ಮಂದಿರಾಳ ಕಷ್ಟದ ಸಮಯದಲ್ಲಿ ವಯಸ್ಸಾದ ತಂದೆ-ತಾಯಿ ಬಂಡೆಯಂತೆ ಆಕೆ ಹಿಂದೆ ನಿಂತಿದ್ದಾರೆ!
ಇದುವರೆಗೆ ತಮ್ಮ ಪತಿಯ ನೆನೆಪಿನಲ್ಲಿ ಅವರೊಂದಿಗಿನ ಫೋಟೋಗಳನ್ನು ಶೇರ್ ಮಾಡುತ್ತಿದ್ದ ಮಂದಿರಾ ಮೊದಲಬಾರಿಗೆ ತಮ್ಮ ತಂದೆ-ತಾಯಿಯೊಂದಿಗಿನ ಫೋಟೋವನ್ನು ಶೇರ್ ಮಾಡಿದ್ದಾರೆ. ಪತಿಯನ್ನು ಕಳೆದುಕೊಂಡ ದುಃಖವನ್ನು ಅವರು ರಾಜ್ ಮತ್ತು ತಮ್ಮ ಫೋಟೋಗಳನ್ನು ಶೇರ್ ಮಾಡುತ್ತಾ ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ನವದೆಹಲಿ: ಇತ್ತೀಚಿಗಷ್ಟೇ ತಮ್ಮ ಪತಿ ರಾಜ್ ಕೌಶಲ್ ಅವರನ್ನು ಕಳೆದುಕೊಂಡು ಇನ್ನೂ ಆಘಾತದಿಂದ ಚೇತರಿಸಿಕೊಂಡಿರದ ಚಿತ್ರನಟಿ, ಮಾಡೆಲ್ ಮತ್ತು ಕ್ರೀಡಾ ನಿರೂಪಕಿ ಮಂದಿರಾ ಬೇಡಿ ಅವರು ಬುಧವಾರ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ತಂದೆ-ತಾಯಿಯೊಂದಿಗೆ ತನ್ನ ಮತ್ತು ತನ್ನಿಬ್ಬರು ಮಕ್ಕಳ ಫೋಟೋ ಹಾಕಿ ಫ್ಯಾಮಿಲಿ ಅಂತ ಶೀರ್ಷಿಕೆ ನೀಡಿರುವುದು ಅವರ ಈಗಿನ ಸ್ಥಿತಿಯಲ್ಲಿ ವಯಸ್ಸಾಗಿರುವ ಅಪ್ಪ-ಅಮ್ಮ ನೀಡುತ್ತಿರುವ ಬೆಂಬಲ, ನೈತಿಕ ಸ್ಥೈರ್ಯವನ್ನು ವಿವರಿಸುತ್ತದೆ. ಅವರ ತಂದೆ ವೆರಿಂದರ್ ಸಿಂಗ್ ಬೇಡಿ, ತಾಯಿ ಗೀತಾ ಬೇಡಿ, ಮಗಳು ತಾರಾ, ಮಗ ವೀರ್ ಮತ್ತು ಅವರೊಂದಿಗೆ ಮುಗಳ್ನಗುತ್ತಾ ನಿಂತಿರುವ ಖುದ್ದು ಮಂದಿರಾ- ಫೋಟೋ ಬಹಳ ಅಪ್ಯಾಯವೆನಿಸುತ್ತದೆ.
ಈ ಫೋಟೋ ಕೆಳಗೆ ಮಂದಿರಾ: ‘ಇಲ್ಲಿ ನನಗೆ ಸಿಗುತ್ತಿರೋದು ಪ್ರೀತಿ ಮಾತ್ರ. ನನಗೆ ಬೆಂಬಲ, ಪ್ರೀತಿ ಮತ್ತು ವಾತ್ಸಲ್ಯ ನೀಡುತ್ತಿರುವ ನನ್ನ ಕುಟುಂಬಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ,’ ಎಂದು ಬರೆದಿದ್ದಾರೆ. ಪತಿಯ ಆಕಸ್ಮಿಕ ಮರಣದ ನಂತರ ತಮ್ಮ ಹಿತೈಷಿಗಳು, ಆಪ್ತರು, ಸ್ನೇಹಿತರು ಅವರಿಗೂ ಕೃತಜ್ಞತೆಗಳನ್ನು ಆಕೆ ಸಲ್ಲಿಸಿದ್ದರು.
View this post on Instagram
ಮಂದಿರಾ ಅವರ ಫ್ಯಾಮಿಲಿ ಫೋಟೋ ಮನಮಿಡಿಯುವಂತಿದೆ.
ಇದುವರೆಗೆ ತಮ್ಮ ಪತಿಯ ನೆನೆಪಿನಲ್ಲಿ ಅವರೊಂದಿಗಿನ ಫೋಟೋಗಳನ್ನು ಶೇರ್ ಮಾಡುತ್ತಿದ್ದ ಮಂದಿರಾ ಮೊದಲಬಾರಿಗೆ ತಮ್ಮ ತಂದೆ-ತಾಯಿಯೊಂದಿಗಿನ ಫೋಟೋವನ್ನು ಶೇರ್ ಮಾಡಿದ್ದಾರೆ. ಪತಿಯನ್ನು ಕಳೆದುಕೊಂಡ ದುಃಖವನ್ನು ಅವರು ರಾಜ್ ಮತ್ತು ತಮ್ಮ ಫೋಟೋಗಳನ್ನು ಶೇರ್ ಮಾಡುತ್ತಾ ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
View this post on Instagram
ರಾಜ್ಗೆ ತಾವು ಹೇಳಿದ ವಿದಾಯದ ನೋಟ್ನಲ್ಲಿ ಮಂದಿರಾ, ಕರಳು ಮಿಡಿಯುವಂಥ ವಾಕ್ಯಗಳನ್ನು ಬರೆದಿದ್ದರು.
‘25 ವರ್ಷಗಳಿಂದ ನಾವು ಪರಸ್ಪರ ಅರ್ಥಮಾಡಿಕೊಂಡಿದ್ದೆವು, ನಮ್ಮ ಮದುವೆಯಾಗಿ 23 ವರ್ಷ ಕಳೆದವು, ಬದುಕಿನ ಪ್ರತಿಯೊಂದು ಸೆಣಸು, ಏರಿಳಿತದೊಂದಿಗೆ ಏಗುತ್ತಾ ನಾವು ಸಾಗಿದೆವು,’ ಎಂದು ಅವರು ಬರೆದಿದ್ದರು.
View this post on Instagram
49 ವರ್ಷ ವಯಸ್ಸಿನವರಾಗಿದ್ದ ರಾಜ್ ಕೌಶಲ್ ಜುಲೈ 1ರಂದು ತೀವ್ರ ಹೃದಯಕ್ಕೊಳಗಾಗಿ ನಿಧನ ಹೊಂದಿದರು. ಅವರ ಅಂತ್ಯಸಂಸ್ಕಾರದ ಎಲ್ಲ ವಿಧಿಗಳನ್ನೂ ಮಂದಿರಾ ಅವವರೇ ಪೂರೈಸಿದ್ದಕ್ಕೆ ಕೆಲವರು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದರು. ಇವರಿಬ್ಬರು ಮದುವೆಯಾಗಿದ್ದು 1999ರಲ್ಲಿ. ಅವರ ಮಗ ವೀರ್ ಹುಟ್ಟಿದ್ದು 2011 ರಲ್ಲಿ. ಅವನಿಗೆ ಈಗಿನ್ನೂ ಕೇವಲ 10 ಪ್ರಾಯ. ಮಗಳು ತಾರಾಳನ್ನು ಅವರು ಕಳೆದ ವರ್ಷ ಜುಲೈನಲ್ಲಿ ದತ್ತು ಪಡೆದಿದ್ದರು. ಅವಳಿಗೆ ಈಗ 4 ವರ್ಷ ವಯಸ್ಸು.
ಇದನ್ನೂ ಓದಿ: ರಾಜ್ ಕೌಶಲ್ ಅಂತ್ಯಕ್ರಿಯೆ: ಸಂಪ್ರದಾಯಕ್ಕೆ ಸೆಡ್ಡು ಹೊಡೆದು ಗಂಡನ ಅಂತ್ಯಸಂಸ್ಕಾರ ಮಾಡಿದ ಮಂದಿರಾ ಬೇಡಿ