Viral Photo: ನಾಗರಹಾವನ್ನು ತಿನ್ನುತ್ತಿರುವ ಕಾಳಿಂಗ ಸರ್ಪ; ಈ ಫೋಟೋವನ್ನು ನೀವೂ ನೋಡಲೇಬೇಕು..!
ಒಫಿಯೋಫಾಗಸ್ ಹನ್ನಾ (Ophiophagus Hannah) ಎಂಬುದು ಕಾಳಿಂಗ ಸರ್ಪದ ವೈಜ್ಞಾನಿಕ ಹೆಸರು. Ophiophagus ಎಂಬ ಶಬ್ದ ಉತ್ಪತ್ತಿಯಾಗಿದ್ದು ಗ್ರೀಕ್ನಿಂದ. ಹಾವು-ತಿನ್ನುವುದು ಎಂಬುದು ಈ ಪದದ ಅರ್ಥ.
ನಿಸರ್ಗವೆಂದರೆ ಅದು ಅಚ್ಚರಿ, ರಹಸ್ಯಗಳನ್ನೇ ತುಂಬಿಕೊಂಡಿರುವ ಒಂದು ಸುಂದರ ಅಂಶ. ಅದೆಷ್ಟೆಷ್ಟೋ ಹೊಸಹೊಸ ವಿಚಾರಗಳನ್ನು ಹೊರಸೂಸುತ್ತ ಇರುತ್ತದೆ. ಅದರಲ್ಲೂ ಈಗೀಗ ಈ ಇಂಟರ್ನೆಟ್, ಸಾಮಾಜಿಕ ಜಾಲತಾಣಗಳಿಂದಾಗಿ ಪ್ರಕೃತಿಯಲ್ಲಿ ನಡೆಯುವ ಅನೇಕಾನೇಕ ವಿಚಿತ್ರ, ಅಚ್ಚರಿಗಳು ಹಲವು ಜನರಿಗೆ ಸರಳವಾಗಿ ತಲುಪುತ್ತವೆ. ಅದರಲ್ಲೂ ಇತ್ತೀಚೆಗೆ ಕಾಳಿಂಗ ಸರ್ಪವೊಂದು (King Kobra)ಇನ್ನೊಂದು ಹಾವನ್ನು ತಿನ್ನುತ್ತಿರುವ ಅಪರೂಪದಲ್ಲಿ ಅಪರೂಪವೆಂಬಂಥ ಫೋಟೋವೊಂದು ಟ್ವಿಟರ್ನಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರಂತೂ ಶಾಕ್ ಆಗಿದ್ದಾರೆ.
ಸದಾ ಪ್ರಕೃತಿಗೆ ಸಂಬಂಧಪಟ್ಟ ಒಂದಿಲ್ಲೊಂದು ವಿಭಿನ್ನ ಪೋಸ್ಟ್ಗಳನ್ನು ಶೇರ್ ಮಾಡುವ ಭಾರತೀಯ ಅರಣ್ಯ ಸಂರಕ್ಷಣಾಧಿಕಾರಿ (IFS) ಪರ್ವೀನ್ ಕಸ್ವಾನ್ ಈ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಕಾಳಿಂಗ ಸರ್ಪದ ತೀಕ್ಷ್ಣ ಕಣ್ಣು ಮತ್ತು ಅದರ ಬಾಯಲ್ಲಿರುವ ಇನ್ನೊಂದು ನಾಗರ ಹಾವು ನಿಜಕ್ಕೂ ಭಯಹುಟ್ಟಿಸುವಂತಿದೆ. ಅಂದಹಾಗೆ ಈ ಫೋಟೋ ತೆಗೆದವರೂ ಪರ್ವೀನ್ ಕಸ್ವಾನ್ ಅವರೇ.
ಫೋಟೋದೊಂದಿಗೆ ಕಾಳಿಂಗ ಸರ್ಪದ ಬಗ್ಗೆ ತುಸು ಮಾಹಿತಿಯನ್ನೂ ಅವರು ಶೇರ್ ಮಾಡಿಕೊಂಡಿದ್ದಾರೆ. ಒಫಿಯೋಫಾಗಸ್ ಹನ್ನಾ (Ophiophagus Hannah) ಎಂಬುದು ಕಾಳಿಂಗ ಸರ್ಪದ ವೈಜ್ಞಾನಿಕ ಹೆಸರು. Ophiophagus ಎಂಬ ಶಬ್ದ ಉತ್ಪತ್ತಿಯಾಗಿದ್ದು ಗ್ರೀಕ್ನಿಂದ. ಹಾವು-ತಿನ್ನುವುದು ಎಂಬುದು ಈ ಪದದ ಅರ್ಥ. Hannah ಅಂದರೆ ಗ್ರೀಕ್ ಪುರಾಣದಲ್ಲಿ ಮರಗಳಲ್ಲಿ ವಾಸಿಸುವ ಅಪ್ಸರೆಯರು. ಕಾಳಿಂಗ ಸರ್ಪಗಳಿಗೆ ಈ ಹೆಸರು ಅನ್ವರ್ಥದಂತಿದೆ ಎಂದು ಪರ್ವೀನ್ ಕಸ್ವಾನ್ ತಿಳಿಸಿದ್ದಾರೆ. ಹಾಗೇ, ಗೂಡು ಕಟ್ಟುವ ಏಕೈಕ ಹಾವೆಂದರೆ ಅದು ಕಾಳಿಂಗ ಸರ್ಪ. ಬೇರೆ ಹಾವುಗಳಿಗೆ ಹೋಲಿಸಿದರೆ ಕಿಂಗ್ ಕೋಬ್ರಾ ತುಂಬ ತಿಂಡಿಪೋತ ಹಾವು ಎಂದೂ ಹೇಳಿದ್ದಾರೆ.
ಪರ್ವೀನ್ ಶೇರ್ ಮಾಡಿದ ಅದ್ಭುತ ಫೋಟೋವೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಅನೇಕರು ಅವರನ್ನು ಹೊಗಳಿದ್ದಾರೆ. ಇನ್ನೂ ಅನೇಕರು ತಾವು ಅಕ್ಷರಶಃ ಶಾಕ್ ಆಗಿದ್ದಾಗಿ ತಿಳಿಸಿದ್ದಾರೆ.
Ophiophagus hannah. A king cobra eating a spectacled cobra. They feed on lesser mortals. pic.twitter.com/LL8xzQoIww
— Parveen Kaswan (@ParveenKaswan) July 19, 2021
ಇದನ್ನೂ ಓದಿ: ಪ್ಲಾಸ್ಟಿಕ್ ಬಾಟಲ್, ಒಡೆದ ಕೋಳಿ ಮೊಟ್ಟೆಯಲ್ಲಿ ಅರಳಿದ ಹಸಿರು; ಮನೆಯಲ್ಲಿಯೇ ನಿರ್ಮಾಣವಾಗಿದೆ ಸುಂದರ ಉದ್ಯಾನವನ
Published On - 3:53 pm, Wed, 21 July 21