AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕಾಮನಬಿಲ್ಲು ಬಣ್ಣದ ಹೆಬ್ಬಾವನ್ನು ಎಂದಾದರೂ ನೋಡಿದ್ದೀರಾ?

ಕಾಮನಬಿಲ್ಲಿನಂತೆ ಕಾಣುತ್ತಿರುವ ಹೆಬ್ಬಾವಿನ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕ್ಯಾಲಿಫೋರ್ನಿಯಾದ ಸರಿಸೃಪ ಮೃಗಾಲಯದ ಸಂಸ್ಥಾಪಕ ಜೇ ಬ್ರೂವರ್ ದೈತ್ಯಾಕಾರದ ಹೆಬ್ಬಾವಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Viral Video: ಕಾಮನಬಿಲ್ಲು ಬಣ್ಣದ ಹೆಬ್ಬಾವನ್ನು ಎಂದಾದರೂ ನೋಡಿದ್ದೀರಾ?
TV9 Web
| Updated By: shruti hegde|

Updated on:Aug 06, 2021 | 2:34 PM

Share

ಜಗತ್ತಿನಲ್ಲಿ ಸರಿಸೃಪಗಳ ಅನೇಕ ಪ್ರಬೇಧಗಳಿವೆ. ಕೆಲವನ್ನು ನೋಡಿರಬಹುದು. ಇನ್ನು ಕೆಲವು ಹಾವುಗಳ ಬಣ್ಣ ಅಚ್ಚರಿ ಮೂಡಿಸುವಂತಿರುತ್ತದೆ. ಇದೀಗ ವೈರಲ್ ಆದ ಹಾವಿನ ಫೋಟೋದಲ್ಲಿ ಗಮನಿಸುವಂತೆ ಕಾಮನಬಿಲ್ಲಿನಂತೆಯೇ ಮೈ ಬಣ್ಣವನ್ನು ಹೊಂದಿದೆ. ಸುಂದರವಾಗಿ ಕಾಣಿಸುವ ಹಾವಿಗೆ ಬಣ್ಣ ಹಚ್ಚಿದಂತೆ ಅನಿಸುತ್ತಿದೆ. ಆದರೆ ಹೆಬ್ಬಾವಿನ ನಿಜವಾದ ಮೈ ಬಣ್ಣವಿದು.

ಕಾಮನಬಿಲ್ಲಿನಂತೆ ಕಾಣುತ್ತಿರುವ ಹೆಬ್ಬಾವಿನ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕ್ಯಾಲಿಫೋರ್ನಿಯಾದ ಸರಿಸೃಪ ಮೃಗಾಲಯದ ಸಂಸ್ಥಾಪಕ ಜೇ ಬ್ರೂವರ್ ದೈತ್ಯಾಕಾರದ ಹೆಬ್ಬಾವಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ಹಂಚಿಕೊಂಡ ಫೋಟೋ ಇದೀಗ ಮತ್ತೆ ವೈರಲ್ ಆಗಿದೆ. ಅಪರೂಪದಲ್ಲಿ ಅಪರೂಪದ ಹೆಬ್ಬಾವಿನ ಬಣ್ಣ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಹೆಬ್ಬಾವಿನ ಫೋಟೋಗೆ 20 ಮಿಲಿಯನ್ ವೀಕ್ಷಣೆಗಳು ಲಭ್ಯವಾಗಿವೆ. 998 ಸಾವಿರ ಲೈಕ್ಸ್​ಗಳು ಲಭಿಸಿವೆ. ಪ್ರಾಣಿಗಳ ಇಂತಹ ಅದ್ಭುತ ಫೋಟೋಗಳನ್ನು ಜ್ರೇ ಬೂಬರ್ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ವಿಡಿಯೋದಲ್ಲಿ ಗಮನಿಸುವಂತೆ ಅವರು ಹಾವನ್ನು ಹಿಡಿದಿರುವುದನ್ನು ನೋಡಬಹುದು.

ನಿಜವಾಗಿಯೂ ಆಶ್ಚರ್ಯವಾಗುತ್ತಿದೆ ಎಂದು ಕೆಲವುರು ಹೇಳಿದ್ದಾರೆ. ಇನ್ನು ಕೆಲವರು ಬಣ್ಣ ಅತ್ಯಂತ ಸಂದರವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಹೆಬ್ಬಾವಿನ ಬಣ್ಣ ನೋಡಿ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

Python Rescued : ಗಿಡ ಗಂಟೆಗಳ ಮಧ್ಯೆ ಬೇಟೆಗಾಗಿ ಹೊಂಚು ಹಾಕುತ್ತಿದ್ದ ಹೆಬ್ಬಾವು ಸೆರೆ

ಅಬ್ಬಾ! ಮನೆಯ ಮೆಟ್ಟಿಲ ಕೆಳಗೆ ಹೆಬ್ಬಾವು ಪ್ರತ್ಯಕ್ಷ.. ಹಾವನ್ನು ನೋಡಿ ಹೌಹಾರಿದ ಮನೆ ಮಂದಿ

(Rainbow python video goes viral in social media)

Published On - 2:34 pm, Fri, 6 August 21