Basavaraj Bommai: ಬಸವರಾಜ ಬೊಮ್ಮಾಯಿ ಆಯ್ಕೆಯ ಮೂಲಕ ತನಗೆ ಹಿಡಿಶಾಪ ಹಾಕಿದ ಸ್ವಾಮೀಜಿಗಳಿಗೆ ತಿರುಗೇಟು ನೀಡಿದೆಯೇ ಬಿಜೆಪಿ?

Karnataka Politics: ಆದರೆ ಈವರೆಗೆ ಯಡಿಯೂರಪ್ಪರಿಂದ ಅಧಿಕಾರ ಕಸಿದುಕೊಂಡ ಹೈಕಮಾಂಡ್​ಗೆ ಶಾಪ ಹಾಕಿದ ಸ್ವಾಮೀಜಿಗಳಲ್ಲಿ ಸಾದರ ಲಿಂಗಾಯತ ಸಮುದಾಯದ ಯಾವುದೇ ಸ್ವಾಮೀಜಿಯೂ ಇದ್ದಿರಲಿಲ್ಲ. ಈ ಸಮುದಾಯದ ಪ್ರಮುಖರಾದ ಸಿರಿಗೆರೆ ಸ್ವಾಮೀಜಿ ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹಾಕುವ ಯತ್ನದಲ್ಲಿ ಭಾಗಿಯಾಗಿರಲಿಲ್ಲ.

Basavaraj Bommai: ಬಸವರಾಜ ಬೊಮ್ಮಾಯಿ ಆಯ್ಕೆಯ ಮೂಲಕ ತನಗೆ ಹಿಡಿಶಾಪ ಹಾಕಿದ ಸ್ವಾಮೀಜಿಗಳಿಗೆ ತಿರುಗೇಟು ನೀಡಿದೆಯೇ ಬಿಜೆಪಿ?
ಸಾಂದರ್ಭಿಕ ಚಿತ್ರ
Follow us
Guruganesh Bhat
| Updated By: Skanda

Updated on: Jul 28, 2021 | 6:56 AM

ಅಂತೂ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿಯ ಘೋಷಣೆಯಾಗಿದೆ. ಬಿಜೆಪಿ ಹೈಕಮಾಂಡ್ ಅಳೆದೂ ತೂಗಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಹೆಸರನ್ನು ಘೋಷಿಸಿದ್ದಾರೆ. ಬಸವರಾಜ ಬೊಮ್ಮಾಯಿ ಹೆಸರು ಘೋಷಣೆಯ ಹಿಂದೆ ನಾನಾ ಲಾಜಿಕ್​ಗಳು ಕೆಲಸ ಮಾಡಿರುವ ಕುರಿತು ಮಾತುಗಳು ಕೇಳಿಬರುತ್ತಿದೆ. ಮತ್ತು ಅವೆಲ್ಲವೂ ಕುತೂಹಲಕಾರಿಯೂ ಆಗಿವೆ ಎಂಬುದು ವಿಶೇಷ.

ಲಿಂಗಾಯತ ಸಮುದಾಯ (Lingayat Community) ಸದ್ಯ ಕರ್ನಾಟಕದಲ್ಲಿ ಬಿಜೆಪಿಯ ಬಹುದೊಡ್ಡ ವೋಟ್ ಬ್ಯಾಂಕ್. ಅದನ್ನು ಕಳೆದುಕೊಂಡಲ್ಲಿ ಬಿಜೆಪಿ ಯುದ್ಧಭೂಮಿಯಲ್ಲಿ  ನಿಂತ ಶಸ್ತ್ರಹೀನ ಸೈನಿಕನ ಸ್ಥಿತಿಗೆ ಬರಬಹುದಾದ ಅಪಾಯವೂ ಇತ್ತು. ಕರ್ನಾಟಕದಲ್ಲಿ ಬಿಜೆಪಿ ಪಕ್ಷದ ಭವಿಷ್ಯದಲ್ಲೂ ಉಳಿಸಿಕೊಳ್ಳಲು ಮತ್ತು ಬೆಳೆಸಿಕೊಳ್ಳಲು ಬಯಸಿದ ಕಾರಣಕ್ಕೇ ಬಿಜೆಪಿ ಹೈಕಮಾಂಡ್ (BJP) ಈ ನಿರ್ಣಯ ಕೈಗೊಂಡಿದೆ. ಆದರೆ ಲಿಂಗಾಯತ ಸಮುದಾಯದ ಇತರ ನಾಯಕರನ್ನು ಬಿಟ್ಟು ಬಸವರಾಜ ಬೊಮ್ಮಾಯಿ ಅವರನ್ನೇ ಏಕೆ ಆಯ್ಕೆ ಮಾಡಲಾಗಿದೆ? ಮತ್ತು ಈ ಆಯ್ಕೆಯಿಂದ ಬಿಜೆಪಿ ಹೈಕಮಾಂಡ್ ಏನನ್ನು ಹೇಳಹೊರಟಿದೆ ಎಂಬುದು ಸದ್ಯ ಕರ್ನಾಟಕದ ಮಟ್ಟಿಗೆ ಮಿಲಿಯನ್ ಡಾಲರ್ ಪ್ರಶ್ನೆ.

ಹೊಸ ಸಿಎಂ ಬಸವರಾಜ ಬೊಮ್ಮಾಯಿ ಸಾದರ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಈ ಸಮುದಾಯ ಜನರು ರಾಜ್ಯದ ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ, ಹಾವೇರಿ ಶಿವಮೊಗ್ಗ, ಗದಗ, ಕೊಪ್ಪಳ, ಹಾಸನ, ಧಾರವಾಡ ಜಿಲ್ಲೆಗಳಲ್ಲಿ ಸಣ್ಣ ಮತ್ತು ದೊಡ್ಡ ಪ್ರಮಾಣದಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ವಿಶಾಲ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಜನ ಸಮುದಾಯದ ನಾಯಕನನ್ನೇ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ ಬಿಜೆಪಿ ಹೈಕಮಾಂಡ್.

ಇದರೆಲ್ಲದ ಜತೆಗೆ ಇನ್ನೊಂದು ಕುತೂಹಲಕಾರಿ ಅಂಶವಿದೆ. ಬಿ.ಎಸ್.ಯಡಿಯೂರಪ್ಪ ಅವರಂತೆಯೇ ಬಸವರಾಜ ಬೊಮ್ಮಾಯಿ ಅವರೂ ಸಹ ಲಿಂಗಾಯತ ಸಮುದಾಯದವರೇ. ಇಂದು ಮಧ್ಯಾಹ್ನದವರೆಗೂ ಬಿ.ಎಸ್.ಯಡಿಯೂರಪ್ಪ ಅವರನ್ನು ಸಮರ್ಥಿಸಿಕೊಂಡು, ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿದ ಕಾರಣಕ್ಕೆ ಬಿಜೆಪಿಗೆ ಶಾಪ ಹಾಕಿದ ಸ್ವಾಮೀಜಿಗಳ ಕೋಪತಾಪ ಇಳಿಯದೇ ಇರದು. ಆದರೆ ಈವರೆಗೆ ಯಡಿಯೂರಪ್ಪರಿಂದ ಅಧಿಕಾರ ಕಸಿದುಕೊಂಡ ಹೈಕಮಾಂಡ್​ಗೆ ಶಾಪ ಹಾಕಿದ ಸ್ವಾಮೀಜಿಗಳಲ್ಲಿ ಸಾದರ ಲಿಂಗಾಯತ ಸಮುದಾಯದ ಯಾವುದೇ ಸ್ವಾಮೀಜಿಯೂ ಇದ್ದಿರಲಿಲ್ಲ. ಈ ಸಮುದಾಯದ ಪ್ರಮುಖರಾದ ಸಿರಿಗೆರೆ ಸ್ವಾಮೀಜಿ ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹಾಕುವ ಯತ್ನದಲ್ಲಿ ಭಾಗಿಯಾಗಿರಲಿಲ್ಲ. ತನ್ನ ಮೇಲೆ ಆರೋಪಗಳ ಸುರಿಮಳೆಯನ್ನೇ ಮಾಡಿದ ಸ್ವಾಮೀಜಿಗಳಿಗೆ ಬಸವರಾಜ ಬೊಮ್ಮಾಯಿ ಆಯ್ಕೆಯ ಮೂಲಕ ಎರಡು ಕಾರ್ಯಗಳನ್ನು ಬಿಜೆಪಿ ಹೈಕಮಾಂಡ್ ಸಾಧಿಸಿದೆ ಎಂದು ಸ್ಪಷ್ಟವಾಗಿ ಹೇಳಬಹುದು. ಇಡೀ ಲಿಂಗಾಯತ ಸಮುದಾಯ ಸ್ವಾಮೀಜಿಗಳು ಬಿಜೆಪಿ ಹೈಕಮಾಂಡ್​ಗೆ ಸವಾಲು ಹಾಕಿದ್ದರು. ಆದರೆ ಬಸವರಾಜ ಬೊಮ್ಮಾಯಿ ಘೋಷಣೆಯಿಂದ ಲಿಂಗಾಯತ ಸಮುದಾಯದಲ್ಲಿ ಎದುರು ಬಿದ್ದಿದ್ದ ಸ್ವಾಮೀಜಿಗಳು ತಣ್ಣಗಾದಂತಿದೆ. ಬಿಜೆಪಿ ಹೈಕಮಾಂಡ್ ತನಗೆ ಹಿಡಿಶಾಪ ಹಾಕಿದ ಸ್ವಾಮೀಜಿಗಳನ್ನೂ ತಣ್ಣಗಾಗಿಸಿದೆ. ಮತ್ತು ತನಗೆ ಬೇಕಿದ್ದನ್ನೇ ಸಾಧಿಸಿಕೊಂಡಿದೆ.

ಬಸವರಾಜ ಬೊಮ್ಮಾಯಿ ಆಯ್ಕೆಯ ಹಿಂದೆ ಇನ್ನೂ ಕೆಲವು ಅಂಶಗಳು ಸಹ ಕೆಲಸ ಮಾಡಿರುವುದು ಸ್ಪಷ್ಟ. ಬಸವರಾಜ ಬೊಮ್ಮಾಯಿ ಅವರಿಗೆ ಆಡಳಿತದ ಅನುಭವವಿದೆ. ಅವರು 2 ಬಾರಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಮೂರು ಬಾರಿ ಶಾಸಕರಾಗಿಯೂ, ಜಲಸಂಪನ್ಮೂಲ ಇಲಾಖೆ, ಗೃಹ ಮತ್ತು ಸಂಸದೀಯ ಇಲಾಖೆಗಳನ್ನೂ ನಿಭಾಯಿಸದ ಅವರು ತಮ್ಮ ರಾಜಕೀಯ ಜೀವನದಲ್ಲಿ ಯಾವುದೇ ವಿವಾದವಿಲ್ಲ ಸೃಷ್ಟಿಸಿಕೊಂಡಿರಲಿಲ್ಲ. ಇವೆಲ್ಲವೂ ಬಿಜೆಪಿ ಹೈಕಮಾಂಡ್​ ಕಣ್ಣಿಗೆ ಬಸವರಾಜ ಬೊಮ್ಮಾಯಿ ಅವರ ತೂಕ ಹೆಚ್ಚಿಸಲು ಕಾರಣವಾಗಿರುವುದಂತೂ ಸತ್ಯ.

ಇದನ್ನೂ ಓದಿ: 

Basavaraj Bommai: ಯಡಿಯೂರಪ್ಪ ಉತ್ತರಾಧಿಕಾರಿ ಬಸವರಾಜ ಬೊಮ್ಮಾಯಿ, ಹೋರಾಟದ ಹಾದಿಯಲ್ಲಿ ಅರಳಿದ ನಾಯಕ

ಚಿತ್ರನೋಟ: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದುಕಿನ ಮಹತ್ವದ ಕ್ಷಣಗಳು

(New Chief Minister Basavaraj Bommai Did the BJP hits Lingayat Community Swamijis an analysis)

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್