ಹುಲಿಗೆ ರಕ್ತದ ರುಚಿ ಸಿಕ್ಕಿದೆ, ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ಷಡ್ಯಂತ್ರ : ಬಿ ಎಲ್ ಸಂತೋಷ್
ಬಿ ಎಲ್ ಸಂತೋಷ್ ಅವರು ಧರ್ಮಸ್ಥಳದ ಮೇಲೆ ನಡೆಯುತ್ತಿರುವ ವೈಚಾರಿಕ ಆಕ್ರಮಣ ಕುರಿತು ಮಾತನಾಡಿದ್ದಾರೆ. ಇದು ಕೇವಲ ಧರ್ಮಸ್ಥಳಕ್ಕೆ ಸೀಮಿತವಲ್ಲ, ಉಡುಪಿ, ಶಬರಿಮಲೆ ಸೇರಿದಂತೆ ಹಲವು ಧಾರ್ಮಿಕ ಕೇಂದ್ರಗಳ ಮೇಲೆ ನಡೆಯುತ್ತಿರುವ ದಾಳಿ, ವಾಮಪಂಥೀಯ ಮತ್ತು ರಾಜಕೀಯ ಶಕ್ತಿಗಳು ನಂಬಿಕೆಗಳಿಗೆ ಸವಾಲು ಹಾಕುತ್ತಿವೆ, ಇದಕ್ಕೆ ತಕ್ಕ ಉತ್ತರ ನೀಡುವ ಕಾರ್ಯವಾಗಬೇಕಿದೆ ಎಂದು ಹೇಳಿದ್ದಾರೆ.
ಉಡುಪಿ, ಅ.3: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ( BL Santosh) ಅವರು ಇತ್ತೀಚೆಗೆ ಧರ್ಮಸ್ಥಳದ ಮೇಲೆ ಮಾಡುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಇದನ್ನು ವೈಚಾರಿಕ ಆಕ್ರಮಣ ಎಂದು ಹೇಳಿದ್ದಾರೆ. ಇಂತಹಅ ಅನೇಕ ದಾಳಿಗಳಾಗಿವೆ,ಅದರಲ್ಲಿ ಇದು ಒಂದು ಎಂದು ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಮಾತ್ರವಲ್ಲದೆ, ಕಳೆದ ಎರಡು-ಮೂರು ವರ್ಷಗಳ ಹಿಂದೆ ಉಡುಪಿ ಕೃಷ್ಣಮಠದ ಮೇಲೂ ಇದೇ ರೀತಿ ನಡೆದಿತ್ತು. ಆದರೆ ಇಷ್ಟು ದೊಡ್ಡ ಪ್ರಮಾಣದ ನಡೆದಿರಲಿಲ್ಲ ಎಂದರು. ಮುಂದೆ ಮೂಡುಬಿದ್ರೆ ಮತ್ತು ಇತರ ದೇವಸ್ಥಾನಗಳ ಮೇಲೂ ಇದೇ ರೀತಿಯ ಆಕ್ರಮಣಗಳು ನಡೆಯುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.ಈ ವಿದ್ಯಮಾನಗಳು ಒಂದು ರೀತಿ ಹುಲಿಗೆ ರಕ್ತದ ರುಚಿ ಸಿಕ್ಕಿದೆ ಎಂಬದಂತಿದೆ. ಕೆಲವು ವೈಚಾರಿಕ ವಾಮಪಂಥೀಯ ಮತ್ತು ರಾಜಕೀಯ ಶಕ್ತಿಗಳು ಶಬರಿಮಲೆ, ಈಶ ಆಶ್ರಮ ಮತ್ತು ಶನಿ ಶಿಂಗ್ಣಾಪುರದಲ್ಲಿ ಇಂತಹ ಆರೋಪಗಳುನ್ನು ಮಾಡಿದೆ. ಉಡುಪಿಯಲ್ಲೂ ಇದೇ ರೀತಿಯ ಪ್ರಯತ್ನ ನಡೆದಿತ್ತು. ಇದೀಗ ಧರ್ಮಸ್ಥಳದಲ್ಲೂ ಅದೇ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಕೃತ್ಯಗಳನ್ನು ಮಾಡುವವರಿಗೆ ಶಿಕ್ಷೆ ಆಗಬೇಕು, ಜೊತೆಗೆ ನಡೆಯುತ್ತಿರುವ ಅಪಪ್ರಚಾರಕ್ಕೂ ಸೂಕ್ತ ಶಿಕ್ಷೆಯಾಗಬೇಕು ಎಂದು ಹೇಳಿದರು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

