ್ಲಾಧಿಕಾರಿ ಕೆ.ಹರೀಶ್‌ಕುಮಾರ್ ಆದೇಶ ಮಾಡುತ್ತಿದ್ದಂತೆ ಮಹಾನಗರ ಪಾಲಿಕೆಯಿಂದ ನೀರು ತರೆಸಿಕೊಂಡು ಬಿಮ್ಸ್ ಆಡಳಿತ ಮಂಡಳಿ ಕೊವಿಡ್ ವಾರ್ಡ್​ಗೆ ನೀರು ಬಿಡುವ ಕೆಲಸ ಮಾಡಿದರು. ಇನ್ನೂ ಕೊವಿಡ್ ವಾರ್ಡ್​ನಲ್ಲಿ ನೀರಿನ ಸಮಸ್ಯೆ ಕುರಿತು ಮತ್ತು ಬೆಡ್​ಗಾಗಿ ಜನರು ಪರದಾಡುವ ಕುರಿತು ಕೂಡ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಅಪರ ಜಿಲ್ಲಾಧಿಕಾರಿ ಅವರನ್ನ ಬಿಮ್ಸ್ ಆಸ್ಪತ್ರೆ ಮೇಲ್ವಿಚಾರಕರನ್ನಾಗಿ ನೇಮಕ ಮಾಡಿ ಸಮಸ್ಯೆಗಳು ಆಗದಂತೆ ಡಿಸಿ ಸೂಚನೆ ನೀಡಿದರು. ಅಷ್ಟೇ ಅಲ್ಲದೇ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ವಾರ್ನಿಂಗ್ ಕೂಡ ನೀಡಿದ್ದಾರೆ.

ಒಟ್ಟಾರೆ ಅವ್ಯವಸ್ಥೆ ಆಗರವಾಗಿರುವ ಬಿಮ್ಸ್ ಆಸ್ಪತ್ರೆ ಸುಧಾರಿಸಲು ಜಿಲ್ಲಾಡಳಿತ ಹರಸಾಹಸ ಪಡುತ್ತಿದ್ದರೂ ಆಡಳಿತ ಮಂಡಳಿ ಮಾತ್ರ ಬೇಜವಾಬ್ದಾರಿತನ ಬಿಡುತ್ತಿಲ್ಲ. ಇತ್ತ ಕಳೆದ ಬಾರಿ ಡಿಸಿಎಂ ಸವದಿ ನೇತೃತ್ವದ ಕೊವಿಡ್ ನಿರ್ವಹಣಾ ಸಭೆಯಲ್ಲಿ ಬಿಮ್ಸ್ ನಿರ್ದೇಶಕ ವಿನಯ್ ದಾಸ್ತಿಕೊಪ್ಪಗೆ ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡರು ಯಾವುದೇ ಪ್ರಯೋಜ ಆಗಿಲ್ಲ. ಬಿಮ್ಸ್ ಆಸ್ಪತ್ರೆಗೆ ಹೋದರೆ ನರಕ ಅನುಭವಿಸುವ ಪರಿಸ್ಥಿತಿ ಇದೆ ಎಂದು ಅದೆಷ್ಟೋ ರೋಗಿಗಳು ಆಸ್ಪತ್ರೆಗೂ ಬರುತ್ತಿಲ್ಲ ಇನ್ನಾದರೂ ಸರ್ಕಾರ ಎಚ್ಚೇತ್ತುಕೊಂಡು ಬಿಮ್ಸ್ ಆಡಳಿತ ಮಂಡಳಿಗೆ ಬಿಸಿ ಮುಟ್ಟಿಸಿ, ಬಡ ರೋಗಿಗಳನ್ನ ಉಳಿಸುವ ಕೆಲಸ ಮಾಡಲಿ ಎನ್ನುವುದು ನಮ್ಮ ಆಶಯ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕಳೆದ 15 ದಿನಗಳಿಂದ ಕೊರೊನಾ ಸೋಂಕು ಹೆಚ್ಚಳ: ಕೇಂದ್ರ ಸರ್ಕಾರ ಕಳವಳ

ಕೋಲಾರ ಜಿಲ್ಲಾಸ್ಪತ್ರೆಯ ಎಲ್ಲ ಬೆಡ್​ಗಳನ್ನೂ ಆಕ್ಸಿಜನ್‌ ಬೆಡ್‌ಗಳನ್ನಾಗಿ ಪರಿವರ್ತನೆ ಮಾಡಲಾಗುವುದು; ಡಿಸಿಎಂ ಡಾ ಅಶ್ವತ್ಥನಾರಾಯಣ