Viral News: ಕದ್ದು ಮುಚ್ಚಿ ಇಲಿಗಳಿಗೆ ಆಹಾರ ನೀಡುತ್ತಿದ್ದ ಮಕ್ಕಳಿಗೆ ಪಾಠ ಕಲಿಸಲು ಅಪ್ಪನ ಐಡಿಯಾ ಕೇಳಿದ್ರೆ ಧಂಗಾಗ್ತೀರಾ!

ಕೋಣೆಗಳಲ್ಲಿ ಕಂಡ ಕಂಡಲ್ಲಿ ಇಲಿಗಳಿಗೂ ಸಹ ಆಹಾರವನ್ನು ಹಾಕುತ್ತಿದ್ದ ಆ ತುಂಟ ಮಕ್ಕಳಿಗೆ ಪಾಠ ಕಲಿಸಲು ತಂದೆ ಸಕತ್ ಪ್ಲಾನ್​ ಮಾಡಿದ್ದಾರೆ.

Viral News: ಕದ್ದು ಮುಚ್ಚಿ ಇಲಿಗಳಿಗೆ ಆಹಾರ ನೀಡುತ್ತಿದ್ದ ಮಕ್ಕಳಿಗೆ ಪಾಠ ಕಲಿಸಲು ಅಪ್ಪನ ಐಡಿಯಾ ಕೇಳಿದ್ರೆ ಧಂಗಾಗ್ತೀರಾ!
ಚಿತ್ರ ಕೃಪೆ: ಫೇಸ್​ಬುಕ್​
Follow us
TV9 Web
| Updated By: shruti hegde

Updated on:Aug 22, 2021 | 11:31 AM

ಮಕ್ಳಳ ರೂಮ್ ಕ್ಲೀನ್ ಮಾಡುವುದೆಂದರೆ ದೊಡ್ಡ ಸವಾಲೇ ಸರಿ! ಎಷ್ಟು ಹೇಳಿದರೂ ಸಹ ಮಕ್ಕಳು ತಮ್ಮ ಕೋಣೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಿದ್ಧರಿರುವುದಿಲ್ಲ. ಕೋಣೆಗಳಲ್ಲಿ ಕಂಡ ಕಂಡಲ್ಲಿ ಇಲಿಗಳಿಗೂ ಸಹ ಆಹಾರವನ್ನು ಹಾಕುತ್ತಿದ್ದ ಆ ತುಂಟ ಮಕ್ಕಳಿಗೆ ಪಾಠ ಕಲಿಸಲು ತಂದೆ ಸಕತ್ ಪ್ಲಾನ್​ ಮಾಡಿದ್ದಾರೆ. ಕೋಣೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಮಾಡಲು ಯೋಜಿಸಿದ ಐಡಿಯಾ ಕೇಳಿ ದ್ರೆ ಧಂಗಾಗೋದು ನಿಜ.

ಚಾಡ್ಮ್ಯಾಹಂಟ್ ಎನ್ನುವವರು, ತಮ್ಮ ಮಕ್ಕಳು ಇಲಿಗೆ ಆಹಾರ ಹಾಕುತ್ತಿರುವುದನ್ನು ತಪ್ಪಿಸಲು ಪ್ಲಾನ್ ಮಾಡಿರುವ ಕುರಿತಾಗಿ ಫೇಸ್ಬುಕ್​ನಲ್ಲಿ ಹಂಚಿಕೊಂಡಿದ್ದಾರೆ. ನಿಮಗೆ ಬೇಕಾಗಿರುವುದು ಕಪ್ಪು ಅಕ್ಕಿ ಅಷ್ಟೆ ಎಂದು ಹೇಳಿದ್ದಾರೆ.

ಸ್ನೇಹಿತರೆಲ್ಲಾ ಬಂದಾಗಲೂ ಇಲಿಗಳು ಕೋಣೆಯಲ್ಲಿ ಓಡಾಡುತ್ತಿದ್ದವು. ಮಕ್ಕಳು ಅವುಗಳಿಗೆ ಆಹಾರವನ್ನು ನೀಡುತ್ತಿದ್ದವು ಹಾಗಿಗಿಯೇ ಈ ಪ್ಲಾನ್ ಮಾಡಿದೆ. ಮಕ್ಕಳನ್ನು ಮಲಗಿಸಿದ ಬಳಿಕ ರೂಮಿನ ತುಂಬಾ ಕಪ್ಪು ಅಕ್ಕಿಯನ್ನು ಇರಿಸಿದೆ. ಬೆಳಿಗ್ಗೆ ಎದ್ದ ತಕ್ಷಣ ಅವುಗಳನ್ನು ನೋಡಿದ ಮಕ್ಕಳು, ಇಲಿಗಳ ಹಿಕ್ಕೆಯೆಂದು ಭಾವಿಸಿದರು. ಬಳಿಕ ಹೇಸಿಗೆಗೊಂಡರು. ಆ ನಂತರದಿಂದ ಇಲಿಗಳಿಗೆ ರೂಮಿನಲ್ಲಿ ಆಹಾರವನ್ನು ಹಾಕುತ್ತಿಲ್ಲ ಎಂದು ಹೇಳಿದ್ದಾರೆ.

ಅಂಗಡಿಗೆ ಹೋದೆ.. ಕಪ್ಪು ಅಕ್ಕಿಯನ್ನು ಖರೀದಿಸಿದೆ. ಮಕ್ಕಳು ಮಲಗಿದ ದಿಂಬುಗಳ ಪಕ್ಕ ಕೆಲವೊಂದಿಷ್ಟು ಅಕ್ಕಿ ಕಾಳುಗಳನ್ನು ಇರಿಸಿದೆ. ಕೋಣೆಯ ಮೂಲೆಯಲ್ಲಿಯೂ ಹರಡಿದೆ ಎಂದು ಹೇಳಿದ್ದಾರೆ. ಇದೀಗ ಪ್ರತಿನಿತ್ಯವೂ ಕೋಣೆಯನ್ನು ಸ್ವಚ್ಛಗೊಳಿಸುತ್ತಾರೆ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ಪೋಸ್ಟ್ 87,000ಕ್ಕೂ ಹೆಚ್ಚು ಲೈಕ್ಸ್​ ಪಡೆದುಕೊಂಡಿದೆ. ಮಕ್ಕಳು ತಮ್ಮ ಮನೆಯಲ್ಲಿಯೂ ಇಂತಹ ತಂತ್ರಗಳನ್ನು ಉಪಯೋಗಿಸುತ್ತಾರೆ ಎಂದು ಓರ್ವರು ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮಕ್ಕಳೂ ಸಹ ತುಂಟಾಟದವರು. ಈ ಐಡಿಯಾವನ್ನು ಖಂಡಿತವಾಗಿಯೂ ಮಾಡುತ್ತೇನೆ ಎಂದು ಇನ್ನೋರ್ವರು ಹೇಳಿದ್ದಾರೆ.

ಇದನ್ನೂ ಓದಿ:

Viral Video: ವ್ಯಕ್ತಿ ತಯಾರಿಸಿದ ವಾಟರ್​ಮೆಲಾನ್​ ಪಿಜ್ಜಾ ನೋಡಿ ತಯಾರಿಗೆ ಮುಂದಾದ ಆಸ್ಟ್ರೇಲಿಯಾ ಡಾಮಿನೋಸ್​!

Viral News: ಬೆಕ್ಕಿಗಾಗಿಯೇ ಈ ಬಂಗಲೆಯಲ್ಲಿದೆ ಎಸಿ ರೂಂ, ಬೆಡ್, ಕಾರ್ಟೂನ್ ಥಿಯೇಟರ್!

(Father plane trick for childrens clean their room)

Published On - 11:30 am, Sun, 22 August 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್