ಬಿಗ್ ಬಾಸ್ ಮನೆಯಲ್ಲಿ ಮಲ್ಲಮನ ಎದುರು ಬಯಲಾಯ್ತು ಗಿಲ್ಲಿ ನಟನ ಲವ್ ಮ್ಯಾಟರ್
ಮಾತಿನ ಮಲ್ಲಮ್ಮ ಅವರು ಈಗ ಬಿಗ್ ಬಾಸ್ ಸ್ಪರ್ಧಿ ಆಗಿದ್ದಾರೆ. ಅವರಿಗೆ ಸಾಥ್ ನೀಡಲು ಕಾಮಿಡಿ ಕಲಾವಿದ ಗಿಲ್ಲಿ ನಟ ಸಹ ಬಿಗ್ ಬಾಸ್ ಮನೆಯೊಳಗೆ ಇದ್ದಾರೆ. ಅವರಿಬ್ಬರ ನಡುವಿನ ಸಂಭಾಷಣೆ ಸಖತ್ ನಗು ಉಕ್ಕಿಸುತ್ತಿದೆ. ಅದಕ್ಕೊಂದು ಸ್ಯಾಂಪಲ್ ಇಲ್ಲಿದೆ ನೋಡಿ..
ಮಾತಿನ ಮೂಲಕವೇ ಗಮನ ಸೆಳೆದ ಮಲ್ಲಮ್ಮ (Mallamma) ಅವರು ಈಗ ಬಿಗ್ ಬಾಸ್ ಸ್ಪರ್ಧಿ. ಅವರಿಗೆ ಸಾತ್ ನೀಡಲು ಕಾಮಿಡಿ ಕಲಾವಿದ ಗಿಲ್ಲಿ ನಟ ಕೂಡ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಇಬ್ಬರ ನಡುವಿನ ಸಂಭಾಷಣೆ ಸಖತ್ ನಗು ಉಕ್ಕಿಸುತ್ತಿದೆ. ಅಕ್ಟೋಬರ್ 3ರ ಸಂಚಿಕೆಯಲ್ಲಿ ಮಲ್ಲಮ್ಮ ಎದುರು ಗಿಲ್ಲಿ ನಟ (Gilli Nata) ಅವರು ಲವ್ ಬಗ್ಗೆ ಮಾತನಾಡಿದ್ದಾರೆ. ಲವ್ ಹೇಗೆ ಹುಟ್ಟುತ್ತದೆ ಮತ್ತು ಪ್ರಪೋಸ್ ಮಾಡುವುದು ಹೇಗೆ ಎಂಬುದನ್ನು ಗಿಲ್ಲಿ ನಟ ವಿವರಿಸಿದ್ದಾರೆ. ಅದಕ್ಕೆ ಮಲ್ಲಮ್ಮ ಕೊಟ್ಟ ಪ್ರತಿಕ್ರಿಯೆ ಎಲ್ಲರಲ್ಲೂ ನಗು ಮೂಡಿಸಿತು. ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಹೊಸ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

