ಮನೆ ಕಟ್ಟಲೆಂದು ಸೈಟ್ ಕೊಳ್ಳುವಾಗ ಹುಷಾರ್! ಅನಧಿಕೃತ ಬಡಾವಣೆ ಸೃಷ್ಟಿಸಿ ಮಾರುವವರಿದ್ದಾರೆ ಎಚ್ಚರ

ಕಲಬುರಗಿ ನಗರಾಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇದೀಗ ಹದಿನೇಳು ಅನಧಿಕೃತ ಬಡಾವಣೆಗಳು ಇರುವುದನ್ನು ಪ್ರಾಧಿಕಾರದ ಸಿಬ್ಬಂದಿ ಪತ್ತೆಹಚ್ಚಿದ್ದಾರೆ.

ಮನೆ ಕಟ್ಟಲೆಂದು ಸೈಟ್ ಕೊಳ್ಳುವಾಗ ಹುಷಾರ್! ಅನಧಿಕೃತ ಬಡಾವಣೆ ಸೃಷ್ಟಿಸಿ ಮಾರುವವರಿದ್ದಾರೆ ಎಚ್ಚರ
ಸಾಂಕೇತಿಕ ಚಿತ್ರ
Follow us
TV9 Web
| Updated By: preethi shettigar

Updated on: Aug 07, 2021 | 8:39 AM

ಕಲಬುರಗಿ: ಮನೆ ಕಟ್ಟಿನೋಡು, ಮದುವೆ ಮಾಡಿನೋಡು ಎಂಬ ಮಾತಿದೆ. ಎರಡೂ ಕಷ್ಟಸಾಧ್ಯವಾದರೂ ಅದರಿಂದ ಸಿಗುವ ಆನಂದ ಮಾತ್ರ ಬೇರೆಯದ್ದೇ ಆಗಿರುತ್ತದೆ. ಸ್ವಂತದಾದ ಜಾಗ ಖರೀದಿಸಿ, ಅಲ್ಲಿ ಮನೆ ಕಟ್ಟಿಕೊಂಡು ನೆಮ್ಮದಿಯ ಜೀವನ ನಡೆಸಬೇಕು ಎಂಬುದು ಬಹುತೇಕರ ಕನಸಾಗಿರುತ್ತದೆ. ಆ ಕನಸು ನನಸು ಮಾಡಿಕೊಳ್ಳಲು ದಶಕಗಳ ಕಾಲ ಅನೇಕರು ಹೋರಾಟದ ಬದುಕು ನಡೆಸಿರುತ್ತಾರೆ. ಆದರೆ ನೀವು ಸೈಟ್ ಖರೀದಿಸುವ ಮುನ್ನ ತುಸು ಎಚ್ಚರ ವಹಿಸಲೇಬೇಕು. ಇಲ್ಲದಿದ್ದರೆ, ಅನಧಿಕೃತ ಬಡಾವಣೆಯಲ್ಲಿ ಸೈಟ್ ಖರೀದಿಸುವ ಅಪಾಯವೂ ಇರುತ್ತದೆ. ಹಾಗಾದಲ್ಲಿ ನಿಮಗೆ ತೊಂದರೆ ತಪ್ಪಿದಲ್ಲ. ಕಲಬುರಗಿ ನಗರದಲ್ಲಿ ಅನಧಿಕೃತ ಬಡಾವಣೆಗಳ ಹಾವಳಿ ಹೆಚ್ಚಾಗಿದ್ದು, ಅನೇಕರು ಅನಧಿಕೃತ ಬಡಾವಣೆಯಲ್ಲಿ ಸೈಟ್ ಖರೀದಿಸಿ ತೊಂದೆರೆಗೆ ಸಿಲುಕುತ್ತಿದ್ದಾರೆ.

ಕಲಬುರಗಿ ನಗರದಲ್ಲಿವೆ ಅನಧಿಕೃತ ಬಡಾವಣೆಗಳು ಕಲಬುರಗಿ, ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ. ನಾಲ್ಕು ಮೆಡಿಕಲ್ ಕಾಲೇಜು, ಎರಡು ವಿಶ್ವವಿದ್ಯಾಲಯ, ವಿಮಾನ ನಿಲ್ದಾಣವಿದೆ. ಹೆಚ್ಚಾಗಿ ಕೇಂದ್ರಸ್ಥಾನವಾಗಿರುವುದರಿಂದ ಕಲ್ಯಾಣ ಕರ್ನಾಟಕ ಭಾಗದ ಬಹುತೇಕ ವಿಭಾಗೀಯ ಕಚೇರಿಗಳು ಇಲ್ಲೇ ಇವೆ. ಈ ಭಾಗದಲ್ಲಿ ದೊಡ್ಡ ನಗರವಾಗಿ ಕಲಬುರಗಿ ವೇಗವಾಗಿ ಬೆಳೆಯುತ್ತಿದೆ. ಹೆಚ್ಚಿನ ಜನರು ಕಲಬುರಗಿ ನಗರದಲ್ಲಿ ವಾಸವಾಗಲು ಬಯಸುತ್ತಿದ್ದಾರೆ. ಇತ್ತೀಚೆಗೆ ಮಕ್ಕಳ ಶಿಕ್ಷಣ ಅಂತ ಅನೇಕರು ಹಳ್ಳಿಗಳಿಗೆ ಬೈ ಹೇಳಿ ನಗರದಲ್ಲಿ ವಾಸಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜತೆಗೆ ಕಲಬುರಗಿ ನಗರದಲ್ಲಿ ಸ್ವಂತದಾದ ಸೈಟ್ ಖರೀದಿಸಿ ಮನೆ ಕಟ್ಟಿಸಿಕೊಂಡು ಇಲ್ಲೇ ವಾಸವಾಗಲು ಅನೇಕರು ಮುಂದಾಗಿದ್ದಾರೆ. ಹೀಗಾಗಿ ಕಳೆದ ಕೆಲ ವರ್ಷಗಳಿಂದ ಕಲಬುರಗಿ ನಗರದ ಸುತ್ತಮುತ್ತಲಿನ ಭೂಮಿಗೆ ಬಂಗಾರದ ಬೆಲೆ ಬಂದಿದ್ದು, ಸೈಟ್​ಗಳ ಬೆಲೆ ದುಬಾರಿಯಾಗಿವೆ. ಇದರ ನಡುವೆ, ನಗರದ ಸುತ್ತಮುತ್ತ ಅನೇಕ ಕಡೆ ಅನಧಿಕೃತ ಬಡಾವಣೆಗಳು ತಲೆ ಎತ್ತಿವೆ. ಕಲಬುರಗಿ ನಗರಾಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇದೀಗ ಹದಿನೇಳು ಅನಧಿಕೃತ ಬಡಾವಣೆಗಳು ಇರುವುದನ್ನು ಪ್ರಾಧಿಕಾರದ ಸಿಬ್ಬಂದಿ ಪತ್ತೆಹಚ್ಚಿದ್ದಾರೆ. ನಗರದ ಸೇಡಂ ರಸ್ತೆ, ಆಳಂದ ರಸ್ತೆ, ಜೇವರ್ಗಿ ರಸ್ತೆ ಸೇರಿದಂತೆ ಅನೇಕ ಕಡೆ ಕಲಬುರಗಿ ನಗರಾಭಿವೃದ್ದಿ ಪ್ರಾಧಿಕಾರದ ಪರವಾನಗಿ ಪಡೆಯದೇ ಅನೇಕರು ಬಡಾವಣೆಗಳನ್ನು ಮಾಡಿದ್ದಾರೆ. ಜೊತೆಗೆ ಅನೇಕರು ಈಗಾಗಲೇ ಸೈಟ್​ಗಳ ಮಾರಾಟ ಕೂಡಾ ಮಾಡಿದ್ದಾರೆ.

ಸೈಟ್ ಖರೀದಿಸುವ ಮುನ್ನ ಇರಲಿ ಎಚ್ಚರ ಯಾರಾದ್ರು ಬಡಾವಣೆಗಳನ್ನು ಮಾಡಬೇಕಾದ್ರೆ ನಗರಾಭಿವೃದ್ದಿ ಪ್ರಾಧಿಕಾರದ ಅನುಮೋಧನೆ ಪಡೆಯುವದು ಕಡ್ಡಾಯವಾಗಿದೆ. ಆದ್ರೆ ಅನೇಕರು ಕೃಷಿ ಭೂಮಿ, ಕೃಷಿಯೇತರ ಭೂಮಿಯಾಗಿ ಪರಿವರ್ತನೆಯಾಗುವ ಮೊದಲೇ ಸೈಟ್​ಗಳನ್ನು ಮಾರಾಟ ಮಾಡಿದ್ದಾರೆ. ಇನ್ನು ಕೆಲವರು, ನಗರಾಭಿವೃದ್ದಿ ಪ್ರಾಧಿಕಾರದ ಅನುಮತಿ ಪಡೆಯದೇ, ಗ್ರಾಮ ಪಂಚಾಯತ್ನಲ್ಲಿ ಪರವಾನಿಗ ಪಡೆದಿದ್ದಾರೆ. ಕಲಬುರಗಿ ಸುತ್ತಮುತ್ತಲಿನ ಅನೇಕ ಗ್ರಾಮಗಳು, ಕಲಬುರಗಿ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಬರುತ್ತವೆ. ಹೀಗಾಗಿ ಗ್ರಾಮ ಪಂಚಾಯತ್​ಗಳ ಪರವಾನಗಿ ಬದಲಾಗಿ, ನಗರಾಭಿವೃದ್ದಿ ಪ್ರಾಧಿಕಾರದ ಅನುಮತಿ ಕಡ್ಡಾಯವಾಗಿ ಪಡೆಯಲೇಬೇಕು. ಪ್ರಾಧಿಕಾರದ ಅನುಮೋಧನ ಪಡೆಯದಿದ್ದರೆ, ಅವುಗಳಿಗೆ ಮಾನ್ಯತೆ ಇರೋದಿಲ್ಲಾ ಅಂತ ಅನೇಕ ಬಾರಿ ಕಲಬುರಗಿ ನಗರಾಭಿವೃದ್ದಿ ಪ್ರಾಧಿಕಾರದವರು ಸೂಚನೆ ನೀಡಿದರೂ ಕೂಡಾ ಅನೇಕರು ಪ್ರಾಧಿಕಾರದ ಪರವಾನಗಿ ಪಡೆಯದೇ, ಬಡಾವಣೆಗಳನ್ನು ಮಾಡಿ, ಸೈಟ್​ಗಳ ಮಾರಾಟ ಕೂಡಾ ಮಾಡಿದ್ದಾರೆ. ಇಂತಹ ಅನಧಿಕೃತ ಬಡಾವಣೆಯಲ್ಲಿ ಸೈಟ್ ಖರೀದಿಸಿದವರು ಮುಂದೆ ತೊಂದರೆಗೆ ಸಿಲಕುವದು ಗ್ಯಾರಂಟಿ. ಹೀಗಾಗಿ ನೀವು ಸೈಟ್ ಖರೀದಿಸುವ ಮುನ್ನ, ಬಡಾವಣೆ ಮಾಡಿರುವವರು, ಅಧಿಕೃತವಾಗಿ ನಗರಾಭಿವೃದ್ದಿ ಪ್ರಾಧಿಕಾರದಿಂದ ಪರವಾನಗಿ ಪಡೆದಿದ್ದಾರೆಯೇ? ಎಂದು ಯಾವುದೇ ಸಮಸ್ಯೆಗಳು ಇಲ್ಲದೇ ಇರುವದನ್ನು ಖಾತ್ರಿ ಮಾಡಿಕೊಂಡ ಮೇಲೆ ಸೈಟ್ ಖರೀದಿಸುವದು ಉತ್ತಮ. ಇಲ್ಲದಿದ್ದರೆ ದಶಕದ ಶ್ರಮ, ನೀರಲ್ಲಿ ಹೋಮ ಮಾಡಿದಂತೆ ಆಗುತ್ತದೆ.

ಕ್ರಿಮಿನಲ್ ಕೇಸ್ ಹಾಕಲು ಮುಂದಾದ ಕುಡಾ ಕಲಬುರಗಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ನಾಯಿಕೊಡೆಗಳಂತೆ ಇದೀಗ ಬಡಾವಣೆಗಳು ತಲೆ ಎತ್ತಿವೆ. ಅನೇಕರು ಅಧಿಕೃತವಾಗಿ ಬಡಾವಣೆ ನಿರ್ಮಾಣ ಮಾಡಿದ್ದರೆ, ಇನ್ನು ಅನೇಕರು ಅನಧಿಕೃತವಾಗಿ ಬಡಾವಣೆಗಳನ್ನು ನಿರ್ಮಾಣ ಮಾಡಿ, ಸೈಟ್ಗಳನ್ನು ಸುಳ್ಳು ಹೇಳಿ ಜನರಿಗೆ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಇಂತಹ ಅನಧಿಕೃತ ಬಡಾವಣೆಗಳನ್ನು ಗುರುತಿಸಿ, ಅದರ ಮಾಲೀಕರ ಮೇಲೆ ಕ್ರಿಮಿನಲ್ ಕೇಸ್ ಹಾಕಲು ಇದೀಗ ಕಲಬುರಗಿ ನಗರಾಭಿವೃದ್ದಿ ಪ್ರಾಧಿಕಾರ ಮುಂದಾಗಿದೆ. ಆ ಮೂಲಕ ಜನರಿಗೆ ಆಗುವ ವಂಚನೆಯನ್ನು ತಪ್ಪಿಸಲು ಮುಂದಾಗಿದೆ. ಈಗಾಗಲೇ ಅನಧಿಕೃತ ಬಡಾವಣೆಗಳನ್ನು ಗುರುತಿಸುವ ಕೆಲಸ ಪ್ರಾರಂಭವಾಗಿದ್ದು, ಮಾಲೀಕರ ಮೇಲೆ ಕ್ರಿಮಿನಲ್ ಕೇಸ್ ಹಾಕಲು ಪ್ರಾಧಿಕಾರ ಸಿದ್ದತೆ ನಡೆಸಿದೆ.

ಈ ಕುರಿತು ಟಿವಿ9 ಕನ್ನಡ ಡಿಜಿಟಲ್​ಗೆ ಪ್ರತಿಕ್ರಿಯಿಸಿರುವ ಕಲಬುರಗಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ದಯಾಘನ್ ಧಾರವಾಡಕರ್, ‘ಕಲಬುರಗಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕೆಲ ಬಡಾವಣೆಗಳನ್ನು ಅನಧಿಕೃತವಾಗಿ ನಿರ್ಮಾಣ ಮಾಡಲಾಗಿದೆ. ಅಂತಹ ಬಡಾವಣೆಗಳನ್ನು ಗುರುತಿಸುವ ಕೆಲಸ ಪ್ರಾರಂಭವಾಗಿದೆ. ನಗರಾಭಿವೃದ್ದಿ ಪ್ರಾಧಿಕಾರದಿಂದ ಅನುಮೋಧನೆ ಪಡೆಯದೇ, ಬಡಾವಣೆಗಳನ್ನು ನಿರ್ಮಾಣ ಮಾಡಿ, ಸೈಟ್ ಮಾರಾಟ ಮಾಡುತ್ತಿರುವ ಮಾಲೀಕರ ಮೇಲೆ ಕ್ರಿಮಿನಲ್ ಕೇಸ್ ಹಾಕಲಾಗುವುದು’ ಎಂದು ತಿಳಿಸಿದ್ದಾರೆ.

ಸ್ಥಳಿಯರಾದ ಹನಮಂತ್ ಟಿವಿ9 ಕನ್ನಡ ಡಿಜಿಟಲ್ ಜತೆಗೆ ಮಾತನಾಡಿ, ‘ಸ್ಥಳೀಯ- ನಗರದ ಸುತ್ತಮುತ್ತ ಬಡಾವಣೆಗಳು ನಾಯಿಕೊಡೆಗಳಂತೆ ತಲೆಎತ್ತಿವೆ. ಸಾಮಾನ್ಯ ಜನರಿಗೆ ಯಾವುದು ಅಧಿಕೃತ, ಯಾವುದು ಅನಧಿಕೃತ ಎಂಬುದು ಗೊತ್ತಾಗುತ್ತಿಲ್ಲ. ಮಾಲೀಕರು ಹತ್ತಾರು ಸುಳ್ಳು ಹೇಳಿ ಸೈಟ್ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಕಲಬುರಗಿ ನಗರಾಭಿವೃದ್ದಿ ಪ್ರಾಧಿಕಾರ, ಕಠಿಣ ಕ್ರಮ ಕೈಗೊಳ್ಳಬೇಕಿದೆ. ಬಡಾವಣೆ ನಿರ್ಮಾಣ ಮಾಡೋವರೆಗೆ ಸುಮ್ಮನಿರಬಾರದು. ಮೊದಲೇ ಅಕ್ರಮಕ್ಕೆ ಬ್ರೇಕ್ ಹಾಕುವ ಕೆಲಸ ಮಾಡಬೇಕಿದೆ’ ಎಂದು ಮನವಿ ಮಾಡಿದ್ದಾರೆ.

ವಿಶೇಷ ವರದಿ- ಸಂಜಯ್ ಚಿಕ್ಕಮಠ

ಇದನ್ನು ಓದಿ:  

ಯಾರು ನೀವು? ಎಲ್ಲಿಂದ ಬಂದವರು? ಕೊಪ್ಪಳ ಪೊಲೀಸರ ಪ್ರಶ್ನೆಗೆ ಉತ್ತರಿಸದೇ ಬ್ಯಾಗ್​ನಲ್ಲಿದ್ದ 17 ಲಕ್ಷ 50 ಸಾವಿರ ಬಿಟ್ಟು ನಾಪತ್ತೆಯಾದ ಅಪರಿಚಿತರು!

ತ್ರಿಪುರಾ ಗಡಿ ಭಾಗದಲ್ಲಿ ಉಗ್ರರ ಗುಂಡಿನ ದಾಳಿಗೆ ಕಲಬುರಗಿ ಯೋಧ ಹುತಾತ್ಮ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಕ್ರಿಯೆ

(Beware of creating and selling unauthorized sites when buying a site to build a house in Kalaburagi)

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ