ತರಬೇತಿ ಪಡೆಯುವಾಗ ಉಚಿತವಾಗಿ ಡ್ರಾಪ್ ನೀಡುತ್ತಿದ್ದ ಟ್ರಕ್ ಚಾಲಕರಿಗೆ ಉಡುಗೊರೆ ನೀಡಿದ ಮೀರಾಬಾಯಿ ಚಾನು

ಮೀರಾಬಾಯಿ ಚಾನು: ನಿಮ್ಮ ಜಿವನದಲ್ಲಿ ಸಹಾಯ ಮಾಡಿದ ಯಾರನ್ನೂ ನೀವು ಮರೆಯಲಿಲ್ಲ. ಅವರಿಗೆ ಉಡುಗೊರೆ ನೀಡಿ ಕೃತಜ್ಞತೆ ಸಲ್ಲಿಸಿದ್ದೀರಿ. ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ ಎಂದು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.

ತರಬೇತಿ ಪಡೆಯುವಾಗ ಉಚಿತವಾಗಿ ಡ್ರಾಪ್ ನೀಡುತ್ತಿದ್ದ ಟ್ರಕ್ ಚಾಲಕರಿಗೆ ಉಡುಗೊರೆ ನೀಡಿದ ಮೀರಾಬಾಯಿ ಚಾನು
Follow us
TV9 Web
| Updated By: shruti hegde

Updated on:Aug 06, 2021 | 12:05 PM

ಸಹಾಯ ಮಾಡಿದವರಿಗೆ ಕೃತಜ್ಞತೆ ಸಲ್ಲಿಸುವುದು ಸುಂದರ ಭಾವನೆಗಳಲ್ಲಿ ಒಂದಾಗಿದೆ. ಕಷ್ಟದ ಸಮಯದಲ್ಲಿ ಸಹಾಯ ಮಾಡಿದವರಿಗೆ ನಾವು ಎಂದಿಗೂ ಕೃತಜ್ಞರಾಗಿರಲೇಬೇಕು. ಅಂದಹಾಗೆ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಮೀರಾಬಾಯಿ ಚಾನು ಗೆದ್ದು ಬೆಳ್ಳಿ ಪದಕ ಪಡೆದರು. ಅವರ ಕನಸು ನನಸಾಗಲು ತರಬೇತಿ ಸಮಯದಲ್ಲಿ ಸಹಾಯ ಮಾಡುತ್ತಿದ್ದ ಟ್ರಕ್ ಚಾಲಕರಿಗೆ ಮೀರಾಬಾಯಿ ಚಾನು ಉಡುಗೊರೆ ನೀಡಿ ಕೃತಜ್ಞತೆ ಸಲ್ಲಿಸಿದ್ದಾರೆ.

ಮೀರಾಬಾಯಿ ಚಾನು ತರಬೇತಿ ಪಡೆಯಲು ಅದೆಷ್ಟೋ ದೂರ ಕ್ರಮಿಸಬೇಕಿತ್ತು. ಅವರ ಹಳ್ಳಿಯಿಂದ 30 ಕಿ.ಮೀ ದೂರದಲ್ಲಿರುವ ಕ್ರೀಡಾ ಅಕಾಡೆಮಿಗೆ ತಲುಪಲು ಕಷ್ಟವಾಗುತ್ತಿತ್ತು. ಯಾವುದೇ ಸೌಕರ್ಯಗಳು ಕೂಡಾ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಮೀರಾಬಾಯಿ ಚಾನು ಅವರಿಗೆ ಟ್ರಕ್ ಚಾಲಕರು ಡ್ರಾಪ್ ನೀಡುತ್ತಿದ್ದರು. ಅವರಲ್ಲಿ ಯಾವುದೇ ಹಣ ಪಡೆಯದೇ ಉಚಿತವಾಗಿ ಸಹಾಯ ಮಾಡುತ್ತಿದ್ದ ಟ್ರಕ್ ಚಾಲಕರನ್ನು ಗುರುತಿಸಿ ಮೀರಾಬಾಯಿ ಚಾನು ಉಡುಗೊರೆ ನೀಡಿ ಕೃತಜ್ಞತೆ ತಿಳಿಸಿದ್ದಾರೆ.

ತಮಗೆ ಮಾಡಿದ ಸಹಾಯವನ್ನು ಮರೆಯದೇ ಮೀರಾಬಾಯಿ ಚಾಲಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಸುಮಾರು 150 ಟ್ರಕ್ ಚಾಲಕರಿಗೆ ಉಡುಗೊರೆ ನಿಡಿದ್ದಾರೆ. ಕಷ್ಟದ ಸಮಯದಲ್ಲಿ ಸಹಾಯ ಮಾಡಿ ಕನಸನ್ನು ನನಸು ಮಾಡಲು ಹುರಿದುಂಬಿಸಿದ ಚಾಲಕರ ಬಗ್ಗೆ ಮಾತನಾಡುತ್ತಾ ಕೆಲ ಸಮಯ ಭಾವುಕರಾಗಿದ್ದಾರೆ.

ತರಬೇತಿ ಪಡೆಯುವಾಗ ಮನೆಯಿಂದ ಅದೆಷ್ಟೋ ದೂರ ಕ್ರಮಿಸಬೇಕಿತ್ತು. ಆ ಸಮಯದಲ್ಲಿ ನನಗೆ ಸಹಾಯ ಮಾಡಿದ ಟ್ರಕ್ ಚಾಲಕರಿಗೆ ನಾನು ಎಂದೂ ಕೃತಜ್ಞಳಾಗಿರುತ್ತೇನೆ. ಅವರ ಆಶೀರ್ವಾದ ನನ್ನ ಮೇಲೆ ಸದಾ ಇರಬೇಕು. ನನ್ನ ಕಷ್ಟದ ಸಮಯದಲ್ಲಿ ಅವರು ಸಹಾಯ ಮಾಡಿದ್ದಾರೆ ಎಂದು ಮೀರಾಬಾಯಿ ಚಾನು ಮಾತನಾಡಿದ್ದಾರೆ.

ನಿಮ್ಮ ಜಿವನದಲ್ಲಿ ಸಹಾಯ ಮಾಡಿದ ಯಾರನ್ನೂ ನೀವು ಮರೆಯಲಿಲ್ಲ. ಅವರಿಗೆ ಉಡುಗೊರೆ ನೀಡಿ ಕೃತಜ್ಞತೆ ಸಲ್ಲಿಸಿದ್ದೀರಿ. ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ ಎಂದು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:

Mirabai Chanu: ಸಿನಿಮಾ ಆಗಲಿದೆ ಮೀರಾಬಾಯಿ ಚಾನು ಜೀವನ: ಯಾವ ಭಾಷೆಯಲ್ಲಿ ಬರಲಿದೆ ಗೊತ್ತಾ?

ಒಲಿಂಪಿಕ್ಸ್​​ನಲ್ಲಿ ಪದಕ ಗೆದ್ದ ಲವ್ಲಿನಾ, ಪಿ.ವಿ.ಸಿಂಧು, ಮೀರಾಬಾಯಿ ಚಾನುರಿಗೆ ಅಮುಲ್​ ಅಭಿನಂದನೆ..

Published On - 12:01 pm, Fri, 6 August 21

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ