AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶುರುವಾಯ್ತು ತೆಲುಗು ಬಿಗ್​​ಬಾಸ್ 9, ಸ್ಪರ್ಧಿಗಳು ಯಾರ್ಯಾರು? ಇದ್ದಾರೆ ಕನ್ನಡಿಗರು

Bigg Boss Telugu season 9: ಬಿಗ್​​ಬಾಸ್ ತೆಲುಗು ಸೀಸನ್ 09 ಇಂದಿನಿಂದ (ಸೆಪ್ಟೆಂಬರ್ 07) ಪ್ರಾರಂಭವಾಗಿದೆ. ಕನ್ನಡದ ಕೆಲವು ನಟಿಯರು ಸೇರಿದಂತೆ ಭಿನ್ನ ಕ್ಷೇತ್ರಗಳಿಗೆ ಸೇರಿದ ಸ್ಪರ್ಧಿಗಳು ಈ ಬಾರಿ ಬಿಗ್​​ಬಾಸ್ ಮನೆ ಸೇರಿಕೊಂಡಿದ್ದಾರೆ. ಈ ಬಾರಿ ಬಿಗ್​​ಬಾಸ್ ಮನೆ ಸೇರಿದ ಸ್ಪರ್ಧಿಗಳ ಪಟ್ಟಿ ಇಲ್ಲಿದೆ ನೋಡಿ...

ಶುರುವಾಯ್ತು ತೆಲುಗು ಬಿಗ್​​ಬಾಸ್ 9, ಸ್ಪರ್ಧಿಗಳು ಯಾರ್ಯಾರು? ಇದ್ದಾರೆ ಕನ್ನಡಿಗರು
Bigg Boss Telugu 9
ಮಂಜುನಾಥ ಸಿ.
|

Updated on: Sep 07, 2025 | 11:16 PM

Share

ಬಿಗ್​​ಬಾಸ್ ಸೀಸನ್ ಶುರುವಾಗಿದೆ. ಹಿಂದಿ, ಮಲಯಾಳಂ ಬಿಗ್​​ಬಾಸ್ ಹೊಸ ಸೀಸನ್​ಗಳು ಈಗಾಗಲೇ ಪ್ರಾರಂಭ ಆಗಿವೆ. ಹಿಂದಿಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಪ್ರಜಾಪ್ರಭುತ್ವದ ಬಿಗ್​​ಬಾಸ್ ಮಾಡಲಾಗುತ್ತಿದ್ದು ಮನೆಯ ನಿರ್ಣಯಗಳನ್ನು ಸ್ಪರ್ಧಿಗಳಿಗೇ ಬಿಡಲಾಗಿದೆ. ಇಂದು (ಸೆಪ್ಟೆಂಬರ್ 07) ತೆಲುಗು ಬಿಗ್​​ಬಾಸ್ ಪ್ರಾರಂಭ ಆಗಿದೆ. ಇದು ತೆಲುಗು ಬಿಗ್​​ಬಾಸ್​​ನ ಒಂಬತ್ತನೇ ಸೀಸನ್ ಆಗಿದ್ದು ಹಲವು ವಿಶೇಷತೆಗಳನ್ನು ಈ ಸೀಸನ್ ಒಳಗೊಂಡಿದೆ.

ತೆಲುಗು ಬಿಗ್​​ಬಾಸ್​​​ನಲ್ಲಿ ಶ್ರೀಸಾಮಾನ್ಯರನ್ನು ಪ್ರತಿ ಬಾರಿಯೂ ಮನೆಗೆ ಕಳಿಸಲಾಗುತ್ತದೆ. ಹೀಗೆ ಒಳಗೆ ಹೋಗಿದ್ದ ಸಾಮಾನ್ಯರು ಸಹ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸಿದ್ದಿದೆ. ಈ ಬಾರಿಯೂ ಸಹ ಸಾಮಾನ್ಯರನ್ನು ಬಿಗ್​​ಬಾಸ್ ಮನೆಯ ಒಳಗೆ ಕಳಿಸಲಾಗಿದೆ. ಈ ಬಾರಿ ‘ಅಗ್ನಿಪರೀಕ್ಷ’ ಎಂಬ ವಿಶೇಷ ಟಾಸ್ಕ್ ಇಟ್ಟು ಸಾಮಾನ್ಯರನ್ನು ಆಯ್ಕೆ ಮಾಡಿ ಮನೆಗೆ ಕಳಿಸಲಾಗಿದೆ.

ಇದರ ಜೊತೆಗೆ ಈ ಬಾರಿ ಎರಡು ಬಿಗ್​​ಬಾಸ್ ಹೌಸ್​​ಗಳಲ್ಲಿ ಆಟ, ಟಾಸ್ಕ್​​ಗಳು ನಡೆಯಲಿವೆ. ಈ ಬಗ್ಗೆ ನಾಗಾರ್ಜುನ ಅವರು ಆರಂಭದಲ್ಲಿಯೇ ಹೇಳಿದ್ದು, ಎರಡು ಹೌಸ್​​ಗಳನ್ನು ನಿರ್ಮಿಸಿ ಎರಡರಲ್ಲಿಯೂ ಜನರನ್ನು ಇಡಲಾಗಿದ್ದು, ಪರಸ್ಪರರ ಎದುರು ಟಾಸ್ಕ್​​ಗಳು ನಡೆಯಲಿವೆ. ಈ ಸೀಸನ್​​ರ ಆರಂಭದಲ್ಲಿ ಸ್ವತಃ ನಾಗಾರ್ಜುನ ಸಹ ಕೆಲವು ಟಾಸ್ಕ್​​ಗಳು ಮುಗಿಸಿಯೇ ಬಿಗ್​​ಬಾಸ್ ಮನೆಗೆ ಪ್ರವೇಶ ಮಾಡಿದ್ದು ವಿಶೇಷ.

ಈ ಬಾರಿ ತೆಲುಗು ಬಿಗ್​​ಬಾಸ್ ಮನೆ ಸೇರಿದ ಸ್ಪರ್ಧಿಗಳ ಪಟ್ಟಿ

ತನುಜಾ ಗೌಡ: ಕನ್ನಡದ ನಟಿ ಆಗಿರುವ ಇವರು, ತೆಲುಗಿನ ಟಿವಿ ಧಾರಾವಾಹಿಗಳ ಮೂಲಕ ತೆಲುಗು ರಾಜ್ಯದವರ ಮೆಚ್ಚಿನ ನಟಿಯಾಗಿದ್ದಾರೆ.

ಫ್ಲೋರಾ ಸೈನಿ: ಕನ್ನಡ, ತೆಲುಗು, ತಮಿಳು, ಮಲಯಾಳ, ಹಿಂದಿಯ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ಸ್ಟಾರ್ ನಟಿ ಫ್ಲೋರಾ ಸೈನಿ ಸಹ ಈ ಬಾರಿ ಸ್ಪರ್ಧಿಯಾಗಿದ್ದಾರೆ.

ಕಲ್ಯಾಣ್ ಪದಲ: ಸಾಮಾನ್ಯ ಸ್ಪರ್ಧಿ

ಜಬರ್ದಸ್ಥ್ ಎಮಾನ್ಯುಯೆಲ್: ಜಬರ್ದಸ್ಥ್ ಶೋ ಹಾಸ್ಯ ನಟ

ಶಾಸ್ತ್ರಿ ವರ್ಮ- ಕೋರಿಯಾಗ್ರಾಫರ್

ಹರಿತ ಹರೀಷ್-ಶ್ರೀಸಾಮಾನ್ಯ

ರಿತು ಚೌಧರಿ- ಸೋಷಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್

ಭರಣಿ ಶಂಕರ್- ಸಿನಿಮಾ ಹಾಗೂ ಧಾರಾವಾಹಿ ನಟ

ಡಿಮಾನ್ ಪವನ್- ಮೂರನೇ ಶ್ರೀಸಾಮಾನ್ಯ

ಸಂಜನಾ ಗಲ್ರಾನಿ- ಜನಪ್ರಿಯ ನಟಿ

ರಾಮು ರಾಥೋಡ್- ಜನಪದ ಗಾಯಕ

ಶ್ರೀಜಾ ದಮ್ಮು- ನಾಲ್ಕನೇ ಶ್ರೀಸಾಮಾನ್ಯ

ಸುಮನ್ ಶೆಟ್ಟಿ- ಜನಪ್ರಿಯ ಹಾಸ್ಯ ನಟ

ಪ್ರಿಯಾ ಶೆಟ್ಟಿ- ಐದನೇ ಶ್ರೀಸಾಮಾನ್ಯ

ಮನೀಷ್ ಮರ್ಯಾದ- ಉದ್ಯಮಿ, ಸಾಮಾನ್ಯ

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ