ಕಿಡ್ನಾಪ್ ಮಾಡಿ ಕೋಟಿಗೆ ಬೇಡಿಕೆ ಇಟ್ಟಿದ್ದ ಖತರ್ನಾಕ್ ಖದೀಮರು ಅರೆಸ್ಟ್.. ಐವರಿಗಾಗಿ ಮುಂದುವರೆದ ಶೋಧ

ಗ್ರಾನೈಟ್ ಕಮಿಷನ್ ವ್ಯವಹಾರ ಮಾಡುತ್ತಿದ್ದ ಜಬೀಖಾನ್ ಖಾನ್​ನನ್ನು ಸಿನಿಮಾ ಸ್ಟೈಲ್​ನಲ್ಲಿ‌ ಕಿಡ್ನಾಪ್ ಮಾಡಿ ಆರೋಪಿಗಳು 1ಕೋಟಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಬೆದರಿಕೆ ಕರೆಗೆ ಅಂಜಿದ ಪತ್ನಿ, ತನ್ನ ಗಂಡನ ಪ್ರಾಣ ಉಳಿಸಲು ಚಿನ್ನಾಭರಣ ಗಿರವಿ ಇಟ್ಟು 6.50 ಲಕ್ಷ ಹಣವನ್ನು ಕಿಡ್ನಾಪರ್ಸ್​ ಗೆ ನೀಡಿದ್ದರು.

ಕಿಡ್ನಾಪ್ ಮಾಡಿ ಕೋಟಿಗೆ ಬೇಡಿಕೆ ಇಟ್ಟಿದ್ದ ಖತರ್ನಾಕ್ ಖದೀಮರು ಅರೆಸ್ಟ್.. ಐವರಿಗಾಗಿ ಮುಂದುವರೆದ ಶೋಧ
ಸಾಂದರ್ಭಿಕ ಚಿತ್ರ
Follow us
ಆಯೇಷಾ ಬಾನು
|

Updated on: Mar 19, 2021 | 8:39 AM

ಮೈಸೂರು: ಹಣಕ್ಕಾಗಿ ವ್ಯಕ್ತಿಯ ಅಪಹರಣ ಮಾಡಿ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ನಂಜನಗೂಡು ಗ್ರಾಮಾಂತರ ಪೊಲೀಸರಿಂದ ಮೂವರನ್ನು ಬಂಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಜಾವೀದ್ ಖಾನ್, ಮೊಹಮ್ಮದ್ ನಜೀಬ್, ಶಾಕೀರುದ್ದೀನ್ ಬಂಧಿತರು. ಚಾಮರಾಜನಗರದ ಜಬೀಖಾನ್ ಅಪಹರಿಸಿ ₹1 ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ಸದ್ಯ ಈಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಘಟನೆ ಗ್ರಾನೈಟ್ ಕಮಿಷನ್ ವ್ಯವಹಾರ ಮಾಡುತ್ತಿದ್ದ ಜಬೀಖಾನ್ ಖಾನ್​ನನ್ನು ಸಿನಿಮಾ ಸ್ಟೈಲ್​ನಲ್ಲಿ‌ ಕಿಡ್ನಾಪ್ ಮಾಡಿ ಆರೋಪಿಗಳು 1ಕೋಟಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಬೆದರಿಕೆ ಕರೆಗೆ ಅಂಜಿದ ಪತ್ನಿ, ತನ್ನ ಗಂಡನ ಪ್ರಾಣ ಉಳಿಸಲು ಚಿನ್ನಾಭರಣ ಗಿರವಿ ಇಟ್ಟು 6.50 ಲಕ್ಷ ಹಣವನ್ನು ಕಿಡ್ನಾಪರ್ಸ್​ ಗೆ ನೀಡಿದ್ದರು. ಬಳಿಕ ಮನೆಯಿಂದ ಹೊರಬಾರದಂತೆ, ಪೊಲೀಸರಿಗೆ ದೂರು ನೀಡದಂತೆ ಕಿಡ್ನಾಪರ್ಸ್ ಬೆದರಿಕೆ ಹಾಕಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ನಂಜನಗೂಡು ಗ್ರಾಮಾಂತರ ಪೊಲೀಸರು ಸೂಕ್ಷ್ಮ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಎ1 ಆರೋಪಿ ಜಾವೀದ್ ಖಾನ್ ಅಪಹರಣದ ರೂವಾರಿ. ಈತ ಮಂಡ್ಯ, ಮೈಸೂರು, ಹಾಸನ, ಬೆಂಗಳೂರಿನ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈ ಕಿಡ್ನಾಪ್ ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದು ಒಂದು ಕಾರು, ರಿವಾಲ್ವರ್, ಚಾಕುಗಳನ್ನು ವಶಕ್ಕೆ ಪಡೆದಿದ್ದಾರೆ. ಉಳಿದ ಐವರು ಆರೋಪಿಗಳಿಗಾಗಿ ಶೋಧ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಯುವಕರನ್ನು ಕಿಡ್ನಾಪ್ ಮಾಡಿ ಹಣಕ್ಕೆ ಡಿಮ್ಯಾಂಡ್; ಕರ್ನಾಟಕ ಜನಾಭಿವೃದ್ಧಿ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಸೇರಿ ಮೂವರು ಅರೆಸ್ಟ್