ಹುತಾತ್ಮನಾದ ಯೋಧನ ತಂಗಿಯ ಮದುವೆಯಲ್ಲಿ ಅಣ್ಣನ ಕರ್ತವ್ಯ ನಿಭಾಯಿಸಿದ ಸೈನಿಕರು; ಭಾವುಕಳಾದ ವಧು
ಹಿಮಾಚಲ ಪ್ರದೇಶದ ಸೈನಿಕರು ಯುವತಿಯೊಬ್ಬಳ ಮದುವೆಯಲ್ಲಿ ಸಹೋದರನ ಪಾತ್ರವನ್ನು ನಿಭಾಯಿಸುವ ಮೂಲಕ ಹುತಾತ್ಮನಾದ ತಮ್ಮ ಗೆಳೆಯನ ಕರ್ತವ್ಯ ನಿರ್ವಹಿಸಿದ್ದಾರೆ. 2024ರಲ್ಲಿ ಅರುಣಾಚಲ ಪ್ರದೇಶದಲ್ಲಿ ನಡೆದ ಯುದ್ಧದಲ್ಲಿ ತನ್ನ ಅಣ್ಣನನ್ನು ಕಳೆದುಕೊಂಡ ಯುವತಿಯ ವಿವಾಹದಲ್ಲಿ ಸಹೋದರನ ಪಾತ್ರವನ್ನು ಪೂರೈಸಲು ಹಿಮಾಚಲ ಪ್ರದೇಶದ ಸೈನಿಕರು ಹೆಜ್ಜೆ ಹಾಕಿದ್ದಾರೆ. ಈ ದೃಶ್ಯ ನೋಡಿದವರ ಕಣ್ತುಂಬಿ ಬಂದಿದ್ದು ಸುಳ್ಳಲ್ಲ.
ಸಿರ್ಮೌರ್, ಅಕ್ಟೋಬರ್ 3: 2024ರಲ್ಲಿ ಅರುಣಾಚಲ ಪ್ರದೇಶದಲ್ಲಿ ನಡೆದ ಯುದ್ಧದಲ್ಲಿ ತನ್ನ ಅಣ್ಣನನ್ನು ಕಳೆದುಕೊಂಡ ಯುವತಿಯ ವಿವಾಹದಲ್ಲಿ ಸಹೋದರನ ಪಾತ್ರವನ್ನು ಪೂರೈಸಲು ಹಿಮಾಚಲ ಪ್ರದೇಶದ (Himachal Pradesh) ಸೈನಿಕರು (Soldiers) ಹೆಜ್ಜೆ ಹಾಕಿದ್ದಾರೆ. ವಧು ಆರಾಧನಾ ಸಿರ್ಮೌರ್ ಜಿಲ್ಲೆಯ ತನ್ನ ಹುಟ್ಟೂರು ಭರ್ಲಿ ಗ್ರಾಮದಲ್ಲಿ ಕುಟುಂಬ, ಸ್ನೇಹಿತರು ಮತ್ತು ಹುತಾತ್ಮನಾದ ತನ್ನ ಅಣ್ಣನ ರೆಜಿಮೆಂಟ್ ಸದಸ್ಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಫೆಬ್ರವರಿ 2024ರಲ್ಲಿ ಅರುಣಾಚಲ ಪ್ರದೇಶದಲ್ಲಿ ನಡೆದ ಆಪರೇಷನ್ ಅಲರ್ಟ್ ಸಮಯದಲ್ಲಿ ಆಕೆಯ ಅಣ್ಣ ಆಶಿಶ್ ಕುಮಾರ್ ತಮ್ಮ ಪ್ರಾಣವನ್ನು ಅರ್ಪಿಸಿದ್ದರು.
ಹೀಗಾಗಿ, ಆರಾಧನಾಳ ಮದುವೆಯಲ್ಲಿ ಆಶಿಶ್ ಅವರ ಜೊತೆಗೆ ಕೆಲಸ ಮಾಡಿದ್ದ ಹಿಮಾಚಲದ ಸೈನಿಕರು ತಾವೇ ಮುಂದೆ ನಿಂತು ಆಕೆಯನ್ನು ಮಂಟಪಕ್ಕೆ ಕರೆತಂದು ಅಣ್ಣನ ಪಾತ್ರ ನಿಭಾಯಿಸಿದ್ದಾರೆ. ಈ ವೇಳೆ ವಧು ಕೂಡ ಅಣ್ಣನನ್ನು ನೆನೆದು ಭಾವುಕರಾಗಿದ್ದಾರೆ. ಮದುವೆಯ ನಂತರ ಆ ಸೈನಿಕರು ಆರಾಧನಾಳ ಗಂಡನ ಮನೆಗೂ ಹೋಗಿ ಅಲ್ಲಿ ಅಣ್ಣನ ಕರ್ತವ್ಯವನ್ನು ನಿಭಾಯಿಸಿದ್ದಾರೆ. ಈ ದೃಶ್ಯ ಆ ಮದುವೆಯಲ್ಲಿ ಭಾಗವಹಿಸಿದ್ದವರನ್ನೂ ಭಾವುಕರನ್ನಾಗಿಸಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

