ಪರಸ್ಪರ ಪ್ರೀತಿಸಿ, ಹಿಂದೂ ಶಾಸ್ತ್ರದಂತೆ ಮದುವೆಯಾದ ಇಬ್ಬರು ಯುವತಿಯರು; ಸಲಿಂಗಿಗಳ ವಿವಾಹ ನೋಡಿ ಸ್ಥಳೀಯರು ಕಂಗಾಲು

ಈ ಯುವತಿಯರು ಲುಧಿಯಾನಾದವರೇ ಆಗಿದ್ದರೂ, ಬೇರೆಬೇರೆ ಹಳ್ಳಿಯವರು. ಇದೀಗ ಹಿಂದೂ ಸಂಪ್ರದಾಯದಂತೆ, ಎಲ್ಲ ರೀತಿಯ ಆಚರಣೆಗಳನ್ನೂ ಮಾಡಿಕೊಂಡು ಮದುವೆಯಾಗಿದ್ದಾರೆ. ಅದರಲ್ಲಿ ಒಬ್ಬಳು ಹುಡುಗಿ ಇನ್ನೊಬ್ಬಾಕೆಗೆ ಮಂಗಲಸೂತ್ರ ಕಟ್ಟಿ, ಹಣೆಗೆ ಸಿಂಧೂರ ಇಟ್ಟಿದ್ದಾಳೆ.

ಪರಸ್ಪರ ಪ್ರೀತಿಸಿ, ಹಿಂದೂ ಶಾಸ್ತ್ರದಂತೆ ಮದುವೆಯಾದ ಇಬ್ಬರು ಯುವತಿಯರು; ಸಲಿಂಗಿಗಳ ವಿವಾಹ ನೋಡಿ ಸ್ಥಳೀಯರು ಕಂಗಾಲು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Jul 21, 2021 | 4:27 PM

ಲುಧಿಯಾನಾ: ಸಲಿಂಗ ವಿವಾಹ (Same Sex Marriage) ಈಗೀಗ ಬೆಳಕಿಗೆ ಬರುತ್ತಿದ್ದರೂ ಅದನ್ನು ಮುಕ್ತ ಮನಸಿನಿಂದ ಎಲ್ಲರೂ ಒಪ್ಪಿಕೊಳ್ಳುವುದಿಲ್ಲ. ಅದರಲ್ಲೂ ಭಾರತದಂಥ ದೇಶದಲ್ಲಿ ಕೆಲವಕ್ಕೆಲ್ಲ ಕಾನೂನಿನಲ್ಲಿ ಅವಕಾಶ ಕೊಟ್ಟರೂ, ಜನರ ಮನಸಿನಲ್ಲಿ ಸ್ಥಳ ಇರುವುದಿಲ್ಲ. ಅನೇಕರು ಅದನ್ನು ಒಪ್ಪಿಕೊಳ್ಳುವುದಿಲ್ಲ. ಅದರಲ್ಲಿ ಈ ಸಲಿಂಗ ವಿವಾಹವೂ ಒಂದು. ಆದಾಗ್ಯೂ ಕೆಲವು ಕಡೆಗಳಲ್ಲಿ ಇಂಥ ಮದುವೆ (Wedding)ಗಳು ನಡೆಯುತ್ತಿವೆ. ಇದೀಗ ಪಂಜಾಬ್​ನ ಲುಧಿಯಾನಾ(ludhiana)ದಲ್ಲಿ ಇಬ್ಬರು ಹೆಣ್ಣುಮಕ್ಕಳು ಮದುವೆಯಾಗಿದ್ದಾರೆ.

ಇವರಿಬ್ಬರೂ ಹುಡುಗಿಯರೂ ಸಂಬಂಧದಲ್ಲಿ ಕಸಿನ್ಸ್​. ಆದರೆ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಕೊನೆಗೂ ಧೈರ್ಯ ಮಾಡಿ ಮದುವೆಯಾಗಲು ನಿರ್ಧರಿಸಿ ಲುಧಿಯಾನಾದ ಒಂದು ದೇವಸ್ಥಾನದಲ್ಲಿ ಹಸೆಮಣೆಗೆ ಏರಿದ್ದಾರೆ. ಅದರಲ್ಲಿ ಒಬ್ಬ ಹುಡುಗಿಯ ಅಣ್ಣ ಕನ್ಯಾದಾನ ಮಾಡಿದ್ದಾನೆ. ಈ ಜೋಡಿ ಪರಸ್ಪರ ಮಾಲೆ ಹಾಕಿಕೊಳ್ಳುವ (ವರಮಾಲೆ ಸಂಪ್ರದಾಯ) ಕಾರ್ಯಕ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆದ ನಂತರ ಪರ-ವಿರೋಧ ಚರ್ಚೆಗಳು ಭರ್ಜರಿಯಾಗಿಯೇ ನಡೆಯುತ್ತಿವೆ.

ಈ ಯುವತಿಯರು ಲುಧಿಯಾನಾದವರೇ ಆಗಿದ್ದರೂ, ಬೇರೆಬೇರೆ ಹಳ್ಳಿಯವರು. ಇದೀಗ ಹಿಂದೂ ಸಂಪ್ರದಾಯದಂತೆ, ಎಲ್ಲ ರೀತಿಯ ಆಚರಣೆಗಳನ್ನೂ ಮಾಡಿಕೊಂಡು ಮದುವೆಯಾಗಿದ್ದಾರೆ. ಅದರಲ್ಲಿ ಒಬ್ಬಳು ಹುಡುಗಿ ಇನ್ನೊಬ್ಬಾಕೆಗೆ ಮಂಗಲಸೂತ್ರ ಕಟ್ಟಿ, ಹಣೆಗೆ ಸಿಂಧೂರ ಇಟ್ಟಿದ್ದಾಳೆ. ದೇಗುಲದ ಆವರಣದಲ್ಲಿ ಒಬ್ಬ ಯುವಕ ಕನ್ಯಾದಾನ ಶಾಸ್ತ್ರ ಮಾಡಿದ್ದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ. ಆದರೆ ವಿಡಿಯೋದಿಂದ ಸ್ಥಳೀಯರಂತೂ ಸಿಕ್ಕಾಪಟೆ ಶಾಕ್​ ಆಗಿದ್ದಾರೆ. ಅಚ್ಚರಿಗೂ ಒಳಗಾಗಿದ್ದಾರೆ. ಇಬ್ಬರೂ ಅಪ್ರಾಪ್ತೆಯರಲ್ಲ. ನಾವೇನೂ ಮಾಡಲು ಬರುವುದಿಲ್ಲ ಎಂದು ಪೊಲಿಸರೂ ಹೇಳಿಬಿಟ್ಟಿದ್ದಾರೆ. ಅದರಲ್ಲೂ ಈ ಇಬ್ಬರು ಹೆಣ್ಣುಮಕ್ಕಳಲ್ಲಿ ಒಬ್ಬಾಕೆಯ ಮನೆಯಲ್ಲಿ ಮದುವೆಗೆ ಸಂಪೂರ್ಣವಾಗಿ ಒಪ್ಪಿಗೆ ಕೂಡ ಕೊಟ್ಟಿದ್ದಾರೆ.

ನಮ್ಮ ದೇಶದಲ್ಲಿ ಸಲಿಂಗ ಕಾಮ ಅಪರಾಧ ಎಂದು ಹೇಳುತ್ತಿದ್ದ ಐಪಿಸಿ ಸೆಕ್ಷನ್ 377ನ್ನು 2018ರಲ್ಲಿ ಐವರು ನ್ಯಾಯಾಧೀಶರನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠವೇ ರದ್ದುಗೊಳಿಸಿದೆ. ಈ ಮೂಲಕ ಸಲಿಂಗ ಸೆಕ್ಸ್ ಅಪರಾಧವಲ್ಲ ಎಂದು ಹೇಳಿದೆ. ಆದಾಗ್ಯೂ ಭಾರತೀಯರು ಸಲಿಂಗ ವಿವಾಹವನ್ನು ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ. ಇದು ನಮ್ಮ ಸಂಪ್ರದಾಯಕ್ಕೆ ತದ್ವಿರುದ್ಧ ಎಂದೇ ಹೇಳಿಕೊಂಡು ಬರುತ್ತಿದ್ದಾರೆ.

ಇದನ್ನೂ ಓದಿ: Viral Photo: ನಾಗರಹಾವನ್ನು ತಿನ್ನುತ್ತಿರುವ ಕಾಳಿಂಗ ಸರ್ಪ; ಈ ಫೋಟೋವನ್ನು ನೀವೂ ನೋಡಲೇಬೇಕು..!

Girls ties knot In Punjab this same sex marriage opposed By locals

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ