AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿರಾನಗರ ಫೈನಾನ್ಶಿಯರ್ ಕಿಡ್ನಾಪ್, ಕೊಲೆ ಪ್ರಕರಣ; ಹೊರ ಬಂತು ಸ್ಪೋಟಕ ಮಾಹಿತಿ

ಉರ್ವಶಿ ಚಿತ್ರಮಂದಿರ ಬಳಿ ಮಾರ್ಷಲ್ ಅರ್ಟ್ ತರಬೇತಿ ನೀಡುತ್ತಿದ್ದ ಅರೋಪಿ, ಜೈಲಿನಿಂದ ಬಂದ ಬಳಿಕ ಹಲವು ಕೇಸ್ನಲ್ಲಿ ಭಾಗಿಯಾಗಿದ್ದ. ಕವಿರಾಜ್ ಮತ್ತು ಆತನ ತಂಡ ವರ್ತೂರ್ ಪ್ರಕಾಶ್ನ ಕಿಡ್ನಾಪ್ ಮಾಡಿದ್ದರು. ವರ್ತೂರ್ ಪ್ರಕಾಶ್ ಕೇಸ್​ನಲ್ಲಿ ಜೈಲು ಸೇರಿದ್ರು.

ಇಂದಿರಾನಗರ ಫೈನಾನ್ಶಿಯರ್ ಕಿಡ್ನಾಪ್, ಕೊಲೆ ಪ್ರಕರಣ; ಹೊರ ಬಂತು ಸ್ಪೋಟಕ ಮಾಹಿತಿ
ಅಂಬರೀಶ್ ಮತ್ತು ಕವಿರಾಜ್
TV9 Web
| Edited By: |

Updated on: Jul 28, 2021 | 4:38 PM

Share

ಬೆಂಗಳೂರು: ಇಂದಿರಾನಗರ ಫೈನಾನ್ಶಿಯರ್ ವಿಜಯ್ ಕುಮಾರ್ ಕಿಡ್ನಾಪ್ ಮಾಡಿ, ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಅರೋಪಿಗಳ ಹಿನ್ನೆಲೆಯನ್ನು ಕಲೆಹಾಕುವಾಗ ಸ್ಪೋಟಕ ಮಾಹಿತಿ ಹೊರ ಬಂದಿದೆ. ಅರೋಪಿ ಕವಿರಾಜ್ ಭೂಗತ ದೊರೆ ರವಿ ಪೂಜಾರಿ ಸಹಚರನೆಂದು ತಿಳಿದುಬಂದಿದೆ. ರವಿ ಪೂಜಾರಿ ಅಣತಿಯಂತೆ ಶಬ್ ನಮ್ ಡೆವಲಪರ್ಸ್ ಕಛೇರಿ ಮೇಲೆ ಗುಂಡು ಹಾರಿಸಲಾಗಿತ್ತು. ಆ ವೇಳೆ ಇಬ್ಬರ ಕೊಲೆ ನಡೆದಿತ್ತು. ಕೇಸ್ನಲ್ಲಿ ಕವಿರಾಜ್ ಜೈಲು ಸೇರಿ ಹೊರ ಬಂದಿದ್ದ.

ಉರ್ವಶಿ ಚಿತ್ರಮಂದಿರ ಬಳಿ ಮಾರ್ಷಲ್ ಅರ್ಟ್ ತರಬೇತಿ ನೀಡುತ್ತಿದ್ದ ಅರೋಪಿ, ಜೈಲಿನಿಂದ ಬಂದ ಬಳಿಕ ಹಲವು ಕೇಸ್ನಲ್ಲಿ ಭಾಗಿಯಾಗಿದ್ದ. ಕವಿರಾಜ್ ಮತ್ತು ಆತನ ತಂಡ ವರ್ತೂರ್ ಪ್ರಕಾಶ್ನ ಕಿಡ್ನಾಪ್ ಮಾಡಿದ್ದರು. ವರ್ತೂರ್ ಪ್ರಕಾಶ್ ಕೇಸ್​ನಲ್ಲಿ ಜೈಲು ಸೇರಿದ್ರು. ಜೈಲಿನಿಂದ ಬಂದ ಬಳಿಕ ಮತ್ತೆ ಕಿಡ್ನಾಪ್ ಮಾಡಲು ಪ್ಲಾನ್ ಮಾಡಿದ್ದರು.

ಹೊಸೂರಿನಲ್ಲಿ ಒರ್ವ ಫೈನಾನ್ಶಿಯರ್ ಕಿಡ್ನಾಪ್ ಮಾಡಲು ಸ್ಕೆಚ್ ಹಾಕಿದ್ದರು. ಈ ವೇಳೆ ಇನ್ನೊರ್ವ ಅರೋಪಿ ಅಂಬರೀಶ್ ಕವಿರಾಜ್ಗೆ ಮಾಹಿತಿ ನೀಡಿದ್ದ. ತನಗೆ ಪರಿಚಿತ ಫೈನಾನ್ಶಿಯರ್ ಒಬ್ಬ ಇಂದಿರಾನಗರದಲ್ಲಿ ಇದ್ದಾನೆ ಎಂದು ಮಾಹಿತಿ ನೀಡುತ್ತಾನೆ. ಈ ಹಿಂದೆ 2002ರಲ್ಲಿ ಅಂಬರೀಶ್ ಮತ್ತು ಮೃತ ವಿಜಯ್ ಕುಮಾರ್ ಜೈಲಿನಲ್ಲಿ ಭೇಟಿಯಾಗಿದ್ದರು. ಅಂಬರೀಶ್ ಜೊತೆ ತಾನೊಂದು ಮೂರು ಕೋಟಿ ಮೌಲ್ಯದ ಆಸ್ತಿ ಖರೀದಿ ಮಾಡಿದ್ದೆ ಎಂದು ವಿಜಯ್ ಕುಮಾರ್ ಹೇಳಿಕೊಂಡಿದ್ದ.

ಮೃತ ವಿಜಯ್ ಕುಮಾರ್

ಬಿಲ್ಡಪ್ ಕೊಡುತ್ತಿದ್ದ ಮೃತ ವಿಜಯ್ ಕುಮಾರ್ ವಿಜಯ್ ಕುಮಾರ್ ಆಟೋ ಚಾಲಕ. ಅದರೆ ನಕಲಿ ಚಿನ್ನದ ಆಭರಣ ಧರಿಸಿ ಫೈನಾನ್ಶಿಯರ್ ಎಂದು ಬಿಲ್ಡಪ್ ಕೊಡುತಿದ್ದ. ವಿಜಯ್ ಕುಮಾರ್ ಬಿಲ್ಡಪ್ ನಂಬಿ ಅಂಬರೀಶ್ ಕವಿರಾಜ್​ಗೆ ಮಾಹಿತಿ ನೀಡಿದ್ದ. ಬಳಿಕ ಹೊಸೂರು ಬಳಿ ಒಂದು ಜಾಗ ಇದೆ ತೋರಿಸುತ್ತೇನೆ ಎಂದು ಅಂಬರೀಶ್ ಕರೆದುಕೊಂಡು ಹೋಗಿದ್ದ. ಆಗ ಕವಿರಾಜ್ ಮತ್ತು ಆತನ ತಂಡ ವಿಜಯ್ ಕುಮಾರ್ನನ್ನು ಕಿಡ್ನಾಪ್ ಮಾಡಿದ್ದಾರೆ. ಬಳಿಕ ಬಂಗಾರ ನಕಲಿ ಎಂಬುದು ತಿಳಿದುಬಂದಿದೆ.

ಮತ್ತೊಂದು ಕೊಲೆ ಕೇಸ್ ಬಯಲಿಗೆ ಈ ನಡುವೆ ಅರೋಪಿಗಳು ವಿಜಯ್ಗೆ ಮಚ್ಚಿನಿಂದ ಹಲ್ಲೆ ಮಾಡಿದ್ದರು. ಹಣ ಏನು ಇಲ್ಲಾ ಎಂದಾಗ ಮೃತ ದೇಹವನ್ನು ಹೋಸುರು ಬಳಿ ಎಸೆದು ಹೋಗಿದ್ದರು ಎಂಬುದು ತಿಳಿದುಬಂದಿದೆ. ಅಲ್ಲದೆ ತನಿಖೆ ವೇಳೆ ಮತ್ತೊಂದು ಕೊಲೆ ಕೇಸ್ ಬಯಲಿಗೆ ಬಂದಿದೆ. ಆರೋಪಿ ಅಂಬರೀಶ್ ಜುಲೈ ಎರಡರಂದು ಸರ್ಜಾಪುರದಲ್ಲಿ ಕೊಲೆ ಮಾಡಿರುವ ಬಗ್ಗೆ ತನಿಖೆ ವೇಳೆ ಬಯಲಾಗಿದೆ. ಬೇರೊಂದು ತಂಡದೊಂದಿಗೆ ಸೇರಿ ಸುಪಾರಿ ಪಡೆದು ಕಾರು ಚಾಲಕ ಒರ್ವನನ್ನು ಕೊಲೆ ಮಾಡಿರುವುದು ತಿಳಿದುಬಂದಿದ್ದು, ತಲೆಮರಿಸಿಕೊಂಡಿರುವ ಹಲವು ಅರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ

ಕಾಲಿಗೆ ಗುಂಡು ಹಾರಿಸಿ ಕಿಡ್ನ್ಯಾಪ್, ಕೊಲೆ ಆರೋಪಿಗಳ ಬಂಧನ

ಕಿಡ್ನಾಪ್ ಮಾಡಿ ಕೋಟಿಗೆ ಬೇಡಿಕೆ ಇಟ್ಟಿದ್ದ ಖತರ್ನಾಕ್ ಖದೀಮರು ಅರೆಸ್ಟ್.. ಐವರಿಗಾಗಿ ಮುಂದುವರೆದ ಶೋಧ

(Some information is available on the investigation of Indiranagar financier murder case)