ಮಾಸ್ಕ್ ಧರಿಸಿ ಹಸೆಮಣೆ ಏರಿದ ಚಂದನ್ ಕುಮಾರ್-ಕವಿತಾ ಗೌಡ; ಲಾಕ್ಡೌನ್ ಮಧ್ಯೆಯೇ ಸಿಂಪಲ್ ವಿವಾಹ
Chandan Kumar Kavitha Gowda Marriage: ಕೊರೊನಾ ವೈರಸ್ ಮಿತಿ ಮೀತಿ ಹರಡುತ್ತಿರುವುದರಿಂದ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದೆ. ಅಲ್ಲದೆ, ಮದುವೆಗೆ 40 ಮಂದಿ ಮಾತ್ರ ಅತಿಥಿಗಳು ಬರಬಹುದು ಎಂದು ಹೇಳಿದೆ. ಇದೇ ನಿಯಮದಂತೆ ಚಂದನ್ ಜೋಡಿ ಮದುವೆ ಆಗಿದೆ.
ನಟ ಚಂದನ್ ಕುಮಾರ್ ಹಾಗೂ ನಟಿ ಕವಿತಾ ಗೌಡ ಏಪ್ರಿಲ್ 1ರಂದು ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಆದರೆ, ಮದುವೆ ದಿನಾಂಕದ ಬಗ್ಗೆ ಅವರು ಅಧಿಕೃತವಾಗಿ ಘೋಷಣೆ ಮಾಡಿರಲಿಲ್ಲ. ಈಗ ಲಾಕ್ಡೌನ್ ಮಧ್ಯೆಯೇ ಕೊವಿಡ್ ನಿಯಮ ಪಾಲಿಸಿ ಹಸೆಮಣೆ ಏರಿದ್ದಾರೆ. ಈ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕೊರೊನಾ ವೈರಸ್ ಮಿತಿಮೀರಿ ಹರಡುತ್ತಿರುವುದರಿಂದ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದೆ. ಅಲ್ಲದೆ, ಮದುವೆಗೆ 40 ಅತಿಥಿಗಳಿಗೆ ಅವಕಾಶ ನೀಡಿ ಆದೇಶ ಹೊರಡಿಸಿದೆ. ಇದೇ ನಿಯಮದಂತೆ ಚಂದನ್-ಕವಿತಾ ಜೋಡಿ ಮದುವೆ ಆಗಿದೆ. ಹಸೆಮಣೆ ಏರುವಾಗ ಅವರು ಮಾಸ್ಕ ಧರಿಸಿದ್ದು ವಿಶೇಷವಾಗಿತ್ತು. ಕೇವಲ ಆಪ್ತರಿಗೆ ಮಾತ್ರ ಮದುವೆಗೆ ಆಮಂತ್ರಣವಿತ್ತು.
‘ಮನೆ ಮದುವೆ, ಮದುವೆ ಮನೆ. ಗ್ಲೋರಿಯಸ್ ಆಗಿಲ್ಲ, ಆದರೆ, ಸಂತಸದಿಂದ ತುಂಬಿದೆ ಎಂದು ಚಂದನ್ ಬರೆದುಕೊಂಡಿದ್ದಾರೆ. ಚಂದನ್ ಮದುವೆ ಆಗಿರುವ ಫೋಟೋ ಹಾಕುತ್ತಿದ್ದಂತೆ ಅವರಿಗೆ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ ಬಂದಿದೆ.
View this post on Instagram
ಕಿರುತೆರೆ ಪ್ರೇಕ್ಷಕರ ವಲಯದಲ್ಲಿ ಸಖತ್ ಜನಪ್ರಿಯವಾಗಿದ್ದ ‘ಲಕ್ಷ್ಮೀ ಬಾರಮ್ಮ’ ಸೀರಿಯಲ್ನಲ್ಲಿ ಚಂದನ್ ಕುಮಾರ್ ಮತ್ತು ಕವಿತಾ ಜೋಡಿಯಾಗಿ ನಟಿಸಿದ್ದರು. ಆಗಿನಿಂದಲೇ ಅವರಿಬ್ಬರ ನಡುವೆ ಸ್ನೇಹ ಚಿಗುರಿತ್ತು. ನಂತರದ ದಿನಗಳಲ್ಲಿ ಅವರಿಬ್ಬರ ಆಪ್ತತೆ ಹೆಚ್ಚಾಯಿತು. ಆದರೆ ಎಂದೂ ಕೂಡ ಅವರು ತಮ್ಮ ಪ್ರೀತಿ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಏಪ್ರಿಲ್ 1ರಂದು ಕವಿತಾ ಜತೆ ಎಂಗೇಜ್ಮೆಂಟ್ ಮಾಡಿಕೊಳ್ಳುತ್ತಿರುವ ಬಗ್ಗೆ ಚಂದನ್ ಕುಮಾರ್ ಮಾರ್ಚ್ನಲ್ಲಿ ತಿಳಿಸಿದ್ದರು. ಈ ಮೂಲಕ ಪ್ರೀತಿ ವಿಚಾರವನ್ನು ಅಧಿಕೃತಗೊಳಿಸಿದ್ದರು. ಈಗ ಸಿಂಪಲ್ ಆಗಿ ಮದುವೆ ಆಗಿ ಹೊಸಬಾಳಿಗೆ ಕಾಲಿಟ್ಟಿದ್ದಾರೆ.
ಟಿವಿ9 ಕನ್ನಡ ಡಿಜಿಟಲ್ ಜತೆ ಚಂದನ್ ಮೊಟ್ಟ ಮೊದಲ ಬಾರಿಗೆ ಮದುವೆ ವಿಚಾರವನ್ನು ಮಾತನಾಡಿದ್ದರು. ತೆಲುಗಿನ ‘ಸಾವಿತ್ರಮ್ಮಗಾರಿ ಅಬ್ಬಾಯಿ’ ಧಾರಾವಾಹಿಯ 500ಕ್ಕೂ ಹೆಚ್ಚು ಎಪಿಸೋಡ್ಗಳಲ್ಲಿ ಚಂದನ್ ನಟಿಸಿದ್ದರು. ಆ ಧಾರಾವಾಹಿಯಲ್ಲಿ ಅವರ ಪಾತ್ರ ಅಂತ್ಯವಾಗಿತ್ತು. ಅದಕ್ಕೆ ಕಾರಣ ಏನು ಎಂಬ ಬಗ್ಗೆ ಕೇಳಿದ್ದಾಗ ಮದುವೆ ವಿಚಾರ ಹೇಳಿಕೊಂಡಿದ್ದರು. ‘ನಂಗೆ ಸ್ವಲ್ಪ ಫ್ರೀಡಂ ಬೇಕಾಗಿತ್ತು. ಮದುವೆ ಪ್ಲ್ಯಾನ್ ಕೂಡ ನಡೆಯುತ್ತಿದೆ. ಪರ್ಸನಲ್ ಜೀವನದ ಕಡೆಗೆ ಗಮನ ಹರಿಸಬೇಕು’ ಎಂದಿದ್ದರು.
ಇದನ್ನೂ ಓದಿ: Chandan – Kavitha: ಕವಿತಾ ಪ್ರೀತಿಗಾಗಿ ಮಧ್ಯರಾತ್ರಿ ಮನೆಗೆ ಹೋಗಿದ್ದ ಚಂದನ್! ಆಗಲೇ ಮೂಡಿತ್ತು ಅನುಮಾನ
Published On - 5:55 pm, Fri, 14 May 21