Supreme Court: ಪಿಐಎಲ್ ಸಲ್ಲಿಸುವವರಿಗೆ ಕಿವಿಮಾತು ಹೇಳಿದ ಸುಪ್ರೀಂಕೋರ್ಟ್; ವಕೀಲರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಬಗ್ಗೆ ಅಸಮಾಧಾನ
ಕೇಂದ್ರದ ಕೊವಿಡ್ 19 (Covid 19) ಲಸಿಕೆ ನೀತಿಯನ್ನು ಪ್ರಶ್ನಿಸಿದ ಹಲವರ ಬಗ್ಗೆ ಎಫ್ಐಆರ್ ದಾಖಲಿಸಲಾಗಿದ್ದು, ಅದನ್ನೆಲ್ಲ ರದ್ದುಗೊಳಿಸುವಂತೆ ಸಲ್ಲಿಸಲಾದ ಪಿಐಎಲ್ಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ನ ಡಿ.ವೈ.ಚಂದ್ರಚೂಡ್ ಮತ್ತು ಎಂ.ಆರ್.ಶಾರನ್ನೊಳಗೊಂಡ ವಿಭಾಗೀಯ ಪೀಠ, ಬಹುತೇಕ ಪಿಐಎಲ್ಗಳಲ್ಲಿ ಸತ್ಯ ಶೋಧನೆಯ ಹೊಣೆಯನ್ನು ನ್ಯಾಯಾಲಯದ ಮೇಲೆ ಹಾಕಬಹುದು ಎಂದು ವಕೀಲರೂ ಭಾವಿಸುತ್ತಾರೆ ಎಂದು ಹೇಳಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸುವವರು, ದಾವೆ ಹೂಡುವವರು ಕೋರ್ಟ್ನಲ್ಲಿ ಮನವಿ ಮಾಡುವುದಕ್ಕೆ ಸಂಬಂಧಪಟ್ಟು ಇರುವ ಎಲ್ಲ ನಿಯಮಗಳನ್ನೂ ಸಂಪೂರ್ಣವಾಗಿ ಪಾಲಿಸಬೇಕು ಮತ್ತು ಸತ್ಯ ಶೋಧನೆಯ ಸಂಪೂರ್ಣ ಹೊಣೆಯನ್ನೂ ನ್ಯಾಯಾಲಯಗಳ ಮೇಲೆ ಬಿಡುವಂತಿಲ್ಲ ಎಂದು ಸುಪ್ರೀಂಕೋರ್ಟ್ (Supreme Court) ತಿಳಿಸಿದೆ.
ಕೇಂದ್ರದ ಕೊವಿಡ್ 19 (Covid 19) ಲಸಿಕೆ ನೀತಿಯನ್ನು ಪ್ರಶ್ನಿಸಿದ ಹಲವರ ಬಗ್ಗೆ ಎಫ್ಐಆರ್ ದಾಖಲಿಸಲಾಗಿದ್ದು, ಅದನ್ನೆಲ್ಲ ರದ್ದುಗೊಳಿಸುವಂತೆ ಸಲ್ಲಿಸಲಾದ ಪಿಐಎಲ್ಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ನ ಡಿ.ವೈ.ಚಂದ್ರಚೂಡ್ ಮತ್ತು ಎಂ.ಆರ್.ಶಾರನ್ನೊಳಗೊಂಡ ವಿಭಾಗೀಯ ಪೀಠ, ಬಹುತೇಕ ಪಿಐಎಲ್ಗಳಲ್ಲಿ ಸತ್ಯ ಶೋಧನೆಯ ಹೊಣೆಯನ್ನು ನ್ಯಾಯಾಲಯದ ಮೇಲೆ ಹಾಕಬಹುದು ಎಂದು ವಕೀಲರೂ ಭಾವಿಸುತ್ತಾರೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳೂ ಕೂಡ ಉಳಿದ ರಿಟ್ ಅರ್ಜಿಗಳಂತೆ. ಕೋರ್ಟ್ಗೆ ಮನವಿ ಮಾಡುವಾಗ ಪಾಲಿಸಬೇಕಾದ ಒಂದಷ್ಟು ನಿಯಮಗಳು ಇರುತ್ತವೆ. ಅದನ್ನು ಪ್ರತಿಯೊಬ್ಬರ ಪಿಐಎಲ್, ದಾವೆ ಹೂಡುವವರೂ ಪಾಲಿಸಬೇಕು ಎಂದು ಹೇಳಿದೆ.
ಏನಿದು ಕೇಸ್? ಇತ್ತೀಚೆಗೆ ಅನೇಕರು ಕೇಂದ್ರದ ಕೊವಿಡ್ 19 ಲಸಿಕೆಯ ಬಗ್ಗೆ ವ್ಯಂಗ್ಯ ಮಾಡಿ, ತಪ್ಪು ಮಾಹಿತಿ ನೀಡಿ ಜಾಹೀರಾತು, ಪೋಸ್ಟರ್ಗಳನ್ನು ಪ್ರದರ್ಶಿಸುತ್ತಿದ್ದರು. ಕೆಲವು ಸೋಷಿಯಲ್ ಮೀಡಿಯಾಗಳಲ್ಲೂ ಇದನ್ನು ಹರಿಬಿಡುತ್ತಿದ್ದರು. ಅದರ ನಿಯಂತ್ರಣಕ್ಕೆ ಕಾರ್ಯಪ್ರವೃತ್ತರಾದ ದೆಹಲಿ ಪೊಲೀಸರು ಅನೇಕರ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ. ಆದರೆ ಇನ್ನು ಮುಂದೆ ಕೂಡ ಕೊವಿಡ್ 19 ಲಸಿಕೆ ನೀತಿಯನ್ನು ಪ್ರಶ್ನಿಸಿದವರ ವಿರುದ್ಧ ಎಫ್ಐಆರ್ ದಾಖಲು ಮಾಡದಂತೆ ದೆಹಲಿ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಬೇಕು ಎಂದು ವಕೀಲ ಯಾದವ್ ಎಂಬುವರು ಸುಪ್ರೀಂಕೋರ್ಟ್ಗೆ ಪಿಐಎಲ್ ಸಲ್ಲಿಸಿದ್ದರು. ಅದರ ವಿಚಾರಣೆ ವೇಳೆ ಹೀಗೊಂದು ವಿಷಯವನ್ನು ಸುಪ್ರೀಂಕೋರ್ಟ್ ಹೇಳಿದೆ. ಯಾದವ್ ಅವರೇ ನೀವು ಒಂದು ಸಾಮಾನ್ಯವಾದ, ಹೆಚ್ಚೇನೂ ವಿವರವೇ ಇಲ್ಲದ ಪಿಐಎಲ್ನ್ನು ಸಲ್ಲಿಸಿದ್ದೀರಿ. ದೆಹಲಿ ಪೊಲೀಸರು ದಾಖಲಿಸಿರುವ ಎಫ್ಐಆರ್ನ ದಾಖಲೆಗಳ ಪ್ರತಿಯನ್ನಾದರೂ ನಮಗೆ ನೀಡಬೇಕು ಎಂದು ಸೂಚಿಸಿದೆ.
ಇದನ್ನೂ ಓದಿ: Pegasus row ಭಾರತವನ್ನು ಕಣ್ಗಾವಲು ರಾಜ್ಯವನ್ನಾಗಿ ಮಾಡಲು ಬಿಜೆಪಿ ಬಯಸಿದೆ: ಮಮತಾ ಬ್ಯಾನರ್ಜಿ
While filing PILs and litigants have to comply with rules of pleadings directed By Supreme Court
Published On - 4:57 pm, Wed, 21 July 21