AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರೋಗ್ಯದ ದೃಷ್ಟಿಯಿಂದ ಈ ವಸ್ತುಗಳನ್ನು ತ್ಯಜಿಸಿಯೇ ಬಿಟ್ಟಿದ್ದಾರೆ ಅಮಿತಾಭ್ ಬಚ್ಚನ್

ವೃದ್ಧಾಪ್ಯಕ್ಕೆ ಕಾಲಿಡುತ್ತಿದ್ದಂತೆ, ಅಮಿತಾಭ್​ ಬಚ್ಚನ್ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಿದ್ದಾರೆ. ಅವರು  ಕೆಲವು ಅಭ್ಯಾಸಗಳು ಮತ್ತು ವಿಷಯಗಳಿಂದ ದೂರ ಉಳಿದರು. ಅದು ಎಷ್ಟೇ ಪ್ರೀತಿಯದ್ದಾದರೂ ಆರೋಗ್ಯಕ್ಕೆ ಗಮನ ನೀಡುತ್ತಾರೆ. ಅಮಿತಾಭ್ ಯಾವ ವಿಷಯಗಳಿಂದ ದೂರವಿದ್ದಾರೆ ಎಂಬುದನ್ನು ತಿಳಿದುಕೊಳ್ಳಿ.

ಆರೋಗ್ಯದ ದೃಷ್ಟಿಯಿಂದ ಈ ವಸ್ತುಗಳನ್ನು ತ್ಯಜಿಸಿಯೇ ಬಿಟ್ಟಿದ್ದಾರೆ ಅಮಿತಾಭ್ ಬಚ್ಚನ್
ಅಮಿತಾಭ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Oct 07, 2025 | 6:30 AM

Share

ಅಮಿತಾಭ್ ಬಚ್ಚನ್ ಅವರಿಗೆ ಈಗ 83 ವರ್ಷ ವಯಸ್ಸು. ಈ ಏಜ್​ನಲ್ಲೂ ಅವರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಕೌನ್ ಬನೇಗಾ ಕರೋಡ್ಪತಿ’ ಶೋನ ಅಮಿತಾಭ್ ಬಚ್ಚನ್ ಅವರೇ ನಡೆಸಿಕೊಡುತ್ತಿದ್ದಾರೆ. ಇದು ದೇಶದ ಜನಪ್ರಿಯ ಶೋಗಳಲ್ಲಿ ಒಂದು. ಅಮಿತಾಭ್ ಬಚ್ಚನ್​ಗೆ ಸಾಕಷ್ಟು ಕಾಯಿಲೆಗಳು ಇವೆ. ಅವುಗಳನ್ನು ಮೆಟ್ಟಿ ನಿಂತಿದ್ದಾರೆ ಅವರು. ಈ ಕಾರಣಕ್ಕೆ ಅವರು ಪ್ರಮುಖ ವಿಚಾರಗಳನ್ನು ಅವಾಯ್ಡ್ ಮಾಡುತ್ತಾರೆ. ಆ ಬಗ್ಗೆ ಇಲ್ಲಿದೆ ವಿವರ.

ವೃದ್ಧಾಪ್ಯಕ್ಕೆ ಕಾಲಿಡುತ್ತಿದ್ದಂತೆ, ಅಮಿತಾಭ್​ ಬಚ್ಚನ್ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಿದ್ದಾರೆ. ಅವರು  ಕೆಲವು ಅಭ್ಯಾಸಗಳು ಮತ್ತು ವಿಷಯಗಳಿಂದ ದೂರ ಉಳಿದರು. ಅದು ಎಷ್ಟೇ ಪ್ರೀತಿಯದ್ದಾದರೂ ಆರೋಗ್ಯಕ್ಕೆ ಗಮನ ನೀಡುತ್ತಾರೆ. ಅಮಿತಾಭ್ ಯಾವ ವಿಷಯಗಳಿಂದ ದೂರವಿದ್ದಾರೆ ಎಂಬುದನ್ನು ತಿಳಿದುಕೊಳ್ಳಿ.

ಅಮಿತಾಭ್​ ಬಚ್ಚನ್ ಅವರಿಗೆ ಆಹಾರದ ಬಗ್ಗೆ ವಿಶೇಷ ಪ್ರೀತಿ ಇತ್ತು. ಅದರಲ್ಲೂ ಮಾಂಸಾಹಾರ ಇಷ್ಟವಾಗಿತ್ತು. ಆದರೆ ಅವರು ಮಾಂಸಾಹಾರ ತಿನ್ನುವುದನ್ನು ಸಂಪೂರ್ಣವಾಗಿ ಬಿಟ್ಟುಬಿಟ್ಟರು. ಇದಲ್ಲದೆ ಅನ್ನ ಊಟ ಮಾಡುವುದರಿಂದ ದೂರವಿದ್ದಾರೆ. ಮಧ್ಯಾಹ್ನ ಅಥವಾ ರಾತ್ರಿ ಊಟ ಇರಲಿ, ಅವರು ಅನ್ನ ತಿನ್ನುವುದೇ ಇಲ್ಲ.

ಇದನ್ನೂ ಓದಿ
Image
‘ಅಮೃತಧಾರೆ’ ಧಾರಾವಾಹಿಯಲ್ಲಿ ರೋಚಕ ತಿರುವು; ಮಗಳು ಗೌತಮ್​ಗೆ ಸಿಕ್ಕೇ ಬಿಟ್ಳು
Image
ಪುನೀತ್​ಗೆ ರಚಿತಾ ಅವಮಾನ ? ನಾಲಿಗೆ ಮೇಲೆ ಹಿಡಿತ ಇರಲಿ ಎಂದ ಫ್ಯಾನ್ಸ್
Image
‘ಕಾಂತಾರ: ಚಾಪ್ಟರ್ 1’ ಚಿತ್ರದ ಭಾನುವಾರದ ಕಲೆಕ್ಷನ್ ಇಷ್ಟೊಂದಾ?
Image
‘ನೀವು ತೋರಿದ ದ್ವೇಷ ನೋಡಿ ಬೇಸರವಾಯಿತು’; ನೋವು ಹೊರ ಹಾಕಿದ ನಮ್ರತಾ ಗೌಡ

ಅಮಿತಾಬ್ ಬಚ್ಚನ್ ಮದ್ಯಪಾನ ಅಥವಾ ಯಾವುದೇ ರೀತಿಯ ಜಂಕ್ ಫುಡ್ ಸೇವಿಸುವುದಿಲ್ಲ. ಅವರು ತಮ್ಮ ಕುಟುಂಬದಲ್ಲಿ ಯಾರಿಗೂ ಜಂಕ್ ಫುಡ್ ತಿನ್ನಲು ಬಿಡುವುದಿಲ್ಲ. ಅದು ದೇಹಕ್ಕೆ ತುಂಬಾನೇ ಹಾನಿ ಮಾಡುತ್ತದೆ ಎಂಬುದನ್ನು ಅವರು ಅರಿತಿದ್ದಾರೆ. ಈ ಕಾರಣದಿಂದಲೇ ಅವರು ಇದನ್ನು ತೊರೆಯುವ ನಿರ್ಧಾರ ಮಾಡಿದ್ದಾರೆ.

ಅಮಿತಾಭ್ ಅವರು ಯಾವಾಗಲೂ ಮನೆಯಲ್ಲಿ ಮಾಡಿದ ಆಹಾರವನ್ನು ತಿನ್ನುತ್ತಾರೆ. ಅವರ ಆಹಾರದಲ್ಲಿ ಯಾವುದೇ ಸಿಹಿತಿಂಡಿಗಳಿಲ್ಲ. ಅವರು ಹಲವು ವರ್ಷಗಳ ಹಿಂದೆಯೇ ಸಿಹಿ ತಿನ್ನುವುದನ್ನು ನಿಲ್ಲಿಸಿದ್ದರು. ಅವರಿಗೆ ಸಕ್ಕರೆ ಕಾಯಿಲೆ ಇದೆ. ಈ ಕಾರಣದಿಂದ ಸ್ವೀಟ್ ತಿನ್ನುವುದೇ ಇಲ್ಲ.

ಇದನ್ನೂ ಓದಿ: ರಜನಿಕಾಂತ್ ಉದಾಹರಣೆ ನೀಡಿ ಅಮಿತಾಭ್ ಬಚ್ಚನ್​​ಗೆ ಪಾಠ ಮಾಡಿದ ನೆಟ್ಟಿಗರು

ಅಮಿತಾಭ್ ತಮ್ಮ ದಿನಚರಿಯಲ್ಲಿ ಯೋಗ, ಧ್ಯಾನ ಮತ್ತು ವ್ಯಾಯಾಮಕ್ಕೆ ವಿಶೇಷ ಪ್ರಾಮುಖ್ಯತೆ ನೀಡಿದ್ದಾರೆ. ಬಿಗ್ ಬಿ ಪ್ರತಿದಿನ ಬೇಗನೆ ಮಲಗುತ್ತಾರೆ ಮತ್ತು ಬೇಗನೆ ಏಳುತ್ತಾರೆ. ಇದು ಮಾತ್ರವಲ್ಲದೆ, ಅವರು ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದ ತಮ್ಮ ಕುಟುಂಬಕ್ಕೂ ಸಮಯ ಮೀಸಲಿಡುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.