ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡರಾ ರಶ್ಮಿಕಾ ಮಂದಣ್ಣ? ಗಮನ ಸೆಳೆದ ಉಂಗುರ
ರಶ್ಮಿಕಾ ಮಂದಣ್ಣ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅವರ ಬೆರಳಿನಲ್ಲಿರುವ ಉಂಗುರ ಗಮನ ಸೆಳೆದಿದೆ. ಇದರಿಂದಾಗಿ ವಿಜಯ್ ದೇವರಕೊಂಡ ಅವರೊಂದಿಗೆ ಅವರು ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಊಹಾಪೋಹಗಳು ಹಬ್ಬಿವೆ. ಆದರೆ ಇದಕ್ಕೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ದಕ್ಷಿಣ ಸಿನಿಮಾ ಮತ್ತು ಬಾಲಿವುಡ್‌ನಲ್ಲಿ ಹೆಸರು ಮಾಡಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna), ಒಂದಲ್ಲಾ ಒಂದು ಕಾರಣಕ್ಕಾಗಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಈಗ ನಟಿ ತಮ್ಮ ಖಾಸಗಿ ಜೀವನದ ಕಾರಣದಿಂದಾಗಿ ಸುದ್ದಿಗೆ ಬಂದಿದ್ದಾರೆ. ಪ್ರಸ್ತುತ, ರಶ್ಮಿಕಾ ಅವರ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಫೋಟೋದಲ್ಲಿ, ರಶ್ಮಿಕಾ ತಮ್ಮ ಬೆರಳಿನ ಉಂಗುರವನ್ನು ತೋರಿಸುತ್ತಿರುವುದು ಕಂಡುಬರುತ್ತದೆ… ರಶ್ಮಿಕಾ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆಯೇ? ಅಭಿಮಾನಿಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ಪ್ರಶ್ನೆ ಕೇಳುತ್ತಿದ್ದರೆ. ನಟ ವಿಜಯ್ ದೇವರಕೊಂಡ ಅವರೊಂದಿಗೆ ರಶ್ಮಿಕಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹಲವರು ಹೇಳುತ್ತಿದ್ದಾರೆ…
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ರಶ್ಮಿಕಾ ಮಂದಣ್ಣ ಅವರ ಈ ಫೋಟೋಗಳು ದುಬೈ ವಿಮಾನ ನಿಲ್ದಾಣದಿಂದ ಬಂದಿದ್ದು.ಅಲ್ಲಿ ಅವರು ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ (SIIMA) 2025 ಕ್ಕೆ ಆಗಮಿಸಿದ್ದರು. ಫೋಟೋದಲ್ಲಿ, ರಶ್ಮಿತಾ ಕ್ಯಾಶುಯಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ನಟಿ ಬಿಳಿ ಟಿ-ಶರ್ಟ್ ಮತ್ತು ನೀಲಿ ಜೀನ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ ನಟಿ ವಿಶೇಷ ಲುಕ್‌ನಲ್ಲಿ ಕಾಣಿಸಿಕೊಂಡರು. ಆದರೆ ರಶ್ಮಿಕಾ ಬೆರಳಿನಲ್ಲಿರುವ ಉಂಗುರ ಎಲ್ಲರ ಗಮನ ಸೆಳೆದಿದೆ. ಪ್ರಸ್ತುತ, ರಶ್ಮಿಕಾ ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಇಷ್ಟೇ ಅಲ್ಲ, ರಶ್ಮಿಕಾ ಗೆಳೆಯ ವಿಜಯ್ ದೇವರಕೊಂಡ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.
Touchdown Dubai! @iamRashmika is all set to dazzle at @siima Awards 2025 ✨ #SIIMA2025 #RashmikaMandanna pic.twitter.com/03GxIUIRf7
— Rashmika Trends (@RashmikaTrends) September 5, 2025
ಕಳೆದ ಕೆಲವು ವರ್ಷಗಳಿಂದ ರಶ್ಮಿಕಾ ಮತ್ತು ವಿಜಯ್ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಹಲವು ಬಾರಿ ಬಹಿರಂಗವಾಗಿದೆ. ಇಬ್ಬರೂ ಪಾರ್ಟಿಗಳು ಮತ್ತು ಊಟಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಆದರೆ ಅವರಿಬ್ಬರೂ ತಮ್ಮ ಸಂಬಂಧವನ್ನು ಎಲ್ಲರಿಗೂ ಒಪ್ಪಿಕೊಂಡಿಲ್ಲ.
ಇದನ್ನೂ ಓದಿ: ಅಲ್ಲು ಅರ್ಜುನ್ ಅತ್ಯುತ್ತಮ ನಟ, ರಶ್ಮಿಕಾ ಮಂದಣ್ಣ ಅತ್ಯುತ್ತಮ ನಟಿ
ಅವರಿಬ್ಬರ ಕೆಲಸದ ಬಗ್ಗೆ ಮಾತನಾಡುತ್ತಾ, ನಟ ವಿಜಯ್ ದೇವರಕೊಂಡ ‘ಕಿಂಗ್‌ಡಮ್’ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬಂದರು. ಈಗ ಅಭಿಮಾನಿಗಳು ನಟನ ಮುಂಬರುವ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ರಶ್ಮಿಕಾ ಶೀಘ್ರದಲ್ಲೇ ‘ದಿ ಗರ್ಲ್‌ಫ್ರೆಂಡ್’ ಮತ್ತು ‘ಥಾಮಾ’ ಚಿತ್ರಗಳ ಮೂಲಕ ತಮ್ಮ ಅಭಿಮಾನಿಗಳನ್ನು ಭೇಟಿಯಾಗಲಿದ್ದಾರೆ. ವಿಜಯ್ ಹಾಗೂ ರಶ್ಮಿಕಾ ಒಟ್ಟಾಗಿ ಸಿನಿಮಾ ಕೂಡ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







