ಆತನು ಕೊವಿಡ್ 19 ಪರೀಕ್ಷೆಗೆ ಒಳಗಾಗಿದ್ದು ನೆಗೆಟಿವ್ ರಿಪೋರ್ಟ್ ಬಂದಿದೆ. ಬಳಿಕ ಪೊಲೀಸರು ತನಿಖೆ ನಡೆಸಿ ಆತನನ್ನು ಬಂಧಿಸಿದ್ದಾರೆ. ಫೇಸ್ಬುಕ್ನಲ್ಲಿ ಫೋಟೋಗಳನ್ನು ಹಂಚಿಕೊಳ್ಳಲಾಗಿದ್ದು, ಕ್ವಾರಂಟೈನ್ನಲ್ಲಿದ್ದ 39 ವರ್ಷದ ವ್ಯಕ್ತಿ ತಪ್ಪಿಸಿಕೊಂಡಿದ್ದು, ಬಳಿಕ ಆತನ್ನು ಬಂಧಿಸಲಾಗಿದೆ. ಇದೇ ತಿಂಗಳು 19ನೇ ತಾರೀಕು ಸೋಮವಾರ ಸಂಜೆ 4.15ರ ವೇಳೆಗೆ ವ್ಯಕ್ತಿ ಬ್ರಿಸ್ಬೇನ್ನಿಂದ ವಿಮಾನದಲ್ಲಿ ಬಂದಿಳಿದಿದ್ದ. ಕ್ವಾರಂಟೈನ್ಗಾಗಿ ಹೋಟೆಲ್ವೊಂದರಲ್ಲಿ ವ್ಯವಸ್ಥೆ ಮಾಡಲಾಯಿತು. ಆದರೆ ಜುಲೈ 20ರ ಬೆಳಗ್ಗಿನ ಜಾವ ಸುಮಾರು 12.45ರ ಸರಿಸುಮಾರಿಗೆ ಹೋಟೆಲ್ ಕಿಟಕಿಯಿಂದ ಆಚೆ ಇಳಿದು ಪರಾರಿಯಾಗಿದ್ದಾನೆ. ಆತನಿರುವ ಜಾಗವನ್ನು ಪತ್ತೆ ಮಾಡಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊರೊನಾ ವೈರಸ್ ಹರಡುವಿಕೆಯಿಂದ 2020ರಿಂದ ಆಸ್ಟ್ರೇಲಿಯಾ ಗಡಿಗಳನ್ನು ಮುಚ್ಚಲಾಗಿದೆ. ದೇಶಕ್ಕೆ ಪ್ರವೇಶಿಸಲು ಅನುಮತಿ ಪಡೆದವರು ಎರಡು ವಾರಗಳ ಕಾಲ ಕ್ವಾರಂಟೈನ್ ಆಗಬೇಕು. ಆಸ್ಟ್ರೇಲಿಯಾದಲ್ಲಿ ಡೆಲ್ಟಾ ರೂಪಾಂತರದಿಂದಾಗಿ ನಿಯಂತ್ರಣಕ್ಕಾಗಿ ಹೆಣಗಾಡುವ ಪರಿಸ್ಥಿತಿ ಎದುರಾಗಿದೆ. ವಿಕ್ಟೋರಿಯಾ ಮತ್ತು ದಕ್ಷಿಣ ಆಸ್ಟ್ರೇಲಿಯಾ ಕೂಡಾ ನೂರಾರು ಕೊವಿಡ್ ಪ್ರಕರಣಗಳನ್ನು ವರದಿ ಮಾಡುತ್ತಲೇ ಇದೆ.
ಇದನ್ನೂ ಓದಿ:
Rekha Kadiresh ರೇಖಾ ಕೊಲೆ ಬಳಿಕ ಎಸ್ಕೇಪ್ ಆಗಲು ಆರೋಪಿಗಳು ರೂಪಿಸಿದ್ದ ಪ್ಲ್ಯಾನ್ ಹೇಗಿತ್ತು? ಇಲ್ಲಿದೆ ಡಿಟೈಲ್ಸ್
ಬೈಕ್ಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗೋವಾಗ ಮನೆಗೆ ನುಗ್ಗಿದ ಕಾರು; ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ