ಕಾಲಿಗೆ ಗುಂಡು ಹಾರಿಸಿ ಕಿಡ್ನ್ಯಾಪ್, ಕೊಲೆ ಆರೋಪಿಗಳ ಬಂಧನ
ಜುಲೈ 5ರಂದು ವಿಜಯ್ ಕುಮಾರ್ರನ್ನ ಆರೋಪಿಗಳು ಕಿಡ್ನಾಪ್ ಮಾಡಿದ್ದರು. ಕಿಡ್ನಾಪ್ ಬಳಿಕ ಹಣಕ್ಕೆ ಬೇಡಿಕೆ ಇಟ್ಟಿದ್ರು. ಹಣ ನೀಡುವುದು ತಡವಾಗಿದ್ದಾಗ ಕೊಲೆ ಮಾಡಿ ಹೊಸೂರು ಬಳಿ ಹೂತು ಹಾಕಿದ್ರು.
ಬೆಂಗಳೂರು: ಕಾಲಿಗೆ ಗುಂಡು ಹಾರಿಸಿ ಕಿಡ್ನ್ಯಾಪ್, ಕೊಲೆ ಆರೋಪಿಗಳನ್ನು ಸೆರೆ ಹಿಡಿದಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಅಂಬರೀಶ್, ಕವಿರಾಜ್ ಬಂಧಿತ ಆರೋಪಿಗಳು. ಇಂದಿರಾನಗರ ಫೈನಾನ್ಸಿಯರ್ ವಿಜಯ್‌ಕುಮಾರ್ ಎಂಬುವವರನ್ನು ಅಪಹರಿಸಿ ಹತ್ಯೆಗೈದಿದ್ದರು. ಕೇಸ್ ಸಂಬಂಧ ಆರೋಪಿಗಳ ಬಂಧನಕ್ಕೆ ಎಸಿಪಿ ಕುಮಾರ್, ಇನ್ಸ್‌ಪೆಕ್ಟರ್ ಹರೀಶ್ ತಂಡ ತೆರಳಿತ್ತು. ಈ ವೇಳೆ ಬೆಳಗ್ಗೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಅಂಬರೀಶ್, ಕವಿರಾಜ್ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.
ಜುಲೈ 5ರಂದು ವಿಜಯ್ ಕುಮಾರ್ರನ್ನ ಆರೋಪಿಗಳು ಕಿಡ್ನಾಪ್ ಮಾಡಿದ್ದರು. ಕಿಡ್ನಾಪ್ ಬಳಿಕ ಹಣಕ್ಕೆ ಬೇಡಿಕೆ ಇಟ್ಟಿದ್ರು. ಹಣ ನೀಡುವುದು ತಡವಾಗಿದ್ದಾಗ ಕೊಲೆ ಮಾಡಿ ಹೊಸೂರು ಬಳಿ ಹೂತು ಹಾಕಿದ್ರು. ಇನ್ನು ಮಾಜಿ ಶಾಸಕ ವರ್ತೂರು ಪ್ರಕಾಶ್ರನ್ನ ಕಿಡ್ನಾಪ್ ಮಾಡಿದ್ದು ಇದೇ ತಂಡ. ಸದ್ಯ ಈ ಬಗ್ಗೆ ಇಂದಿರಾನಗರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇನ್ನು ಮತ್ತೊಂದೆಡೆ ಬೆಂಗಳೂರು ಉತ್ತರ ತಾಲೂಕಿನ ಕಡಬಗೆರೆಯಲ್ಲಿ ಗೂಂಡಾ ಕಾಯ್ದೆಯಡಿ ಕುಖ್ಯಾತ ರೌಡಿಶೀಟರ್ ರಮೇಶ್ ಅಲಿಯಾಸ್ ಪಾಯ್ಸನ್ ರಾಮ(51) ಅರೆಸ್ಟ್ ಮಾಡಲಾಗಿದೆ. ಆರೋಪಿ ಹತ್ಯೆ, ಹತ್ಯೆ ಯತ್ನ ಸೇರಿ 28 ಕೇಸ್‌ನಲ್ಲಿ ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ. ಮಾದನಾಯಕನಹಳ್ಳಿ ಪೊಲೀಸರಿಂದ ರಮೇಶ್ ಅರೆಸ್ಟ್.
ಇದನ್ನೂ ಓದಿ: Basavaraj Bommai: ಬಸವರಾಜ ಬೊಮ್ಮಾಯಿ ಆಯ್ಕೆಯ ಮೂಲಕ ತನಗೆ ಹಿಡಿಶಾಪ ಹಾಕಿದ ಸ್ವಾಮೀಜಿಗಳಿಗೆ ತಿರುಗೇಟು ನೀಡಿದೆಯೇ ಬಿಜೆಪಿ?