ಎ ಹರ್ಷ ಬಾಲಿವುಡ್‌ನಲ್ಲಿ ಸೆಟಲ್ ಆಗೋದು ಫಿಕ್ಸ್? ‘ಬಾಘಿ 4’ ಕಲೆಕ್ಷನ್ ಹೇಗಿದೆ?
ಕನ್ನಡ ಚಿತ್ರರಂಗದ ಪ್ರಸಿದ್ಧ ನಿರ್ದೇಶಕ ಎ. ಹರ್ಷ ಅವರು ‘ಬಾಘಿ 4’ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದ್ದಾರೆ. ಈ ಚಿತ್ರ ಉತ್ತಮ ಪ್ರಾರಂಭ ಪಡೆದಿದ್ದು, 3 ದಿನಗಳಲ್ಲಿ 30 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಈ ಯಶಸ್ಸಿನಿಂದಾಗಿ ಹರ್ಷ ಅವರು ಬಾಲಿವುಡ್‌ನಲ್ಲಿ ಸ್ಥಿರವಾಗಿ ನೆಲೆಸುವ ಸಾಧ್ಯತೆ ಹೆಚ್ಚಾಗಿದೆ.

ಎ. ಹರ್ಷ ಅವರು ಕನ್ನಡದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿ ಗಮನ ಸೆಳೆದಿದ್ದಾರೆ. ಈಗ ಅವರು ಹಿಂದಿಗೆ ಹಾರಿದ್ದಾರೆ. ಬಾಲಿವುಡ್‌ನಲ್ಲಿ ಟೈಗರ್ ಶ್ರಾಫ್ (Tiger Shroff) ಜೊತೆ ಅವರು ಕೆಲಸ ಮಾಡಿದ್ದಾರೆ. ‘ಬಾಘಿ 4’ ಚಿತ್ರವನ್ನು ಹರ್ಷ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮೂರು ದಿನಕ್ಕೆ ಉತ್ತಮ ಕಲೆಕ್ಷನ್ ಮಾಡಿದೆ. ಈ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಅವರು ಸೆಟಲ್ ಆಗೋದು ಫಿಕ್ಸಾ ಎನ್ನುವ ಪ್ರಶ್ನೆ ಮೂಡಿದೆ.
ಹರ್ಷ ಅವರು ಶಿವರಾಜ್ಕುಮಾರ್ ಜೊತೆ ‘ಭಜರಂಗಿ’, ‘ಭಜರಂಗಿ 2’ ರೀತಿಯ ಸಿನಿಮಾಗಳನ್ನು ಮಾಡಿದ್ದಾರೆ. ಅವರ ಎಲ್ಲಾ ಸಿನಿಮಾಗಳಲ್ಲೂ ಹನುಮಂತನ ಹೆಸರು ಇರುತ್ತಿತ್ತು ಅನ್ನೋದು ವಿಶೇಷ. ಆದರೆ, ಇದೇ ಮೊದಲ ಬಾರಿಗೆ ಅವರು ಹನುಮಂತನ ಹೆಸರು ಲಿಂಕ್ ಇಲ್ಲದೆ ಸಿನಿಮಾ ಮಾಡಿದ್ದಾರೆ. ಬಾಲಿವುಡ್ನ ಯಶಸ್ವಿ ಸರಣಿಯಾದ ‘ಬಾಘಿ’ ಸಿನಿಮಾದ ನಾಲ್ಕನೇ ಕಂತನ್ನು ಅವರು ನಿರ್ದೇಶನ ಮಾಡಿದ್ದಾರೆ.
‘ಬಾಘಿ 4’ ಸಿನಿಮಾದ ಬಜೆಟ್ 70 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಚಿತ್ರ ಮೂರು ದಿನಗಳಲ್ಲಿ 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಚಿತ್ರದ ಒಟಿಟಿ ಹಕ್ಕು ಹಾಗೂ ಟಿವಿ ಹಕ್ಕಿನ ಮಾರಾಟದಿಂದ ಒಂದಷ್ಟು ಹಣ ಬರಲಿದೆ. ಚಿತ್ರ ಮುಂದಿನ ಕೆಲವು ದಿನಗಳ ಕಾಲ ಒಳ್ಳೆಯ ಪ್ರದರ್ಶನ ಕಂಡರೆ, ನಿರ್ಮಾಪಕರಿಗೆ ಲಾಭ ತಂದುಕೊಡೋ ಸಾಧ್ಯತೆ ಇದೆ.
ಹಾಗಾದಲ್ಲಿ ಹರ್ಷ ಅವರು ಬಾಲಿವುಡ್‌ನಲ್ಲಿ ಸೆಟಲ್ ಆಗಲಿದ್ದಾರೆ. ಮೂಲಗಳ ಪ್ರಕಾರ ಟೈಗರ್ ಶ್ರಾಫ್ ಜೊತೆಯೇ ಅವರು ಒಂದೆರಡು ಸಿನಿಮಾ ಸಹಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಕೆಲವು ಬಾಲಿವುಡ್ ನಿರ್ಮಾಣ ಸಂಸ್ಥೆಗಳು ಅವರನ್ನು ಸಂಪರ್ಕಿಸುವ ಕೆಲಸ ಮಾಡುತ್ತಿವೆಯಂತೆ. ಹಾಗಾದಲ್ಲಿ ಅವರು ಬಾಲಿವುಡ್ನಲ್ಲೇ ಸೆಟಲ್ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಬಾಲಿವುಡ್‌ನಲ್ಲಿ ಗೆದ್ದ ಎ.ಹರ್ಷ; ‘ಬಾಘಿ 4’ ಚಿತ್ರದ ಮೊದಲ ದಿನದ ಕಲೆಕ್ಷನ್ ಇಷ್ಟೊಂದಾ?
‘ಬಾಘಿ 4’ ಸಿನಿಮಾಗೆ ಕೆಲವರು ನೆಗೆಟಿವ್ ವಿಮರ್ಶೆ ನೀಡಿದ್ದಾರೆ. ಈ ಚಿತ್ರದಲ್ಲಿ ಸಂಜಯ್ ದತ್ ಅವರು ವಿಲನ್ ಪಾತ್ರ ಮಾಡಿದ್ದಾರೆ. ಈ ಮೊದಲ ‘ಬಾಘಿ’ ಸರಣಿಗಿಂತ ಈ ಸಿನಿಮಾ ಭಿನ್ನವಾಗಿದೆ ಎಂಬ ಮಾತು ಕೇಳಿ ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








