Chandan Kumar: ನಟ ಚಂದನ್​ ಕುಮಾರ್​ ಮೇಲೆ ಹಲ್ಲೆ: ವೈರಲ್​ ವಿಡಿಯೋದಲ್ಲಿದೆ ಕಪಾಳಮೋಕ್ಷದ ದೃಶ್ಯ

Chandan Kumar Assault: ತೆಲುಗು ಸೀರಿಯಲ್​ ತಂತ್ರಜ್ಞರ ಜತೆ ಚಂದನ್​ ಅವರು ಗಲಾಟೆ ​ ಮಾಡಿಕೊಂಡರು. ಮಾತಿಗೆ ಮಾತು ಬೆಳೆದು ಕೈ-ಕೈ ಮಿಲಾಯಿಸುವ ಹಂತಕ್ಕೆ ಪರಿಸ್ಥಿತಿ ಬಿಗಡಾಯಿಸಿತು.

TV9kannada Web Team

| Edited By: Madan Kumar

Aug 01, 2022 | 9:59 AM

ತೆಲುಗಿನ ‘ಶ್ರೀಮತಿ ಶ್ರೀನಿವಾಸ್​’ (Srimathi Srinivas) ಧಾರಾವಾಹಿ ಶೂಟಿಂಗ್​ ವೇಳೆ ಕನ್ನಡದ ನಟ ಚಂದನ್​ ಕುಮಾರ್​ ಮೇಲೆ ಹಲ್ಲೆ (Assault on Chandan Kumar) ಮಾಡಿದ ಘಟನೆ ಬೆಳಕಿಗೆ ಬಂದಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ತೆಲುಗು ಧಾರಾವಾಹಿಯಲ್ಲಿ ಚಂದನ್​ ಕುಮಾರ್ (Chandan Kumar)​ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದರು. ಆ ಸೀರಿಯಲ್​ ತಂತ್ರಜ್ಞರ ಜೊತೆ ಅವರು ಕಿರಿಕ್​ ಮಾಡಿಕೊಂಡರು. ಮಾತಿಗೆ ಮಾತು ಬೆಳೆದು ಕೈ-ಕೈ ಮಿಲಾಯಿಸುವ ಹಂತಕ್ಕೆ ಪರಿಸ್ಥಿತಿ ಬಿಗಡಾಯಿಸಿತು. ಈ ವೇಳೆ ಚಂದನ್​ ಕುಮಾರ್​ಗೆ ಕಪಾಳಮೋಕ್ಷ ಮಾಡಲಾಗಿದೆ. ಅವರ ಕೆನ್ನೆಗೆ ಹೊಡೆಯುತ್ತಿರುವ ದೃಶ್ಯ ಅಲ್ಲಿದ್ದವರ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ ಆಗಿದೆ.

 

Follow us on

Click on your DTH Provider to Add TV9 Kannada