Upanishads: ಪೋಲಂಡ್​ನ ವಿಶ್ವವಿದ್ಯಾನಿಲಯವೊಂದರ ಲೈಬ್ರರಿ ಗೋಡೆಯಲ್ಲಿವೆ ಉಪನಿಷತ್ ಬರಹಗಳು!

Upanishads: ಪೋಲಂಡ್​ನ ವಾರ್ಸಾ ವಿಶ್ವವಿದ್ಯಾಲಯದ ಲೈಬ್ರರಿ ಗೋಡೆಯಲ್ಲಿ ಉಪನಿಷತ್ ಬರಹಗಳನ್ನು ಕೆತ್ತಲಾಗಿದೆ. ಈಗ ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Upanishads: ಪೋಲಂಡ್​ನ ವಿಶ್ವವಿದ್ಯಾನಿಲಯವೊಂದರ ಲೈಬ್ರರಿ ಗೋಡೆಯಲ್ಲಿವೆ ಉಪನಿಷತ್ ಬರಹಗಳು!
ಪೋಲಂಡ್​ನ ಭಾರತೀಯ ರಾಯಭಾರ ಕಚೇರಿ ಹಂಚಿಕೊಂಡಿರುವ ಚಿತ್ರ
Follow us
TV9 Web
| Updated By: Digi Tech Desk

Updated on:Aug 07, 2021 | 10:54 AM

ಪೋಲಂಡ್: ಪೋಲಂಡ್ ದೇಶದ ವಾರ್ಸಾ ವಿಶ್ವವಿದ್ಯಾಲಯದ ಲೈಬ್ರರಿ ಗೋಡೆಯಲ್ಲಿ ಉಪನಿಷತ್ ಬರಹಗಳನ್ನು ಕೆತ್ತಲಾಗಿದೆ. ಪೋಲಂಡ್​ನ ಭಾರತೀಯ ರಾಯಭಾರ ಕಛೇರಿಯು ಟ್ವಿಟರ್​ನಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದು, ಕಣ್ಣಿಗೆ ಎಂತಹ ಹಿತಕಾರಿಯಾದ ದೃಶ್ಯ ಎಂದಿದೆ. ಈ ದೃಶ್ಯವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದ್ದು, ಅದಕ್ಕೆ ಸುಂದರ ಬರಹವನ್ನೂ ಬರೆಯಲಾಗಿದೆ. ‘ವಾರ್ಸಾ ವಿಶ್ವವಿದ್ಯಾಲಯದ ಲೈಬ್ರರಿ ಗೋಡೆಯಲ್ಲಿ ಉಪನಿಷತ್​ನ ಬರಹಗಳನ್ನು ಕೆತ್ತಲಾಗಿದೆ. ಎಂತಹ ದೃಶ್ಯವಿದು! ಹಿಂದೂ ಧರ್ಮದ ಸಂಸ್ಕೃತಿಯನ್ನು ರೂಪಿಸಿರುವ ಉಪನಿಷತ್​ಗಳು ಹಿಂದೂ ತತ್ವಶಾಸ್ತ್ರದ ಪಠ್ಯಗಳಾಗಿವೆ’ ಎಂದು ಪೋಲಂಡ್​ನಲ್ಲಿ ಕಂಡ ದೃಶ್ಯದ ಜೊತೆಗೆ ಸಣ್ಣ ಪರಿಚಯಾತ್ಮಕ ಸಾಲುಗಳನ್ನೂ ಟ್ವೀಟ್​ ಮೂಲಕ ತಿಳಿಸಲಾಗಿದೆ.

ಭಾರತೀಯ ರಾಯಭಾರಿ ಕಛೇರಿ ಮಾಡಿರುವ ಟ್ವೀಟ್ ಇಲ್ಲಿದೆ:

ನೆಟ್ಟಿಗರಿಗೆ ಈ ದೃಶ್ಯ ಬಹಳ ಮುದವನ್ನು ನೀಡಿದ್ದು, ಟ್ವೀಟ್ ವೈರಲ್ ಆಗಿದೆ. ಉಪನಿಷತ್ ಪೋಲಂಡ್​ನ ಲೈಬ್ರರಿಯಲ್ಲಿ ಕೆತ್ತಲಾಗಿರುವ ಕುರಿತು ಹಲವರು ಹೆಮ್ಮೆಯ ಟ್ವೀಟ್​ಗಳನ್ನು ಮಾಡುತ್ತಿದ್ದು, ‘ಭಾರತ ಮರೆಯುತ್ತಿರುವ ಉನ್ನತ ಸಂಸ್ಕೃತಿಯನ್ನು ಜಗತ್ತು ಈಗ ಗುರುತಿಸುತ್ತಿದೆ’ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ‘ಯುವಕರಲ್ಲಿ ಉಪನಿಷತ್ ಕುರಿತು ಆಸಕ್ತಿ ಮೂಡಿಸಲು ಏನಾದರೂ ಮಾಡಬೇಕು’ ಎಂದು ಮತ್ತೊಬ್ಬರು ಬರೆದಿದ್ದಾರೆ.

ವೇದಗಳ ಕೊನೆಯ ಹಾಗೂ ನಾಲ್ಕನೆಯ ಭಾಗವನ್ನು ಉಪನಿಷತ್ತುಗಳು (ದೇವನಾಗರಿ ಲಿಪಿಯಲ್ಲಿ ಉಪನಿಷದ್) ಎಂದು ಕರೆಯಲಾಗುತ್ತದೆ. ಉಪನಿಷತ್ತಿನ ಹೆಚ್ಚಿನ ಭಾಗಗಳು ಗುರು ಶಿಷ್ಯರ ಸಂವಾದ ರೂಪದಲ್ಲಿವೆ. ಉಪನಿಷತ್ ಪದದ ಅರ್ಥವನ್ನು ಸರಳವಾಗಿ ಹೇಳುವುದಾದರೆ, ಗುರುವಿನ ಬಳಿ ಕುಳಿತು ಕೇಳಿಸಿಕೊಳ್ಳುವುದು ಎನ್ನಬಹುದು.

ಇದನ್ನೂ ಓದಿ:

ಅಮಿತಾಭ್​ ಬಚ್ಚನ್​ ಮನೆ ಹಾಗೂ ಮುಂಬೈನ 3 ರೈಲ್ವೇ ನಿಲ್ದಾಣಗಳಲ್ಲಿ ಬಾಂಬ್​ ಇರಿಸಿರುವುದಾಗಿ ಪೊಲೀಸರಿಗೆ ಕರೆ ಮಾಡಿದ ಅನಾಮಿಕ

ಮನೆ ಕಟ್ಟಲೆಂದು ಸೈಟ್ ಕೊಳ್ಳುವಾಗ ಹುಷಾರ್! ಅನಧಿಕೃತ ಬಡಾವಣೆ ಸೃಷ್ಟಿಸಿ ಮಾರುವವರಿದ್ದಾರೆ ಎಚ್ಚರ

(Warsa University Library wall engraved by Upanishads in Poland picture goes viral)

Published On - 10:05 am, Sat, 7 August 21